LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮಹಿಳೆಯರಿಗೆ ಬಾಗಿನ ಕೊಡುವ ಭಾರತೀಯ  ಹಿಂದೂ  ಸನಾತನ ಧರ್ಮದ ಪರಂಪರೆ : ಡಾ. ಸಂಗನ ಬಸಪ್ಪ ಬಿರಾದಾರ್

Advertisement

ಬೆಂಗಳೂರು : ಭಾರತೀಯ ಸನಾತನ ಧರ್ಮದಲ್ಲಿ 'ಬಾಗಿನ' ಕೊಡುವ ಪದ್ಧತಿ ಇತಿಹಾಸದ ಪರಂಪರೆ ಅತ್ಯಂತ ಪವಿತ್ರ  ಹಾಗೂ ಸಮೃದ್ಧಿಗೆ ಸಾಕ್ಷಿ.  ಶ್ರಾವಣ ಮತ್ತು ಭಾದ್ರಪದ ಮಾಸಗಳಲ್ಲಿ ಬರುವ ವರಮಹಾಲಕ್ಷ್ಮಿ ವ್ರತ ಹಾಗೂ ಸ್ವರ್ಣಗೌರಿ ಹಬ್ಬಗಳ ವೇಳೆಯಲ್ಲಿ ಮಹಿಳೆಯರಿಗೆ ಬಾಗಿನ ಕೊಡುವುದು ನಮ್ಮ ಭಾರತೀಯ ಸನಾತನ  ಹಿಂದೂ ಧರ್ಮದ ಪರಂಪರೆಯ ಪ್ರಮುಖ ಆಚರಣೆಯಾಗಿದೆ ಎಂದು ರಾಜಗೋಪಾಲ ನಗರ ವಾರ್ಡಿನ ಜನ ಪ್ರಿಯ ಸಮಾಜ ಸೇವಕ ಹಾಗೂ  ಚಿಂತಕರು ವಾಗ್ಮಿಗಳು ಬುದ್ದಿಜೀವಿಗಳು ಮತ್ತು ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಡಾ ಸಂಗನ ಬಸಪ್ಪ ಬಿರಾದಾರ್ ಹೇಳಿದರು. 

ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕೆಂಪೇಗೌಡ ಲೇಔಟ್ ನಲ್ಲಿ ಇರುವ ತಮ್ಮ ಸ್ವಗೃಹದಲ್ಲಿ "ಗೌರಿ ಗಣೇಶ ಹಬ್ಬದ" ಪ್ರಯುಕ್ತ'ಮಹಿಳೆಯರಿಗೆ ಬಾಗಿನ ಮತ್ತು ಸುವರ್ಣ ಅವರ ಹುಟ್ಟು ಹಬ್ಬವನ್ನು' ಚಿಂತಕ ಡಾ ಸಂಗನ ಬಸಪ್ಪ ಬಿರಾದಾರ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಮಹಾದೇವಿ ಎಸ್ ಬಿರಾದಾರ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಗೌರಿ ಗಣೇಶ ಹಬ್ಬದ ನಿಮಿತ್ತ ಮಹಿಳೆಯರಿಗೆ ಬಾಗಿನ ಅರ್ಪಿಸಿ ಆಶಿರ್ವಾದ ಪಡೆದು ಮಾತನಾಡಿ ಅವರು ಭಾರತೀಯ ಸನಾತನ ಹಿಂದೂ ಧರ್ಮದ  ಸಂಸ್ಕೃತಿ ಸಂಪ್ರದಾಯ ಪರಂಪರೆಯ ಪವಿತ್ರ  ಬಾಗಿನದ ಮುಖ್ಯ ಮಹತ್ವ  ಸಮೃದ್ಧಿ ಮತ್ತು ಗೌರವದ ಸಂಕೇತ ಬಾಗಿನ ಎಂದು ಡಾ. ಬಿರಾದಾರ್ ಬಾಗಿನ ನೀಡಿ ಮಾತನಾಡಿದರು.

ಅಹಿಂದ ಹಕ್ಕುಗಳ ಹೋರಾಟಗ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಆಂಜಿನಪ್ಪ ಮಾತನಾಡಿ  ಸ್ತ್ರೀ ಶಕ್ತಿಯನ್ನು ಗೌರವಿಸುವ ಸನಾತನ ಧರ್ಮದ ಸಂಸ್ಕೃತಿಯನ್ನು ಇದು ಬಿಂಬಿಸುತ್ತದೆ. ತವರು ಮನೆಯಿಂದ ಮಗಳಿಗೆ ಬಾಗಿನ ನೀಡುವುದು ಅವಳ ಸುಖ-ಸಂತೋಷದ ಹಾರೈಕೆಯಾಗಿರುತ್ತದೆ ಎಂದರು.

ಇದೆ ವೇಳೆ ಅಹಿಂದ ಹಕ್ಕುಗಳ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷೆ ಸುವರ್ಣ ಕೆ. ಮಂಜುನಾಥ್ ಅವರ ಹುಟ್ಟು ಹಬ್ಬವನ್ನು ವಿನೂತನವಾಗಿ ಅರ್ಥಪೂರ್ಣವಾಗಿ ಸುವರ್ಣ ಅವರಿಗೆ ಶಾಲು ಹೊದಿಸಿ ಮೈಸೂರು ಪೆಟಾ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ಸಿಹಿ ತಿನ್ನಿಸಿ ಶುಭ ಹಾರೈಸಿದರು.

ಮಹಿಳಾ ಮುಖ್ಯಸ್ಥೆಯರಾದ ಸವಿತಾ,ಯಶೋಧಾ,ನಳಿನಿ ರಾಜು, ಸುಶೀಲಾ, ಶಾರುಶ್ರೀ ಸೇರಿದಂತೆ ಹಲವಾರು ಮಹಿಳೆಯರಿಗೆ  ಡಾ ಸಂಗನ ಬಸಪ್ಪ ಬಿರಾದಾರ್ ಅವರ ಧರ್ಮಪತ್ನಿ ಶ್ರೀಮತಿ ಮಹಾದೇವಿ ಬಾಗಿನ ಸಮರ್ಪಿಸಿ ಆಶಿರ್ವಾದ ಪಡೆದು ಪ್ರೀತಿಯ ಉಪಹಾರ ಸೇವಿಸಿದರು.

ಈ ಸಂದರ್ಭದಲ್ಲಿ ಕನ್ನಕೆರಿ  ಕೃಷ್ಣಪ್ಪ, ಲಿಂಬೆಹಣ್ಣಿನ ರಾಜಣ್ಣ, ಕೆಂಪರಾಜು, ಸುರೇಶ್ ಬಾಬು, ಮಂಜುನಾಥ್ ಮಹಿಳಾ ಮುಖ್ಯಸ್ಥೆಯರಾದ ಸವಿತಾ,ಯಶೋಧಾ,ನಳಿನಿ ರಾಜು, ಸುಶೀಲಾ, ಶಾರುಶ್ರೀ ಸೇರಿದಂತೆ ಕೆಂಪೇಗೌಡ ಲೇಔಟ್, ರಾಜಗೋಪಾಲನಗರದ ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಉಪಸ್ಥಿತರಿದ್ದು ಸುವರ್ಣ ಅವರಿಗೆ ಹೂವು ಗುಚ್ಚು ನೀಡಿ ಸಿಹಿ ತಿನ್ನಿಸಿ ಶುಭ ಹಾರೈಸಿದರು.

ವರದಿ : ಅಯ್ಯಣ್ಣ ಮಾಸ್ಟರ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
SAD NEWS : ಬಾಲಿವುಡ್ ಹಿರಿಯ ನಟ 'ನಾನಾ ಪಾಟೇಕರ್' ಇನ್ನಿಲ್ಲ ಕೆನ್ಸೋ ಸೊಐ, ಹೆನ್ರಿ ಕಗಾನ್ ಗೆ, 2026ರ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ ಎರಡು ದಿನಗಳಲ್ಲಿ ರೈತರ ಖಾತೆಗೆ 2500 ರೂ. ಜಮಾ: ಡಾ. ಜಿ. ಪರಮೇಶ್ವರ್ಬೇರೆ ಕಡೆ ನೆಲೆಸಿದ್ದರೂ ವಂಶವೃಕ್ಷ ಸಿಗುತ್ತದೆ : ಹೈಕೋರ್ಟ್‌ ಇಂದು ಬೆಂಗಳೂರಿನಲ್ಲಿ ಸಿಜೆಪಿಯಿಂದ ಬೃಹತ್ ಪ್ರತಿಭಟನೆ: ಧ್ರುವ್ ರಾಠಿ, ಪ್ರಕಾಶ್ ರಾಜ್ ಭಾಗಿವಿಧಾನಸಭೆ ಕಲಾಪದ ಅಣುಕು ಪ್ರದರ್ಶನ ಗಮನ ಸೆಳೆಯಲಿರುವ ವಿದ್ಯಾರ್ಥಿಗಳ ಯುವ ಸಂಸತ್ತುಜಿಪಂ ಚುನಾವಣೆ : 1129 ಜಿಲ್ಲಾ ಪಂಚಾಯತಿ ಸ್ಥಾನಗಳಿಗೆ ಮೀಸಲಾತಿ ಅಧಿಸೂಚನೆ ಪ್ರಕಟ ರಾಜ್ಯಾಧ್ಯಂತ 'ಹಾಫ್ ಹೆಲ್ಮೆಟ್‌'ಗೆ ಸಂಪೂರ್ಣ ನಿಷೇಧ: ಉಲ್ಲಂಘಿಸಿದರೇ ದಂಡ ಫಿಕ್ಸ್! ಮುಂದಿನ ವಾರ ಏಕದಿನ ತಂಡದ ಆಯ್ಕೆ ಸಾಧ್ಯತೆ ರಣಜಿ ತಂಡದಿಂದಲೂ ಸೂರ್ಯಕುಮಾರ್ ಗೆ ಕೊಕ್