Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮನುಸ್ಮೃತಿ ಶೋಷಣೆಯ ಕೃತಿಯಲ್ಲ, ಧರ್ಮ ಪೋಷಣೆಯ ಕೃತಿ : ವಿರೇಶಾನಂದ ಸರಸ್ವತಿ

Advertisement

ತುರುವೇಕೆರೆ : ಮನುಸ್ಮೃತಿಯನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದೆ ಅದರಲ್ಲಿನ ಮೌಲ್ಯಗಳ ಬಗ್ಗೆ ಅಪವ್ಯಾಖ್ಯಾನ ಮಾಡಿ ಬುದ್ದಿಜೀವಿಗಳು ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಇದು ನಿಜಕ್ಕೂ ಸನಾತನ ಧರ್ಮಕ್ಕೆ ನಮ್ಮವರಿಂದಲೇ ಬಂದೊದಗಿರುವ ತೀವ್ರ ಅಪಾಯ ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ ವಿಷಾಧಿಸಿದರು.

ಪಟ್ಟಣದ ಪತಂಜಲಿ ಯೋಗಮಂದಿರದಲ್ಲಿ  ಪತಂಜಲಿ ಯೋಗ ಶಿಕ್ಷಣ ಸಮಿತಿ, ಧೇನುಪುರಿ ರೀಜನಲ್  ಟ್ರಸ್ಟ್ ಮತ್ತು ಲಯನ್ಸ ಕ್ಲಬ್ ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಚಿಂತನ-ಮAಥನ  ಕಾರ್ಯಕ್ರಮದಲ್ಲಿ  ಅವರು ವಿಶೇಷ ಉಪನ್ಯಾಸ ನೀಡಿದ ಅವರು, ಮನುಸ್ಮೃತಿ ಶೋಷಣೆಯ ಕೃತಿಯಲ್ಲ, ಮನುಷ್ಯ ಧರ್ಮ ಪೋಷಣೆಯ ಕೃತಿ, ಕೆಳವರ್ಗದವರಿಂದಲಾದರೂ ಶುದ್ಧವಾದ ಜ್ಞಾನ ಸಂಪಾದಿಸು, ಕೆಳವರ್ಗದವರಿಂದಲಾದರೂ ಧರ್ಮವನ್ನು ಅರ್ಥ ಮಾಡಿಕೋ, ಕೆಳವರ್ಗದ ಸ್ತ್ರೀಯನ್ನು ಮೇಲ್ವರ್ಗದವರು ವಿವಾಹವಾಗುವುದೂ ಕೂಡ ಶ್ರೇಯಸ್ಕರ  ಎಂದು ಮನಸ್ಮೃತಿಯಲ್ಲೇ ಹೇಳಿದೆ. ಹೀಗಾಗಿ ಮನಸ್ಮೃತಿ ಯಾವುದೇ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನಾಗಲೀ, ಲಿಂಗ ಶೋಷಣೆಯ ನೀತಿಯನ್ನಾಗಿ ಪ್ರತಿಪಾದಿಸಿಲ್ಲ ಎಂದು ಶ್ಲೋಕಗಳ ಸಮೇತ ಮನವರಿಕೆ ಮಾಡಿಕೊಟ್ಟರು.

ನಿತ್ಯಜೀವನದಲ್ಲಿ ಭಗವದ್ಗೀತೆಯ ಉಪಯೋಗಗಳ ಕುರಿತು ಸುಧೀರ್ಘ ಉಪನ್ಯಾಸ ನೀಡಿದ ಅವರು ಭಗವದ್ಗೀತೆ ಅಧ್ಯಾತ್ಮಿಕ ದೃಷ್ಟಿಗಿಂತ ಮಾನವೀಯ ಮೌಲ್ಯಗಳ ಅಭಿವೃದ್ಧಿಯನ್ನು ಪ್ರೇರೇಪಿಸುತ್ತದೆ.  ಬದುಕಿನ ಒಂದು ಹಂತದಿAದ ಮತ್ತೊಂದು ಹಂತಕ್ಕೆ ಹೋಗಲು ಆದರ್ಶದ ಬೆಂಬಲ ಬೇಕು. ಅಂತಹ ಬೆಂಬಲ, ಆತ್ಮಸ್ಥೈರ್ಯವನ್ನು ಭಗವದ್ಗೀತೆ  ಬದುಕಿನ ಎಲ್ಲಾ ಹಂತಗಳಲ್ಲಿ ನೀಡುತ್ತದೆ. ಭಗವದ್ಗೀತೆ ಎಸಿ ರೂಮಲ್ಲಿ ನಡೆದ ವಿಚಾರ ಸಂಕಿರಣವಲ್ಲ.  ಅದು ಘಟಿಸಿದ್ದು ರಣರಂಗದಲ್ಲಿ! ಜಗತ್ತಿನ ಯುಗಪುರುಷರಿಗೆಲ್ಲಾ ಜ್ಞಾನೋದಯವಾಗಿರುವುದು ಬೆಟ್ಟಗುಡ್ಡಗಳ ಮೇಲೆ,  ಮರಗಳ ಕೆಳಗೇ ಹೊರತು ಅರಮನೆಯ ಸುಪ್ಪತ್ತಿಗೆಯಲ್ಲಲ್ಲ. ಹಾಗಾಗಿ ಭಗವದ್ಗೀತೆ ನಿಜ ಅರ್ಥದಲ್ಲಿ ಕರ್ಮಯೋಗವೆನಿಸುತ್ತದೆ ಎಂದರು.

news_1778821531_0_263.webp

 

ಭಗವದ್ಗೀತೆಯ ಮೌಲ್ಯಗಳನ್ನು ಸಮಗ್ರವಾಗಿ ಕಟ್ಟಿಕೊಟ್ಟ ಸ್ವಾಮೀಜಿ ಭಗವದ್ಗೀತೆ  ಜಾತಿ ಮತ ಮೀರಿದ ಎಲ್ಲಾ ಧರ್ಮ, ಜನಾಂಗದವರಿಗೆ  ಸಾರ್ವತ್ರಿಕವಾಗಿ ಅನ್ವಯ ಆಗುವಂತಾದ್ದು. ಭಗವದ್ಗೀತೆ ಆಂತರಿಕ ಹಾಗೂ ನೈತಿಕ ಬಲ ಹೆಚ್ಚಿಸುತ್ತದೆ.  ಇದೊಂದು ಮಾನವೀಯ ವಿಜ್ಞಾನ, ಅದೂ ಬರೀ ಅಂತೆ ಕಂತೆಗಳ ಉಪದೇಶವಲ್ಲ, ಪ್ರಾಯೋಗಿಕ ಮೌಲ್ಯಗಳುಳ್ಳ ಸಂದೇಶವಾಗಿದ್ದು ತಮ್ಮ ತಮ್ಮ ಶಕ್ತ್ಯಾನುಸಾರ ಈ ತತ್ವಗಳನ್ನು ಜನರು ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಬದುಕನ್ನು ಸದಾ ಕಾಲ ಚೈತನ್ಯಮಯವಾಗಿಟ್ಟುಕೊಳ್ಳಬಹುದು ಎಂದರು. 

ಹಲವು ನಾಗರಿಕ ಸಂಸ್ಥೆಗಳ ವತಿಯಿಂದ ಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಲಾಯಿತು. ಎಚ್.ಕೆ. ಆನಂದರಾಜ್, ವಕೀಲ ರಾಜಶೇಖರ್,  ಬ್ರಾಹ್ಮಣ ಸೇವಾ ಸಭಾದ ಅಧ್ಯಕ್ಷ  ಸತ್ಯನಾರಾಯಣ್, ಸಮಾಜ ಸೇವಕ, ಶಿವಶಕ್ತಿ ಕಲಾವಿದರು ಸಂಸ್ಥೆ ಅಧ್ಯಕ್ಷ ಅಮಾನಿಕೆರೆ ಮಂಜುನಾಥ್, ಲಯನ್ಸ್ ಕ್ಲಬ್ ಅಧ್ಯಕ್ಷ ಪರಮೇಶ್, ಪ್ರಾಣೇಶ್, ಎಸ್.ಎಂ. ಕುಮಾರಸ್ವಾಮಿ. ಡಾ. ನಾಗರಾಜ್, ಗಂಗಾಧರ ದೇವರಮನೆ,  ಟಿ.ಎನ್. ಸರಸ್ವತೀ, ಧೇನುಪುರಿ ರೀಜನಲ್ ಟ್ರಸ್ಟ್ ಅಧ್ಯಕ್ಷ ಟಿ.ಆರ್.ಶ್ರೀಧರ್, ಶಿವಾನಂದ್ ಮೊದಲಾದವರು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಶ್ವಕಪ್ ಫುಟ್‌ಬಾಲ್: ಕೊಲಂಬಿಯಾಗೆ ೩-೧ ರ ಜಯದೆಹಲಿಯಲ್ಲೂ ದೋಸೆಯ ಘಮ, ಘಮ15 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಫ್ ಡಿಎ ಗ್ಲೇನ್ ಫಿಲಿಪ್ಸ್ ಶತಕ: ಕಿವೀಸ್ ಉತ್ತಮ ಮೊತ್ತಮುಖ್ಯಮಂತ್ರಿಯಾದ ಬಳಿಕ ಮೊದಲ ಟಾಸ್ಕ್ ನಲ್ಲೇ ಗೆದ್ದು ಬೀಗಿದ ಡಿ.ಕೆ.ಶಿವಕುಮಾರ್ ಮತದಾನ ಹಕ್ಕು ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು : ಡಿ.ಕೆ.ಶಿವಕುಮಾರ್60ನೇ ವಯಸ್ಸಿನಲ್ಲಿ ಪೇಸ್ ಬುಕ್ ಲವ್ : 80 ವರ್ಷದ ವರನ ವರಿಸಿದ ಹಿರಿಯ ನಟಿ ಸ್ಯಾಂಡ್ ಮಾಫಿಯಾ : ಬಿಜೆಪಿ ಮುಖಂಡ ಸೇರಿ ಮೂವರನ್ನು ಕಾರಿನಲ್ಲೇ ಸುಟ್ಟ ಕಿರಾತಕರುವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಐದೂ ಅಭ್ಯರ್ಥಿಗಳು ಗೆಲುವು ಪಕ್ಕಾ : ಲಕ್ಷ್ಮೀ ಹೆಬ್ಬಾಳ್ಕರ್ಸದ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕಡಿಮೆಯಾಗುವುದಿಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ