ಬಾಗೇಪಲ್ಲಿ :ತಾಲ್ಲೂಕಿನ ಕರ್ನಾಟಕ ಯುವಸೇನೆ ಸಮಿತಿವತಿಯಿಂದ ಮಿಟ್ಟೆಮರಿ ಬಸ್ ನಿಲ್ದಾಣ ಪಕ್ಕದಲ್ಲಿ ಕನ್ನಡ ಧ್ವಜಸ್ತಂಭ ಮತ್ತು ಪುನೀತ್ ರಾಜಕುಮಾರ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆಯಲ್ಲಿ ಕರ್ನಾಟಕ ಯುವಸೇನೆ ಸಮಿತಿ ರಾಜ್ಯಾಧ್ಯಕ್ಷರಾದ ಮಹೇಶ್ ರೆಡ್ಡಿ ರವರು ಮಾತನಾಡಿ, ಪುನೀತ್ ರಾಜಕುಮಾರ ರವರು ಸಾವಿರಾರು ಬಡಮಕ್ಕಳಿಗೆ, ಅನಾಥ ಮಕ್ಕಳಿಗೆ ಬಹಳಷ್ಟು ರೀತಿಯ ಸಹಾಯ ಮಾಡಿದ್ದಾರೆ.ಅವರು ಸಹಾಯ ಬಲಗೈಯಲ್ಲಿ ಕೊಟ್ಡಿದ್ದು ಎಡಗೈ ಗೊತ್ತಾಗುತ್ತಿರಲಿಲ್ಲ.ಅಂತಹ ಮಹಾನ್ ವ್ಯಕ್ತಿಯಾದ ಪುನೀತ್ ರಾಜಕುಮಾರ್ ಪುತ್ಥಳಿ ನಿರ್ಮಾಣ ಮಾಡುವುದು ಈ ಭಾಗದ ಯುವಕರ ಬಹಳ ದಿನದ ಕನಸುಗಿತ್ತು, ಅದು ಇಂದು ನಿಜವಾಗಿದೆ. ಮುಖ್ಯವಾಗಿ ಪುನೀತ್ ರಾಜಕುಮಾರ ರವರನ್ನು ಯುವಕರು ಸ್ಪೂರ್ತಿ ಪಡೆದು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜನಪರ ಕಾರ್ಯಕ್ರಮ ಮಾಡಲೀ ಎಂಬುದು ಇದರ ಉದ್ದೇಶವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಯುವಸೇನೆ ಸಮಿತಿಯ ಮುಖಂಡರಾದ ನರೇಶ್, ಹರೀಶ್,ಭರತ್, ಅರವಿಂದ್, ರಘು, ಬಾಬು, ಮಂಜುನಾಥ ರೆಡ್ಡಿ, ರಫೀ,ಅಂಬರೀಶ್ ಮುಂತಾದವರು ಹಾಜರಿದ್ದರು.
ವರದಿ: ಬಿ.ಎ.ಬಾಬಾಜಾನ್


