ಪಾವಗಡ : ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ಗ್ಯಾದಿಗುಂಟೆ ಗ್ರಾಮದ ತೋಟಿ ಇನಾಂ ಜಮೀನಿನ ಮರು ಮಂಜೂರಾತಿ ಪ್ರಕ್ರಿಯೆಯಲ್ಲಿ ಅರ್ಹ ಹಿಸ್ಸೇದಾರರನ್ನು ಕೈಬಿಟ್ಟು ವಂಚಿಸಲಾಗಿದೆ ಎಂದು ' ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ರಾಜ್ಯ ಅಧ್ಯಕ್ಷ ಡಾ.ಕೆ.ಎಂ.ಸಂದೇಶ್. ಅವರು ದಿನಾಂಕ.17/08/26 ಸೋಮವಾರರಂದು ನಾಗಲಮಡಿಕೆ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಶ್ರೀರಂಗಪುರ ಗ್ರಾಮದಲ್ಲಿ ಜಮೀನಿನ ಹತ್ತಿರ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ಗ್ರಾಮದ ಸರ್ವೇ ನಂಬರ್ 83ರಲ್ಲಿರುವ 42 ಎಕರೆ 34 ಗುಂಟೆ ಖುಷ್ಕಿ ಹಾಗೂ ಸರ್ವೇ ನಂಬರ್ 49ರಲ್ಲಿರುವ 1 ಎಕರೆ 2 ಗುಂಟೆ ತರಿ ಇನಾಂ ಜಮೀನಿಗೆ ಮೂಲಪುರುಷರಾದ ನರಸಿಂಹ, ನರಸಿಗ, ಮುತ್ಯಾಲಿಗ ಮತ್ತು ಲಕ್ಷ್ಮಿಗ ಎಂಬ ನಾಲ್ವರು ಬರಬರ್ದಾರರಿದ್ದು, ತಲಾ 1/4 ಭಾಗದಂತೆ ಜಂಟಿಯಾಗಿ ಅನುಭವಿಸಿಕೊಂಡು ಬರುತ್ತಿದ್ದರು ನಡೆದಿದ್ದೇನು.
'ಕರ್ನಾಟಕ ವಿಲೇಜ್ ಆಫೀಸರ್ಸ್ ಅಬಾಲಿಶನ್ ಆಕ್ಟ್ 1961' ರಡಿ ಮರು ಮಂಜೂರಾತಿ ಪಡೆಯಲು ಸರ್ಕಾರ ಅವಕಾಶ ನೀಡಿದ್ದ.
ಸಂದರ್ಭದಲ್ಲಿ, ಒಂದನೇ ಬರಾಬರ್ದಾರ ನರಸಿಂಹ ಕುಟುಂಬಕ್ಕೆ ಸೇರಿರುವ ಎ.ಕೆ. ಪೆದ್ದಕದರಪ್ಪನ ಹೆಂಡತಿ ರಾಮಕ್ಕನಿಗೂ ಸಹ ಮೋಸ ಮಾಡಿರುತ್ತಾರೆ. ಹಾಗೂ
ಎರಡನೇ ಬರಬರ್ದಾರ ನರಸಿಗನ ಮೊಮ್ಮಗ ಸುಬ್ಬರಾಯಪ್ಪ ಎಂಬುವವರು ಉಳಿದ ಹಿಸ್ಸೇದಾರರಿಗೆ ಮಾಹಿತಿ ನೀಡದೆ 1968ರಲ್ಲಿ ಏಕಪಕ್ಷೀಯವಾಗಿ ಅರ್ಜಿ ಸಲ್ಲಿಸಿದ್ದರು. ತಹಶೀಲ್ದಾರ್ ನ್ಯಾಯಾಲಯದಲ್ಲಿ ಸುಳ್ಳು ವಂಶವೃಕ್ಷ ನೀಡಿ, 1984ರಲ್ಲಿ ಮರು ಮಂಜೂರಾತಿ ಮಾಡಿಸಿಕೊಂಡಿದ್ದಾರೆ ಎಂಬುದು ಆರೋಪ.
ಸಂತ್ರಸ್ತರ ಅಳಲು:
ಮುತ್ಯಾಲಿಗನ ಕುಟುಂಬ: ಮುತ್ಯಾಲಿಗನಿಗೆ ವಂಶವಿಲ್ಲ ಎಂದು ಸುಳ್ಳು ಹೇಳಿ, ಅವರ ಮಗನಾದ A.K. ತಿಮ್ಮಯ್ಯ (ಅಂಗವಿಕಲರು) ಅವರನ್ನು ವಂಶವೃಕ್ಷದಿಂದ ಕೈಬಿಡಲಾಗಿದೆ.
ಲಕ್ಷ್ಮಿಗನ ಕುಟುಂಬ: ನಾಲ್ಕನೇ ಭಾಗದ ಬರಬರ್ದಾರ ಲಕ್ಷ್ಮಿಗನ. ಮೊಮ್ಮಗನಾದ
A.K. ಪೆದ್ದ ಮಲ್ಲಪ್ಪ, A.K. ತಿಪ್ಪನ್ನ ಈ ಹೆಸರುಗಳನ್ನು ಮರು ಮಂಜೂರಾತಿಯಲ್ಲಿ ಕೈ ಬಿಡಲಾಗಿದೆ.
.ಇಂದಿಗೂ ನಾವೇ ಈ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ಆದರೆ ದಾಖಲೆಗಳಲ್ಲಿ ನಮ್ಮ ಹೆಸರುಗಳನ್ನೇ ಇಲ್ಲದಂತೆ ಮಾಡಿ ವಂಚಿಸಲಾಗಿದೆ.
– ಸಂತ್ರಸ್ತ ಕುಟುಂಬಸ್ಥರು
ಅಧಿಕಾರಿಗಳಿಗೆ ಮನವಿ:
ಈ ಸಂಬಂಧ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ರಾಜ್ಯ ಅಧ್ಯಕ್ಷ ಡಾ.ಕೆ.ಎಂ.ಸಂದೇಶ್ ಅವರು ಮಧುಗಿರಿ ಉಪ ವಿಭಾಗಾಧಿಕಾರಿಗಳಿಗೆ (AC) ಮನವಿ ಸಲ್ಲಿಸಿದ್ದು,
"ಅಂಗವಿಕಲ A.K. ತಿಮ್ಮಯ್ಯ ಸೇರಿದಂತೆ ವಂಚನೆಗೊಳಗಾದ ಎಲ್ಲಾ ಹಕ್ಕುದಾರರ ಹೆಸರುಗಳನ್ನು ಮರು ಮಂಜೂರಾತಿಯಲ್ಲಿ ಸೇರ್ಪಡೆಗೊಳಿಸಿ, ಕಾನೂನುಬದ್ಧವಾಗಿ ಜಮೀನಿನ ಹಕ್ಕನ್ನು ದೊರಕಿಸಿಕೊಡಬೇಕು" ಎಂದು ಆಗ್ರಹಿಸಿದ್ದಾರೆ.
ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ರಾಜ್ಯ ಅಧ್ಯಕ್ಷ ಡಾ.ಕೆ.ಎಂ.ಸಂದೇಶ್ ತಾಲ್ಲೂಕು ಆಡಳಿತ ಮತ್ತು ಉಪವಿಭಾಗ ಮಧುಗಿರಿ ಆಡಳಿತ ಅಧಿಕಾರಿಗಳು
ಕಾನೂನುಬದ್ಧವಾಗಿ ಜಮೀನಿನ ಹಕ್ಕನ್ನು ನೀಡಿಲ್ಲ ಅಂದರೆ ಮುಂದಿನ ದಿನಗಳಲ್ಲಿ ಪಾವಡ ತಾಲ್ಲೂಕು ಕಚೇರಿ ಮುಂದೆ ನಮ್ಮ ಸಂಘದಿಂದ ಪ್ರತಿಭಟನೆ ಮಾಡುತ್ತೇವೆಂದು ಎಂದು ಎಚ್ಚರಿಕೆ ನೀಡಿದ್ದರು.
ವರದಿ : ಶಿವಾನಂದ


