LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಡಾ.ಸಂದೇಶಗೌಡರ ವೈದ್ಯಕೀಯ ಸೇವೆ ಗ್ರಾಮೀಣ ಜನರಿಗೆ ವರದಾನವಾಗಲಿ :  ಹೆಚ್.ಶರ್ಫುದ್ದೀನ್ ಪೋತ್ನಾಳ. 

Advertisement

ಮಾನ್ವಿ : ಖ್ಯಾತ ನ್ಯಾಯವಾದಿ ಎಂ.ವೀರನಗೌಡ ಪೋತ್ನಾಳ ಅವರ ಸುಪುತ್ರ ಡಾ.M.ಸಂದೇಶಗೌಡ ಅವರು ಎಂಬಿಬಿಎಸ್ ಪದವಿ ಪೂರೈಸಿ ಪೋತ್ನಾಳ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸಲು ಮುಂದಾಗಿರುವುದು ಈ ಭಾಗದ ಗ್ರಾಮೀಣ ಜನರಿಗೆ ಬಹಳ ಅನುಕೂಲಕರವಾಗಲಿದೆ  ಎಂದು ಮಾನ್ವಿ ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ  ಹೆಚ್. ಶರ್ಫುದ್ದೀನ್ ಪೋತ್ನಾಳ ಹೇಳಿದರು.  ತಾಲೂಕಿನ ಪೋತ್ನಾಳ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ವೈಧ್ಯಾಧಿಕಾರಿಯಾಗಿ ಪ್ರಥಮ ಬಾರಿಗೆ ಆಗಮಿಸಿದ ಡಾ.ಸಂದೇಶಗೌಡ ಇವರಿಗೆ ಗ್ರಾಮದ ಮುಖಂಡರು ಮತ್ತು ಗೆಳೆಯರ ಬಳಗದಿಂದ  ಏರ್ಪಡಿಸಿದ್ದ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ಪೋತ್ನಾಳ ಗ್ರಾಮದಲ್ಲಿ ಹುಟ್ಟಿ ಬೆಳೆದು, ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೇ ಪಡೆದು ವೈದ್ಯಕೀಯ ಶಿಕ್ಷಣದಲ್ಲಿ ಉನ್ನತ ಪದವಿ ಗಳಿಸಿ ತಮ್ಮ ಹುಟ್ಟೂರಿನ ಸರ್ಕಾರಿ ಆಸ್ಪತ್ರೆಯಲ್ಲೇ ಮೊದಲ ಬಾರಿಗೆ ವೈದ್ಯಕೀಯ ಸೇವೆ ಸಲ್ಲಿಸಲು ಅವಕಾಶ ಪಡೆದಿರುವುದು ಅತ್ಯಂತ ಹೆಮ್ಮೆಯ ಮತ್ತು ಮಾದರಿಯ ವಿಷಯವಾಗಿದೆ ಎಂದು ಹೆಚ್.ಶರ್ಫುದ್ದೀನ್ ಶ್ಲಾಘಿಸಿದರು.
ಗ್ರಾಮೀಣ ಭಾಗದಲ್ಲಿ ತಜ್ಞ ವೈದ್ಯರ ಕೊರತೆ ಇರುವ ಈ ಸಂದರ್ಭದಲ್ಲಿ ಸ್ಥಳೀಯ ಪ್ರತಿಭೆಯೊಬ್ಬರು ಇಲ್ಲಿಯೇ ಸೇವೆ ಸಲ್ಲಿಸಲು ಬಂದಿರುವುದು ರೋಗಿಗಳಲ್ಲಿ ವಿಶ್ವಾಸ ಮೂಡಿಸಿದೆ. ಡಾ.ಸಂದೇಶಗೌಡ ಅವರ ಸೇವೆಯು ಬಡವರಿಗೆ, ರೈತರಿಗೆ ಮತ್ತು ಗ್ರಾಮೀಣ ಜನತೆಗೆ ಅನುಕೂಲವಾಗಲಿ. ಅವರ ಸೇವೆ ನಿರಂತರವಾಗಿ ಈ ಭಾಗದ ಜನರಿಗೆ ಲಭಿಸಲಿ ಎಂದು ಹೆಚ್.ಶರ್ಫುದ್ದೀನ್ ಪೋತ್ನಾಳ ಆಶಿಸಿದರು.  ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಸಂದೇಶಗೌಡ ಅವರು ನಾನು ಹುಟ್ಟಿ ಬೆಳೆದ ಊರಿನಲ್ಲೇ ವೈದ್ಯಕೀಯ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಹುಟ್ಟೂರಿನ ಜನರ ಸೇವೆ ಮಾಡುವುದೇ ನನ್ನ ಮೊದಲ ಗುರಿ ಎಂದು ಭಾವುಕರಾಗಿ ನುಡಿದರು.

ನನ್ನ ತಂದೆ ಖ್ಯಾತ ನ್ಯಾಯವಾದಿ ಎಂ.ವೀರನಗೌಡ ಅವರು ನೀಡಿದ ಸಂಸ್ಕಾರ ಮತ್ತು ಊರಿನ ಹಿರಿಯರು ತೋರಿದ ಪ್ರೀತಿಯಿಂದಾಗಿ ನಾನು ವೈದ್ಯನಾಗಲು ಸಾಧ್ಯವಾಯಿತು. ಗ್ರಾಮೀಣ ಭಾಗದ ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದು, ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರಲ್ಲಿ ಇರುವ ವಿಶ್ವಾಸವನ್ನು ಹೆಚ್ಚಿಸುವುದು ನನ್ನ ಜವಾಬ್ದಾರಿ ಎಂದರು. ಗ್ರಾಮೀಣ ಪ್ರದೇಶದ ಜನರು ಸಣ್ಣಪುಟ್ಟ ಕಾಯಿಲೆಗೂ ದೂರದ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಹಣ ವ್ಯಯ ಮಾಡುವ ಅಗತ್ಯವಿಲ್ಲ. ಪೋತ್ನಾಳ ಸರ್ಕಾರಿ ಆಸ್ಪತ್ರೆಯಲ್ಲೇ ಎಲ್ಲಾ ರೀತಿಯ ಪ್ರಾಥಮಿಕ ಚಿಕಿತ್ಸೆ ಲಭ್ಯವಿದ್ದು ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ನನ್ನ ಸೇವೆ ಸದಾ ಗ್ರಾಮೀಣ ಜನರಿಗೆ ಲಭ್ಯವಿರುತ್ತದೆ. ಜನರ ಆರೋಗ್ಯವೇ ನನ್ನ ಸಂಪತ್ತು ಎಂದು ಡಾ.ಸಂದೇಶಗೌಡ ಹೇಳಿದರು. 

ಈ ಸಂದರ್ಭದಲ್ಲಿ ಪೋತ್ನಾಳ ಗ್ರಾಮದ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು, ಆಸ್ಪತ್ರೆ ಸಿಬ್ಬಂದಿಗಳು ಡಾ.ಸಂದೇಶಗೌಡ ಅವರನ್ನು ಪ್ರೀತಿಯಿಂದ ಸ್ವಾಗತಿಸಿಕೊಂಡು ಅವರ ಭವಿಷ್ಯದ ವೈದ್ಯಕೀಯ ಸೇವೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

ಈ ವೇಳೆ ಪೋತ್ನಾಳ ಗ್ರಾಮದ ಹಿರಿಯ ಮುಖಂಡರಾದ ಕೆ.ಎಸ್.ಕುಮಾರಸ್ವಾಮಿ, ಆರ್.ಬಸವರಾಜ ಶೆಟ್ಟಿ, ಶರಣಬಸವ ಸಾಹುಕಾರ, (ಮುನ್ನಾ) ಅಮರೇಶ ಕಟ್ಟಿಮನಿ, ಮಲ್ಲಯ್ಯ ಸಾಹುಕಾರ ಸುಂಕನೂರು, ರಾಮನಗೌಡ ಬಂಗಾರಿ, ನಾಗಯ್ಯಸ್ವಾಮಿ, ಎಂ.ಪಿ. ಷರೀಫ್, ಬಸವರಾಜ ಭೋವಿ, ಪಾಶ್ವ೯ನಾಥಗೌಡ ಪಾಟೀಲ್, ಬಸವರಾಜ ಗುಜ್ಜಲ್, ಮಲ್ಲೇಶ ದೇವರಮನಿ, ಹೊನ್ನೂರುಸಾಬ್, ಶಿವಗೇನಿ ದೇವರಮನಿ, ಹುಚ್ಚಪ್ಪ ದೇವರಮನಿ, ಪರಶುರಾಮ ಬಂಗಾರಿ, ಮಲ್ಲಿಕಾಜಿ ನಾರಿನಾಳ, ಹುಚ್ಚಪ್ಪ ಚಲುವಾದಿ ಸೇರಿದಂತೆ ಅನೇಕ ಮುಖಂಡರು, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಇದ್ದರು.
ವರದಿ : ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಸಚಿವ ಸತೀಶ್ ಜಾರಕಿಹೊಳಿಗೆ ಮನೆ ಮೇಲೆ ಇಡಿ ದಾಳಿ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ : ಕನ್ನಡ ಮಾಧ್ಯಮ ಶಾಲೆಗೆ ಅನುದಾನ ನೀಡುವಂತೆ ಆಗ್ರಹ ಸಿಎಂ ಸಂಪರ್ಕ ಸಲಹೆಗಾರರಾಗಿ ದೀಪಕ್ ತಿಮ್ಮಯ್ಯ ನೇಮಕ ನಾಳೆ ಡಿ. ಕೆ ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ 100 ದಿನ : ಮಹತ್ವದ ಘೋಷಣೆ ಸಾಧ್ಯತೆ ಕಾಸ್ಮೆಟಿಕ್ ಟ್ರೀಟ್‌ಮೆಂಟ್ ಬಳಿಕ ಉದ್ಯಮಿ ದುರ್ಮರಣ :7 ಕೋಟಿ ರೂ. ಚಿನ್ನದ ಶವಪೆಟ್ಟಿಗೆಯಲ್ಲಿ ಅಂತ್ಯಕ್ರಿಯೆ ನಾಳೆಯಿಂದ ಇಂಗ್ಲೆಂಡ್- ಪಾಕಿಸ್ತಾನ ತೃತೀಯ ಟೆಸ್ಟ್ ಶುರು ವಿಜಯೇಂದ್ರ ಏನೇ ಪಾದಯಾತ್ರೆ ಮಾಡಿದ್ರೂ ರಾಜ್ಯಾಧ್ಯಕ್ಷ ಸ್ಥಾನದಿಂದ ಔಟ್ ಫಿಕ್ಸ್ : ಯತ್ನಾಳ್ ಡಿಕೆಶಿ ಸರ್ಕಾರಕ್ಕೆ 100 ದಿನದ ಸಂಭ್ರಮ : ಡಿ. ಕೆ ಶಿವಕುಮಾರ್ ಗೆ ಹೈಕಮಾಂಡ್ ಬುಲಾವ್ಸರ್ವಜನಾಂಗದ ಹಿತಕ್ಕಾಗಿ ಭಗವಂತನೇ ಸೃಷ್ಟಿಸಿದ ಯೋಜನೆ: ಮೃತ್ಯುಂಜಯ ದೇಶೀಕೇಂದ್ರ ಶ್ರೀ ಶ್ಲಾಘನೆಮಾನ್ವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆ ಒಕ್ಕೂಟದ ವತಿಯಿಂದ ಶಿಕ್ಷಕರ ದಿನಾಚರಣೆ.  ಶ್ರೀ ರಾಜಾ ಸುಭಾಷ್ ಚಂದ್ರ ನಾಯಕ್