LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ರಾಷ್ಟ್ರೀಯ ಅಧ್ಯಕ್ಷ ಅನ್ನೋಕೆ ನಾಚಿಕೆಯಾದರೆ ದಲಿತ ಅನ್ನಿ: ಖರ್ಗೆ ತೀವ್ರ ವಾಗ್ದಾಳಿ 

Advertisement

ಕಲಬುರಗಿ: "ನಿಮಗೆ ರಾಷ್ಟ್ರೀಯ ನಾಯಕ ಅನ್ನೋಕೆ ನಾಚಿಕೆಯಾದರೆ ನನ್ನನ್ನು ದಲಿತ ನಾಯಕ ಎನ್ನಿ" ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇವಲ ನನ್ನನ್ನಷ್ಟೇ ದಲಿತ ನಾಯಕ ಎಂದು ಬಿಂಬಿಸುವುದರ ಹಿಂದಿನ ಮಾನಸಿಕತೆಯನ್ನು ಪ್ರಶ್ನಿಸಿದರು.

ರಾಷ್ಟ್ರಗೀತೆ, ವಂದೇ ಮಾತರಂ ಬದಲಾವಣೆಗೆ ಖಂಡನೆ ನಿಮಗೆ ವಂದೇ ಮಾತರಂ ಸರಿಯಾಗಿ ಓದಲು ಬರುವುದಿಲ್ಲ, ಆದರೆ ಈಗ ಅದರಲ್ಲಿ ಬದಲಾವಣೆ ಮಾಡಲು ಹೊರಟಿದ್ದೀರಿ ಎಂದು ಖರ್ಗೆ ಟೀಕಿಸಿದರು. ಜನಗಣಮನದಲ್ಲೂ ಕೇವಲ ಒಂದೇ ಪ್ಯಾರಾವನ್ನು ಹಾಡುತ್ತಿದ್ದೇವೆ, ನಾಳೆ ಬೇರೆ ಸರ್ಕಾರ ಬಂದು ರಾಷ್ಟ್ರಗೀತೆಯನ್ನೇ ಬದಲಾಯಿಸಿದರೆ ದೇಶದ ಸ್ವಾಭಿಮಾನ ಎಲ್ಲಿ ಉಳಿಯುತ್ತದೆ? ವಂದೇ ಮಾತರಂ ಎರಡು ಪ್ಯಾರಾ ಹಾಡಿದರೆ 'ದಿಮಾಗಿ ನಕ್ಸಲ್' ಎಂದು ಕರೆಯುವ ವಾತಾವರಣ ಸೃಷ್ಟಿಸಲಾಗಿದೆ ಎಂದರು.

 ವೇದಿಕೆಯಲ್ಲಿದ್ದ ನಟ ಪ್ರಕಾಶ್ ರಾಜ್ ಅವರ ಹೆಸರನ್ನು ಉಲ್ಲೇಖಿಸಿ, "ನಿಮ್ಮನ್ನು ದಿಮಾಗಿ ನಕ್ಸಲ್ ಎಂದಾಗ ಹೌದು ಎಂದು ಕೈ ಎತ್ತಿದ್ದೀರಿ, ಆದರೆ ಇತಿಹಾಸವನ್ನು ಓದದವರು ಹೊಸ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ" ಎಂದು ಪ್ರತಿಪಾದಿಸಿದರು.

ಬ್ರಿಟಿಷರ ಗುಲಾಮರಾಗಿದ್ದವರು ಈಗ ಮಿಯಾವ್ ಎನ್ನುತ್ತಿದ್ದಾರೆ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬ್ರಿಟಿಷರ ಗುಲಾಮರಾಗಿದ್ದವರೇ ಇಂದು ನಮಗೆ ದೇಶಭಕ್ತಿಯ ಪಾಠ ಮಾಡುತ್ತಿದ್ದಾರೆ ಎಂದು ಖರ್ಗೆ ವಾಗ್ದಾಳಿ ನಡೆಸಿದರು.

ಸ್ವಾತಂತ್ರ್ಯ ಸಿಕ್ಕ ಬಳಿಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬನ್ನಿ, ಚುನಾವಣೆಗೆ ಸ್ಪರ್ಧಿಸಿ ಪ್ರಧಾನಿ ಅಥವಾ ಮುಖ್ಯಮಂತ್ರಿಯಾಗಿ ಎಂದು ಕರೆತಂದಿದ್ದೇ ಕಾಂಗ್ರೆಸ್. ಆದರೆ, "ನಾವು ತಂದು ಸಾಕಿದ ಬೆಕ್ಕು ಈಗ ನಮಗೇ ಮಿಯಾವ್ ಎನ್ನುತ್ತಿದೆ" ಎಂದು ವ್ಯಂಗ್ಯವಾಡಿದರು.

 ದೇಶದ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆರ್.ಎಸ್.ಎಸ್. ಅಡ್ಡೆಯನ್ನಾಗಿ ಮಾಡಲಾಗುತ್ತಿದ್ದು, ಮೂರು ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿದರೂ ಬುಲೆಟ್ ಟ್ರೈನ್ ತರಲಾಗದವರು ವಿದ್ಯಾರ್ಥಿಗಳ ಮೇಲೆ ಬುಲೆಟ್ ಹಾರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಸಚಿವ ಸತೀಶ್ ಜಾರಕಿಹೊಳಿಗೆ ಮನೆ ಮೇಲೆ ಇಡಿ ದಾಳಿ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ : ಕನ್ನಡ ಮಾಧ್ಯಮ ಶಾಲೆಗೆ ಅನುದಾನ ನೀಡುವಂತೆ ಆಗ್ರಹ ಸಿಎಂ ಸಂಪರ್ಕ ಸಲಹೆಗಾರರಾಗಿ ದೀಪಕ್ ತಿಮ್ಮಯ್ಯ ನೇಮಕ ನಾಳೆ ಡಿ. ಕೆ ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ 100 ದಿನ : ಮಹತ್ವದ ಘೋಷಣೆ ಸಾಧ್ಯತೆ ಕಾಸ್ಮೆಟಿಕ್ ಟ್ರೀಟ್‌ಮೆಂಟ್ ಬಳಿಕ ಉದ್ಯಮಿ ದುರ್ಮರಣ :7 ಕೋಟಿ ರೂ. ಚಿನ್ನದ ಶವಪೆಟ್ಟಿಗೆಯಲ್ಲಿ ಅಂತ್ಯಕ್ರಿಯೆ ನಾಳೆಯಿಂದ ಇಂಗ್ಲೆಂಡ್- ಪಾಕಿಸ್ತಾನ ತೃತೀಯ ಟೆಸ್ಟ್ ಶುರು ವಿಜಯೇಂದ್ರ ಏನೇ ಪಾದಯಾತ್ರೆ ಮಾಡಿದ್ರೂ ರಾಜ್ಯಾಧ್ಯಕ್ಷ ಸ್ಥಾನದಿಂದ ಔಟ್ ಫಿಕ್ಸ್ : ಯತ್ನಾಳ್ ಡಿಕೆಶಿ ಸರ್ಕಾರಕ್ಕೆ 100 ದಿನದ ಸಂಭ್ರಮ : ಡಿ. ಕೆ ಶಿವಕುಮಾರ್ ಗೆ ಹೈಕಮಾಂಡ್ ಬುಲಾವ್ಸರ್ವಜನಾಂಗದ ಹಿತಕ್ಕಾಗಿ ಭಗವಂತನೇ ಸೃಷ್ಟಿಸಿದ ಯೋಜನೆ: ಮೃತ್ಯುಂಜಯ ದೇಶೀಕೇಂದ್ರ ಶ್ರೀ ಶ್ಲಾಘನೆಮಾನ್ವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆ ಒಕ್ಕೂಟದ ವತಿಯಿಂದ ಶಿಕ್ಷಕರ ದಿನಾಚರಣೆ.  ಶ್ರೀ ರಾಜಾ ಸುಭಾಷ್ ಚಂದ್ರ ನಾಯಕ್