Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚೋರ್ಲಾ ಘಾಟ್ ನಲ್ಲಿ 400 ಕೋಟಿ ರೂ. ದರೋಡೆ ಕೇಸ್ : ಎಫ್‌ಐಆರ್ ದಾಖಲಿಸುವಂತೆ ಪತ್ರ 

Advertisement
ಬೆಳಗಾವಿ: ಕರ್ನಾಟಕ, ಗೋವಾ, ಮಹಾರಾಷ್ಟ್ರದ ಗಡಿ ಚೋರ್ಲಾ ಘಾಟ್ ನಲ್ಲೊ ನಡೆದಿದ್ದ 400 ಕೋಟಿ ರೂಪಾಯಿ ದರೋಡೆ ಪ್ರಕರಣ ತನಿಖೆಯನ್ನು ಮಹಾರಾಷ್ಟ್ರ ಎಸ್ ಐಟಿ ಮುಂದುವರೆಸಿದೆ. ಈಗಾಗಲೇ ಪ್ರಕರಣ ಸಂಬಂಧ ೮ ಆರೋಪಿಗಳನ್ನು ಬಂಧಿಸಿದೆ.

ಅಷ್ಟೊಂದು ಹಣ ಏನಾದವು ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಈ ನಡುವೆ ದೂರುದಾರ ಸಂದೀಪ್ ಪಾಟೀಲ್​​ ಬೆಳಗಾವಿ ಎಸ್​ಪಿ ಕೆ.ರಾಮರಾಜನ್​ಗೆ ಪತ್ರ ಬರೆದಿದ್ದು, ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಬೆಳಗಾವಿ ಎಸ್​ಪಿ ಕೆ.ರಾಮರಾಜನ್​ಗೆ ಪತ್ರ ಬರೆದಿರುವ ದೂರುದಾರ ಸಂದೀಪ್ ಪಾಟೀಲ್​​, ಮಹಾರಾಷ್ಟ್ರ ಎಸ್‌ಐಟಿ ಪೊಲೀಸರಿಂದ ಪಾರದರ್ಶಕ ತನಿಖೆ ಆಗುತ್ತಿಲ್ಲ. ಘಟನೆ ಸಂಬಂಧ ಆಡಿಯೋ ದಾಖಲೆಗಳು ನನ್ನ ಬಳಿ ಇವೆ. ಅವುಗಳ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಪ್ರಕರಣ ಸಂಬಂಧ 8 ಆರೋಪಿಗಳನ್ನು ಮಹಾರಾಷ್ಟ್ರ ಎಸ್​​ಐಟಿ ಬಂಧಿಸಿದೆ. ಆದರೆ ಮಹಾರಾಷ್ಟ್ರ ಪೊಲೀಸರ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸಂದೀಪ್ ಪಾಟೀಲ್, ಈಗಾಗಲೇ ಎಸ್‌ಐಟಿ ಮತ್ತು ಪೊಲೀಸ್​​ ಮಹಾನಿರ್ದೇಶಕರ ವಿರುದ್ಧ ಮಹಾರಾಷ್ಟ್ರ ಪೊಲೀಸ್​​ ಮಹಾನಿರ್ದೇಶಕರ ವಿರುದ್ಧ ಹೈಕೋರ್ಟ್​​ಗೆ ದೂರು ನೀಡಿದ್ದಾರೆ. ಆ ಮೂಲಕ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿರುವ ಬಗ್ಗೆ ಸಂದೀಪ್ ಪಾಟೀಲ್ ಶಂಕೆ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಚೋರ್ಲಾ ಘಾಟ್​ನಲ್ಲಿ 400 ಕೋಟಿ ರೂ ದರೋಡೆ ನಡೆದ ಬಗ್ಗೆ ದೂರು ದಾಅಕಹ್ಲಾಗಿತ್ತು. 2 ಸಾವಿರ ಮುಖಬೆಲೆಯ ನೋಟುಗಳು ರದ್ದಾದ ಹಿನ್ನೆಲೆಯಲ್ಲಿ ಎಕ್ಸ್‌ಚೇಂಜ್ ಮಾಡಲು ತೆಗೆದುಕೊಂಡು ಹೋಗಲಾಗ್ತಿತ್ತು ಎನ್ನಲಾಗಿದ್ದ ಎರಡು ಕಂಟೇನೈರ್ ಗಳಲ್ಲಿದ್ದ 400 ಕೋಟಿ ಹಣ ಕಳ್ಳತನವಾಗಿದೆ. ದೂರುದಾರ ಸಂದೀಪ್ ಪಾಟೀಲ್​ನಿಂದ ಈದರೋಡೆ ಕೇಸ್​ನ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಎಂಬುದು ಗೊತ್ತಾಗಿದೆ.

ಸಂದೀಪ್ ಪಾಟೀಲ್, ಇದೇ ಕಿಶೋರ್​ನ ಆಪ್ತ. 400 ಕೋಟಿ ರೂ ದರೋಡೆಯಾಗಿದ್ದು ತಿಳೀತಿದ್ದಂತೆಯೇ ಸಂದೀಪ್​ನನ್ನು ಅಪಹರಿಸಿ, 400 ಕೋಟಿ ರೂ ಹಣ ಎಲ್ಲಿಟ್ಟಿದ್ದೀಯಾ? ಕಂಟೇನರ್​ಗಳು ಎಲ್ಲಿವೆ? ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿ ಸಂದೀಪ್​ಗೆ ಕಿಶೋರ್ ಗ್ಯಾಂಗ್ ಚಿತ್ರಹಿಂಸೆ ನೀಡಿತ್ತಂತೆ. ಸಂದೀಪ್, ಕಿಡ್ನ್ಯಾಪರ್ಸ್​ನಿಂದ ತಪ್ಪಿಸಿಕೊಂಡು ಬಂದು ನಾಸೀಕ್ ಠಾಣೆಗೆ ದೂರು ನೀಡಿದ್ದರು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತೇವಗೊಂಡ ಮೈದಾನ: ಆರ್‌ಸಿಬಿ ಪಂದ್ಯ ವಿಳಂಭ ಮೊದಲ ಟೆಸ್ಟ್ಗೆ ಇಂಗ್ಲೆAಡ್ ತಂಡದಾಯ್ಕೆಡಾಲರ್‌ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿಹಿಜಾಬ್ ನಿಷೇಧ ವಾಪಸ್ ಪಡೆದ ರಾಜ್ಯ ಸರ್ಕಾರ ಸಗಣಿ ಭಕ್ತರು ಗಂಜಲ ಕುಡಿದು ಜೀವನ ಮಾಡುತ್ತಾರೆ, ಸಾಮಾನ್ಯರು ಏನು ಮಾಡಬೇಕು : ಬಿ. ಕೆ ಹರಿಪ್ರಸಾದ್ ಮಣ್ಣಲ್ಲಿ ಮಣ್ಣಾದ ನಟ ದಿಲೀಪ್ ರಾಜ್ : ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ಇನ್ಮುಂದೆ ಮೆಟ್ರೋದಲ್ಲಿ ಪ್ರಯಾಣ, ವಾಹನ ಬಳಕೆ ಶೇ. 40 ರಷ್ಟು ಕಡಿತ : ಆರ್. ಅಶೋಕ್ ರಟಕಲ್ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರ ಆಕ್ರೋಶ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆ ಅನನ್ಯ :ವಸಂತ ಎಸ್ಚರಂಡಿ ಸ್ವಚ್ಛಗೊಳಿಸಿ, ರೋಗಭಯವಿಲ್ಲದೆ ಬದುಕುವಂತೆ ಮಾಡಿ : ನಾಗರೀಕರ ಆಗ್ರಹ