ಆಂಧ್ರಪ್ರದೇಶ: ಇಲ್ಲಿನ ಅದೋನಿಯಲ್ಲಿ ದೇವಸ್ಥಾನವೊಂದರ ಒಳಗೆ ಗರ್ಭಗುಡಿಯಲ್ಲೇ ಶಿವಲಿಂಗದ ಮುಂದೆ ಉರಿಯುತ್ತಿದ್ದ ಪವಿತ್ರ ದೀಪದಿಂದ ವ್ಯಕ್ತಿಯೊಬ್ಬ ಸಿಗರೇಟ್ ಹಚ್ಚಿಕೊಂಡಿರುವ ಆಘಾತಕಾರಿ (Shocking) ಘಟನೆ ನಡೆದಿದೆ.
ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ (Viral Video) ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ಹಿಂದೂ ಸಂಘಟನೆಗಳು ತೀವ್ರ ಒತ್ತಾಯ ಮಾಡಿವೆ.


