LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ರಾಜ್ಯದಲ್ಲಿ ಆರು ತಿಂಗಳಲ್ಲಿ 2.3 ಲಕ್ಷಕ್ಕೂ ಅಧಿಕ ಮಂದಿ ನಾಯಿ ಕಡಿತ : 19 ಮಂದಿ ಸಾವು

Advertisement

ಬೆಂಗಳೂರು : ರಾಜ್ಯದಲ್ಲಿ ಇತ್ತೀಚೆಗೆ ಚಿಕ್ಕ ಮಕ್ಕಳು ಎನ್ನದೆ ಎಲ್ಲರ ಮೇಲು ಬೀದಿ ನಾಯಿಗಳ ದಾಳಿ ಪ್ರಕರಣಗಳು ಹೆಚ್ಚಾಗಿವೆ.


ಇದೀಗ ಆರೋಗ್ಯ ಇಲಾಖೆ ಬೆಚ್ಚಿಬಿಳಿಸುವ ಮಾಹಿತಿ ನೀಡಿದ್ದು, ಕಳೆದ ಆರೇ ತಿಂಗಳಲ್ಲಿ ರಾಜ್ಯದಲ್ಲಿ ಒಟ್ಟು 2.3 ಲಕ್ಷಕ್ಕೂ ಅಧಿಕ ನಾಯಿ ಕಡಿತ ಪ್ರಕರಣ, 19 ರೇಬೀಸ್ ಸಾವುಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

2025ರ ಜ.1ರಿಂದ ಜೂ.30ರ ನಡುವೆ 2,31,091 ನಾಯಿ ಕಡಿತ ವರದಿಯಾಗಿದ್ದು, ಇದೇ ಅವಧಿಯಲ್ಲಿ ಕಳೆದ ವರ್ಷ 1,69,672 ನಾಯಿ ಕಡಿತ ಮತ್ತು 18 ರೇಬೀಸ್ ಸಾವು ವರದಿಯಾಗಿದ್ದವು.

2024ರಲ್ಲಿ ರಾಜ್ಯದಲ್ಲಿ ಇಡೀ ವರ್ಷದಲ್ಲಿ 3.6 ಲಕ್ಷ ನಾಯಿ ಕಡಿತ ಹಾಗೂ 42 ರೇಬೀಸ್ ಸಾವು ಸಂಭವಿಸಿದ್ದವು. 2023ರ ಮೊದಲ ಆರು ತಿಂಗಳ ಅವಧಿಗೆ ಹೋಲಿಸಿದರೆ ಈ ವರ್ಷ ನಾಯಿ ಕಡಿತ ಪ್ರಕರಣಗಳ ಸಂಖ್ಯೆಯಲ್ಲಿ ಶೇ.36.20ರಷ್ಟು ಹೆಚ್ಚಳ ಕಂಡುಬಂದಿದೆ.

ನಾಯಿ ಕಡಿತವನ್ನು ಅಧಿಸೂಚಿತ ಕಾಯಿಲೆ ಪಟ್ಟಿಗೆ 2022ರಲ್ಲಿ ಕರ್ನಾಟಕ ಸರ್ಕಾರ ಸೇರ್ಪಡೆ ಮಾಡಿತ್ತು. ಅದಾದ ನಂತರ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳು ನಾಯಿ ಕಡಿತ ಹಾಗೂ ದೃಢಪಟ್ಟ ರೇಬೀಸ್‌ ಪ್ರಕರಣಗಳನ್ನು ಆರೋಗ್ಯ ಇಲಾಖೆಗೆ ವರದಿ ಮಾಡುತ್ತಿವೆ. 2022ರ ನಂತರ ರಾಜ್ಯದಲ್ಲಿ ಅತಿ ಹೆಚ್ಚು ನಾಯಿ ಕಡಿತ ಪ್ರಕರಣಗಳು ಈ ವರ್ಷ ವರದಿಯಾಗಿವೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕ್ರಿಕೆಟರ್ ಜತೆ ಡೇಟಿಂಗ್ ವದಂತಿ ತಳ್ಳಿ ಹಾಕಿದ ನಟಿ ಮೃನಾಲ್ ಥಾಕೂರ್ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸಚಿವರಿಗೆ ಮನವಿದೇವದತ್ತ ಪಡಿಕಲ್ ಸುಂದರ ಶತಕಕರಡಿ ದಾಳಿಗೆ ರೈತ ಬಲಿ ಯುಪಿಐ ಸೇವೆ ಸಂಪೂರ್ಣ ಉಚಿತ : ಯಾವುದೇ ರೀತಿಯ ವಹಿವಾಟು ಶುಲ್ಕ ಇರುವುದಿಲ್ಲಟಾಕ್ಸಿಕ್ ಟ್ರೈಲರ್ ಔಟ್ : ದ್ವಿ ಪಾತ್ರದಲ್ಲಿ ಮಿಂಚಿದ ಯಶ್, ಇಲ್ಲದೆ ಲಿಂಕ್ ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಪೋಕ್ಸೋ, ಬಾಲ್ಯವಿವಾಹ ನಿಷೇದ ಕಾಯಿದೆಗಳ ಜಾಗೃತಿ ಕಾರ್ಯಕ್ರಮಸಿಟ್ಟು ತ್ಯಾಗ ಮಾಡಿದ್ರೆ ಮುಂದೆ ಸಿಎಂ ಆಗ್ತೀಯಾ : ಸಚಿವ ವಿಜಯಾನಂದ ಕಾಶಪ್ಪನವರ್‌ಗೆ ಸಿದ್ದನಕೊಳ್ಳ ಶ್ರೀಗಳ ಸ್ಫೋಟಕ ಭವಿಷ್ಯಶೀಘ್ರದಲ್ಲೇ ಸಮಾನ ಮನಸ್ಕರ ಪಕ್ಷ ಸ್ಥಾಪನೆ : ಚೇತನ್ ಅಹಿಂಸಾ ಸಿಟ್ಟನ್ನು ಬಿಟ್ಟರೆ ಮುಂದೆ ಸಿಎಂ ಆಗ್ತಿಯಾ : ಕಾಶಪ್ಪನವರ್ ಗೆ ಸಿದ್ದನಕೊಳ್ಳ ಶ್ರೀಗಳ ಸಲಹೆ