ನೇಸರಗಿ: ದೇಶದಲ್ಲಿ ನಮ್ಮ ರಾಜ್ಯದ ಹೆಮ್ಮೆಯ ಕರ್ನಾಟಕ ರಾಜ್ಯ ಹಾಲು ಒಕ್ಕೂಟದ ( ಕೆ ಎಂ ಎಫ್) ವತಿಯಿಂದ ತಯಾರಾಗುವ ಹಾಲು ಮತ್ತು ಹಾಲಿನ ಅನೇಕ ಉತ್ಪನ್ನಗಳು ದೇಶದ ಎಲ್ಲರಿಗೂ ಪ್ರಿಯವಾಗಿದ್ದು, ದೇಶದ ಜನತೆ ವಿಶ್ವಾಸದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಕೆ ಮಾಡುತ್ತಿದ್ದು ಜನರ ಪ್ರೀತಿ ವಿಶ್ವಾಸ ಗಳಿಸಿದೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಶನಿವಾರದಂದು ಗ್ರಾಮದ ಪೊಲೀಸ್ ಠಾಣೆ ಎದುರಿಗೆ ನೂತನವಾಗಿ ನಿರ್ಮಾಣಗೊಂಡಿರುವ ನ್ಯೂ ಹೈಟೆಕ್ ಮಿಲ್ಕ್ ಪಾರ್ಲರ ಕೆ ಎಂ ಎಫ್ ಮಳಿಗೆ ಉದ್ಘಾಟನೆ ನೆರವೇರಿಸಿ ಮಾತನಾಡಿ ಈ ನೂತನ ಮಳಿಗೆಯ ಸದುಪಯೋಗವನ್ನು ನೇಸರಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನತೆ ಪಡೆಯಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಕೆ ಎಂ ಎಫ್ ಅಧಿಕಾರಿಗಳನ್ನು ಸತ್ಕರಿಸಲಾಯಿತು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಣಬರಹಟ್ಟಿ ಗ್ರಾಮದ ಹಿರೇಮಠದ ಷ ಬ್ರ ಬಸವಲಿಂಗ ಶಿವಾಚಾರ್ಯರು ವಹಿಸಿದ್ದರು.
ಈ ವೇಳೆ ಅಥಣಿಯ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಕೆ ಎಂ ಎಫ್ ನಿರ್ದೇಶಕರಾದ ಬಾಬುರಾವ ವಾಘಮೋಡೆ, ಪಿ ಎಲ್ ಡಿ ಬ್ಯಾಂಕ ನಿರ್ದೇಶಕರಾದ ಶಂಕರಗೌಡಪಾಟೀಲ , ಕ್ಷೇತ್ರಧಿಕಾರಿ ಉಮೇಶ ನಾಯ್ಕ, ಮಾಜಿ ಎ ಪಿ ಎಂ ಸಿ ಅಧ್ಯಕ್ಷ ಬರಮಣ್ಣ ಸತ್ತೇನ್ನವರ, ಮಾಜಿ ಗ್ರಾ ಪಂ ಅಧ್ಯಕ್ಷ ವೀರಭದ್ರ ಚೋಭಾರಿ, ಸುಜಾತ ಪಾಟೀಲ, ಸುರೇಶ ಕಂಡ್ರಿ, ಬಸವರಾಜ ಚಿಕ್ಕನಗೌಡ್ರ, ಸುರೇಶ ಅಗಸಿಮನಿ, ರವಿ ಸಿದ್ದಮ್ಮನವರ, ಡಿ ಎಸ್ ಎಸ್ ಅಧ್ಯಕ್ಷರಾದ ಸುರೇಶ ರಾಯಪ್ಪಗೋಳ, ರಮೇಶ ರಾಯಪ್ಪಗೋಳ, ಶಿವನಪ್ಪ ಮದೇನ್ನವರ,ಸಿ ಆರ್ ಹೊಂಡಪ್ಪಣ್ಣವರ, ಅಜಿತ್ ಗಸ್ತಿ, ಮಾಲೀಕರಾದ ಶ್ರೀಕಾಂತ ಉಳವಿ, ಶಿವಲೀಲಾ ಉಳವಿ, ಶ್ರೀಧರ ಉಳವಿ ಸೇರಿದಂತೆ ನೇಸರಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ಗ್ರಾಮಸ್ಥರು,ಕೆ ಎಂ ಎಫ್ ಹಾಲಿನ ವ್ಯಾಪಾರಿಗಳು ಇದ್ದರು.


