Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಡವರ ಗುಡಿಸಲುಗಳಿಗೆ ಕೈ ಹಾಕಿದರೆ ಉಗ್ರ ಸ್ವರೂಪ ಪ್ರತಿಭಟನೆ ಖಚಿತ!ಸುರೇಶ ಗೊಬ್ಬರಕಲ್

Advertisement

ಸಿಂಧನೂರು : ಬಡ ಕುಟುಂಬಗಳನ್ನುಒಕ್ಕಲೆಬ್ಬಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದ್ದು ಇಂತಹ ಕ್ರಮಗಳು ನಡೆದರೆ ನಿವಾಸಿಗಳು ಮತ್ತು ಸಂಘಟಕರು ಉಗ್ರ ಸ್ವರೂಪದ ಪ್ರತಿಭಟನೆಗಳನ್ನು ನಡೆಸುವುದು ಖಚಿತ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಹೆಚ್ ಶಿವರಾಮೇಗೌಡ ಬಣದ) ತಾಲೂಕ ಅಧ್ಯಕ್ಷ ಸುರೇಶ್ ಗೊಬ್ಬರಕಲ್ ತಿಳಿಸಿದರು.
 

ನಗರ ಪ್ರದೇಶ ವ್ಯಪ್ತಿಯಲ್ಲಿ ಬರುವ ಗೋರೆಬಾಳ, ವೆಂಕಟೇಶ್ವರ ಕ್ಯಾಂಪ್ ಮದ್ಯ ತುಂಗಭದ್ರ ಎಡದಂಡೆ ಕಾಲುವೆಗೆ ಹೊಂದಿಕೊಂಡಿರುವ 36ನೇ ಕಾಲುವೆ ಮದ್ಯ ಸುಮಾರು 40 ರಿಂದ 50 ವರ್ಷಗಳಿಂದ ವಾಸವಾಗಿರುವ ಬಡ ಕೂಲಿಕಾರರ ಕುಟುಂಬಗಳು,ರಸ್ತೆ ಡಾಂಬರೀಕರಣದ ನೆಪದಲ್ಲಿ ಕಾಲುವೆ ದಡದ ಪಕ್ಕದಲ್ಲಿ ವಾಸವಾಗಿರುವ ನೂರಾರು ಬಡ ಕುಟುಂಬಗಳ ಕೂಲಿ- ನಾಲೆ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ ಒಂದು ವೇಳೆ ಶೆಡ್ ಗಳನ್ನು ತರುವುಗೊಳಿಸಿದರೆ, ಶೆಡ್ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವುಗೊಳಿಸಿ ಎಂದು ಗಾಂಧಿನಗರದ ಗಾಂಧಿ ವೃತ್ತದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ತಾಲೂಕ  ಲೋಕೋಪಯೋಗಿ ಇಲಾಖೆ ಎ ಇ ಇ, ಹಾಗೂ ನೀರಾವರಿ ಇಲಾಖೆ ತುಂಗಭದ್ರಾ ಎಡದಂಡೆ ಕಾಲುವೆ ಉಪ ವಿಭಾಗ ನಂ -3 ಸಿಂಧನೂರು ಅವರಿಗೆ ಮನವಿ ಪತ್ರ ಸಲ್ಲಿಸಿದರು.
 

ಈ ಸಂದರ್ಭದಲ್ಲಿ: ತಾಲೂಕ ಅಧ್ಯಕ್ಷ ಜಿ, ಸುರೇಶ್ ಗೊಬ್ಬರಕಲ್, ತಾಲೂಕು ಉಪಾಧ್ಯಕ್ಷ ಹನುಮೇಶ್  ತಿಪ್ಪನಹಟ್ಟಿ, ನಗರ ಘಟಕ ಅಧ್ಯಕ್ಷ ಆಂಜನೇಯ ದೇಸಾಯಿ, ತಾಲೂಕ ಸಂಚಾಲಕ ಮೈಬುಬ್ ಸಾಬ್, ಸೇರಿದಂತೆ ಖಾದರ್ ಖಾನ್, ಬಸವರಾಜ ಹೂಗಾರ್, ಬಾಬು ಕಲಂದರ್, ಹನುಮಂತ, ಮಂಜು,ಸೇರಿದಂತೆ ಇನ್ನು ಅನೇಕರು ಧರಣಿಯಲ್ಲಿ ಭಾಗವಹಿಸಿದ್ದರು


ರದಿ:ಬಸವರಾಜ ಬುಕ್ಕನಹಟ್ಟಿ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST