LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ವಿವಿಧ ಮಹನಿಯರ ವೃತ್ತ ಹಾಗೂ ಪುತ್ಥಳಿ ಸ್ಥಾಪನೆಗಾಗಿ ಅನಿರ್ದಿಷ್ಠಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ

Advertisement

ಮಾನ್ವಿ: ಪಟ್ಟಣದ ಮಹಾತ್ಮಗಾಂಧಿ ವೃತ್ತದ ಹತ್ತಿರ ವಿವಿಧ ಮಹಾನಿಯರ ವೃತ್ತ ಹಾಗೂ ಪುತ್ಥಳಿ ಸ್ಥಾಪನೆ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡ  ಅನಿರ್ಧೀಷ್ಠಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿ ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ ಮಾತನಾಡಿ  ಪಟ್ಟಣದಲ್ಲಿ ಮಾನ್ವಿ ಪುರಸಭೆಯಿಂದ ರಾಯಚೂರ ನಿಂದ ಸಿಂಧನೂರು ರಸ್ತೆವರೆಗೆ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವಗುರು ಶ್ರೀ ಬಸವೇಶ್ವರ ,ಛತ್ರಪತಿ ಶಿವಾಜಿ, ಮಹಾತ್ಮಗಾಂಧಿ , ಶ್ರೀ ಮಹಾರ್ಷಿ ವಾಲ್ಮೀಕಿ ವೃತ್ತಗಳು ಅನುಮೋದನೆಗೊಂಡು ವೃತ್ತಗಳ ನಿರ್ಮಾಣವಾಗಿದ್ದರು ಕೂಡ ಇದುವರೆಗೂ ಈ ವೃತ್ತಗಳಲ್ಲಿ ವಿವಿಧ ಮಹಾನಿಯರ ಪುತ್ತಳ್ಳಿಗಳನ್ನು ಕೂಡಿಸುವುದಕ್ಕೆ ಕ್ರಮ ಕೈಗೊಳ್ಳುವಂತೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಸೇರಿದಂತೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು.

 ಕೂಡ ಇದುವರೆಗೂ ಕೂಡ ಪಟ್ಟಣದ ವೃತ್ತಗಳಲ್ಲಿ ಮಹಾನಿಯರ ಪುತ್ತಳ್ಳಿಗಳನ್ನು ಕೂಡಿಸಿಲ್ಲ ಪ್ರಸ್ತುತ ಕಲ್ಮಲದಿಂದ ಸಿಂಧನೂರು ವರೆಗೆ ನಿರ್ಮಾಣವಾಗುತ್ತಿರುವ ಬಹುಕೋಟಿ ವೆಚ್ಚದ ಚತುಷ್ಪತ ರಸ್ತೆ ನಿರ್ಮಾಣ ಮಾಡುತ್ತಿರುವ ಸಂಸ್ಥೆಯವರು ಹಾಗೂ ಕೆ.ಎಸ್.ಆರ್.ಡಿ.ಸಿ ಇಲಾಖೆಯ ಅಧಿಕಾರಿಗಳು ರಸ್ತೆ ಕಾಮಗಾರಿ ಪಟ್ಟಣದಲ್ಲಿ ಶೇ.80 ರಷ್ಟು ಪೂರ್ಣವಾಗಿದ್ದರು ಕೂಡ ಪಟ್ಟಣದಲ್ಲಿನ ಮಹಾನಿಯರ ವೃತ್ತಗಳ ಅಭಿವೃದ್ದಿ ಹಾಗೂ ಪುತ್ಥಳ್ಳಿಗಳ ಸ್ಥಾಪನೆ ಕುರಿತು ಇದುವರೆಗೂ ಕೂಡ ಯಾವುದೆ ಕ್ರಮ ಕೈಗೊಂಡಿಲ್ಲದೆ ಇರುವುದು ಪಟ್ಟಣದ ಎಲ್ಲಾ ಸಮುದಾಯಗಳ ಭಾವನೆಗಳಿಗೆ ದಕ್ಕೆ ಉಂಟುಮಾಡಿದು ಇನ್ನೂ 10 ದಿನಗಳಲ್ಲಿ ಪಟ್ಟಣದ ವಿವಿಧ ಮಹಾನಿಯರ ವೃತ್ತಗಳನ್ನು ಅಭಿವೃದ್ದಿ ಪಡಿಸಿ ಪುತ್ಥಳಿಗಳನ್ನು ಕೂಡಿಸದೆ ಇದ್ದಲ್ಲಿ ಪಟ್ಟಣದ ಎಲ್ಲಾ ಸಮುದಾಯಗಳವರು ಸೇರಿಕೊಂಡು ಪಟ್ಟಣದ ವಿವಿಧ ಮಹಾನಿಯರ ವೃತ್ತಗಳನ್ನು ಅಭಿವೃದ್ದಿಪಡಿಸಿ ಪುತ್ಥಳಿಗಳನ್ನು ಕೂಡಿಸುವಂತೆ ಒತ್ತಾಯಿಸಿ ಬೃಹತ್ ಹೋರಾಟ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕ ಗಂಗಾಧರ ನಾಯಕ ಮಾತನಾಡಿ  ತಾಲೂಕಿನ ಜನರ ಹಾಗೂ ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ರಾಜ್ಯ ಸರಕಾರದಿಂದ ಕೆ.ಎಸ್.ಆರ್.ಡಿ.ಸಿ. ಇಲಾಖೆ ಮೂಲಕ 1688 ಕೋಟಿ ವೆಚ್ಚದಲ್ಲಿ 78 ಕಿ.ಮಿ.ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು ರಸ್ತೆ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದ ಸಂಸ್ಥೆಯವರು ಅಂದಾಜು ಪಟ್ಟಿಯಲ್ಲಿರುವಂತೆ ಕಾಮಗಾರಿಯನ್ನು ಗುಣಮಟ್ಟದಲ್ಲಿ ಕೈಗೊಳ್ಳದೆ ಇದ್ದರು ಕೂಡ ಕೆ.ಎಸ್.ಆರ್.ಡಿ.ಸಿ. ಇಲಾಖೆಯವರು ಅಗತ್ಯ ಕ್ರಮ ಕೈಗೊಳ್ಳದೆ ಇರುವುದರಿಂದ ಕೇಲವೆ ವರ್ಷಗಳಲ್ಲಿ ರಸ್ತೆ ಹಾಳಗಲಿದೆ ತಾಲೂಕು ಆಡಳಿತ ಹಾಗೂ ಪುರಸಭೆ ಅಧಿಕಾರಿಗಳು ಪಟ್ಟಣದ ಅಭಿವೃದ್ದಿಗೆ ಸ್ಪಂದಿಸುತ್ತಿಲ್ಲ ಎಂದು ಅರೋಪಿಸಿದರು.

ಮಾಜಿ ಬಿ.ಜೆ.ಪಿ. ಮಾನ್ವಿ ಮಂಡಲ ಅಧ್ಯಕ್ಷರಾದ ಜಿ.ಸುಧಾಕರ್  ಮುಖಂಡರಾದ ತಿಮ್ಮರೆಡ್ಡಿ ಭೋಗವತಿ ಶರಣೆಗೌಡ ನಕ್ಕುಂದಿ ರಂಗಪ್ಪ  ಮಾತನಾಡಿದರು.
ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಹರಿಹರ ಪಾಟೀಲ್ ಮುಖಂಡರಾದ ಉಮೇಶ ಸಜ್ಜನ್  ಗುರುಸಿದ್ದಪ್ಪ ಕಣ್ಣೂರು ಹನುಮೇಶ ನಾಯಕ ಸದಾಪುರ್ ಶ್ರೀ ನಗರೇಶ್ವರ ಆರ್ಯವೈಶ್ಯ ಸಮಾಜದ ತಾಲೂಕು ಅಧ್ಯಕ್ಷರಾದ ಆರ್.ಮುತ್ತುರಾಜ ಶೆಟ್ಟಿ ಕಾರ್ಯದರ್ಶಿ ಬಿ.ಈರಣ್ಣ  ಶಾಂತಿಲಾಲ್ ಸೇಟ್ ಬಸವರಾಜ ನಕ್ಕುಂದಿ,ಗೋಪಾಲ ಇಬ್ರಾಂಪುರ್ ಸೇರಿದಂತೆ ಇನ್ನಿತರರು ಇದ್ದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಐರ್ಯಲೆಂಡ್‌ಗೆ ೩೦೦ ರನ್‌ಗಳ ಗೆಲುವಿನ ಗುರಿಶ್ರೀಲಂಕಾ ಇಲೆವೆನ್ ಉತ್ತಮ ಮೊತ್ತಕಳಸಕೊಪ್ಪ ಸೇರಿದಂತೆ 8 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮ: ಜೆ ಟಿ ಪಾಟೀಲಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಕೋಟಿ ಕೋಟಿ ಹಣ ವಂಚನೆ ಕೇಸ್ : ಶಿವಾನಂದ ನೀಲಣ್ಣವರ ಇಡಿ ರೇಡ್ಹಾಡ ಹಾಗಲೇ ಗುಂಡಿಕ್ಕಿ ಕಾಂಗ್ರೆಸ್ ಮುಖಂಡ ಬರ್ಬರ ಹತ್ಯೆ ಆಗಸ್ಟ್ 15ವರೆಗೆ ಖಾತೆ ಹಂಚಿಕೆಗೆ ಕಾಲಾವಕಾಶ ಇದೆ : ಡಿ.ಕೆ.ಶಿವಕುಮಾರ್ಆಗಸ್ಟ್ 13 ರಂದು ಅಧಿವೇಶನ,14 ರಂದು ನೂತನ ಉಪಸಭಾಪತಿಗಳ ಆಯ್ಕೆ : ಡಿ.ಕೆ.ಶಿವಕುಮಾರ್ಹುತಾತ್ಮ ಯೋಧ ಅಂಗಡಿ ಮಂಜುನಾಥ ನಾಯಕ ಸಾದಾಪುರ ಪುಣ್ಯ ಸ್ಮರಣೆ​ಶ್ರೀ ಕ್ಷೇತ್ರ ಪರಕನಹಟ್ಟಿಯಿಂದ ಹುಬ್ಬಳ್ಳಿಗೆ ಪ್ರಥಮ ವರ್ಷದ ಸಿದ್ಧಾರೂಢ ಪಾದಯಾತ್ರೆ: ಭಕ್ತಿಪರವಶತೆಯಿಂದ ಚಾಲನೆಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ  : ಶಾಸಕ ಜಿ.ಹಂಪಯ್ಯ ನಾಯಕ ಸಾಹುಕಾರ