Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿಪ್ಪಾಣಿ ಮಂಡಲ್ ಪೊಲೀಸರಿಂದ 14 ಲಕ್ಷ ರೂ ಮೌಲ್ಯದ 92 ಮೊಬೈಲ್ ವಶಕ್ಕೆಪಡೆದು ವಂಚಿತರಿಗೆ ಮರಳಿ ಹಸ್ತಾಂತರ 

Advertisement
ನಿಪ್ಪಾಣಿ ಶಹರ ಗ್ರಾಮೀಣ ಹಾಗೂ ಬಸವೇಶ್ವರ ಚೌಕ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದುಕೊಂಡಿದ್ದ 14 ಲಕ್ಷ ರೂಪಾಯಿಗಳ ಮೌಲ್ಯದ 92 ಮೊಬೈಲ್ ಗಳನ್ನು ಪೊಲೀಸರು ಜತ್ತಿ ಮಾಡಿ ಮೊಬೈಲ್ ಕಳೆದುಕೊಂಡವರಿಗೆ ಶುಕ್ರವಾರ ಹಸ್ತಾಂತರಿಸಿದರು. ಚಿಕ್ಕೋಡಿಯ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಡಲ್ ಪೊಲೀಸ್ ನಿರೀಕ್ಷಕ ಬಿ ಎಸ್ ತಳವಾರ್ ಹಾಗೂ ಪೊಲೀಸ್ ಉಪನಿರೀಕ್ಷಕರ ಹಸ್ತದಿಂದ ಸಂಬಂಧಿಸಿದವರಿಗೆ ಮೊಬೈಲ್ ಗಳನ್ನು ಹಸ್ತಾಂತರಿಸಲಾಯಿತು. ಮೊಬೈಲ್ ಕಳೆದುಕೊಂಡ ವಂಚಿತರಿಗೆ ಮರಳಿ ಸಿಕ್ಕಿದ್ದರಿಂದ ಪಡೆದುಕೊಂಡವರ ಮುಖದಲ್ಲಿ ಸಮಾಧಾನದ ನಿಟ್ಟುಸಿರೊಂದಿಗೆ ನಗೆ ಮೂಡಿತ್ತು.



ಕಳೆದ ಎರಡು ವರ್ಷಗಳಿಂದ ನಿಪ್ಪಾಣಿ ನಗರದಲ್ಲಿಯ 3 ಪೋಲಿಸ ಠಾಣೆಗಳ ವ್ಯಾಪ್ತಿಯಲ್ಲಿಯ ಕೇಂದ್ರ ಬಸ್ ನಿಲ್ದಾಣ, ಮಾರುಕಟ್ಟೆ ರಸ್ತೆ, ಕಿತ್ತೂರು ಚನ್ನಮ್ಮ ವೃತ್ತ ಸೇರಿ ಜನಬಿಡದೀ ಪ್ರದೇಶಗಳಲ್ಲಿ ಮೊಬೈಲ್ ಕಳೆದುಕೊಂಡವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಅದರಂತೆ ಪೊಲೀಸರು ಕಾರ್ಯಕರ್ತರರಾಗಿ 92 ಮೊಬೈಲ್ ಗಳನ್ನು ಶಕ್ತಿ ಮಾಡಿದ್ದರು ನಿಪ್ಪಾಣಿ ಶಹರ್ ಪೊಲೀಸ್ ಠಾಣೆಯಿಂದ 11ಲಕ್ಷ 92, ಸಾವಿರ ರೂಪಾಯಿ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಿಂದ 1 ಲಕ್ಷ 22ಸಾವಿರ ಮೌಲ್ಯದ,ಹಾಗೂ ನಿಪ್ಪಾಣಿ ಬಸವೇಶ್ವರ ಪೋಲಿಸ್ ಠಾಣೆಯಿಂದ 1ಲಕ್ಷ 9 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಗಳನ್ನು ಜಪ್ತಿ ಮಾಡಿದ್ದರು. ಇದು ಅಲ್ಲದೆ ಚಿಕ್ಕೋಡಿ ಪಟ್ಟಣದಲ್ಲಿಯ ನೂರಕ್ಕೂ ಅಧಿಕ ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದು ಇದರ ಕುರಿತು ಮಾಹಿತಿ ಪಡೆದು ಆದಷ್ಟು ಬೇಗ ಮೊಬೈಲ್ ವಂಚಿತರಿಗೆ ಹಸ್ತಾಂತರಿಸಲಾಗುವುದೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಂಡಲ್ ಪೊಲೀಸ್ ನಿರೀಕ್ಷಕ ಬಿ ಎಸ್ ತಳವಾರ್ ಮಾತನಾಡಿ ಮೊಬೈಲ್ ಕಳ್ಳರಿಂದ ಜಾಗೃತರಾಗಿರಬೇಕು ಹಾಗೂ ಕಳೆದುಕೊಂಡ ಮೊಬೈಲ್ ಕುರಿತು ಸಂಬಂಧಿಸಿದ ಪೊಲೀಸ್ ಠಾಣಾ ವ್ಯಾಪ್ತಿಗಳಿಗೆ ದೂರು ನೀಡಬೇಕೆಂದರು. ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ್ ಅವರ ನೇತೃತ್ವದಲ್ಲಿ ಮಂಡಲ್ ಪೊಲೀಸ್ ನಿರೀಕ್ಷಕ ಬಿ.ಎಸ್ ತಳವಾರ್ ಪೊಲೀಸ್ ಠಾಣೆಯ ಉಪನಿರೀಕ್ಷಕ ಶಿವಾನಂದ ಕಾರಿಜೋಳ ಪೊಲೀಸ್ ಉಪನಿರೀಕ್ಷಕ ಶಿವರಾಜ್ ನಾಯಕವಾಡಿ ಬಸವೇಶ್ವರ ಚೌಕ ಪೊಲೀಸ್ ಠಾಣೆ ಉಪನಿರೀಕ್ಷಕ ರಮೇಶ್ ಪವಾರ್ ಇವರ ಮಾರ್ಗದರ್ಶನದಲ್ಲಿ ಎಂ ಕಲಾ ವಂತ್, ಯು ಆರ್ ಮಾಳಿಗೆ ಎಂ ಎ ತೇರದಾಳ ಎ ಎಸ್ ಕುಂಬಾರ ಎಸ್ ಎ ಮುಲ್ಲಾ ತಪಾಸನೆ ತಂಡದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಪೊಲೀಸ್ ಪ್ರಮುಖರು ಸದರಿ ತಂಡವನ್ನು ಅಭಿಮಂಡಿಸಿದ್ದಾರೆ.

ವರದಿ:ಮಹಾವೀರ ಚಿಂಚಣೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಲ್ಲಮ್ಮನ ಬೆಳವಡಿಯಲ್ಲಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕೆಪಿಸಿಸಿ ಕಚೇರಿಯಲ್ಲಿಯೇ ಯೂಥ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಭಾರಿ ಹೊಡೆದಾಟಕಾಂಗ್ರೆಸ್ ಭವನಕ್ಕೆ ನಿವೇಶನ ನೀಡಿದರೆ ಉಗ್ರ ಹೋರಾಟ: ನವೀನ್ ಬಾಬುಸ್ವೀಡನ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದುಕೊಂಡ ಮೋದಿ : ಪ್ರಧಾನಿಗೆ 31 ಪ್ರಶಸ್ತಿ ಗರಿ SSLC - ಪಿಯುಸಿ ಮುಗಿಯುತ್ತಿದಂತೆ ನಾಪತ್ತೆಯಾಗುತ್ತಿರುವ ಬಾಲಕಿಯರು : 19 ಕೇಸ್ ಪತ್ತೆ ಪ್ಲೇ ಆಪ್: ೭ ತಂಡಗಳಿAದ ೩ ಸ್ಥಾನಗಳಿಗೆ ಪೈಪೋಟಿಕಾಲೇಜಿನಲ್ಲಿ ಕಳ್ಳತನ 24 ಗಂಟೆಯೊಳಗೆ ಪ್ರಕರಣ ಭೇದಿಸಿದ ಐಗಳಿ ಪೊಲೀಸರುಕೇರಳ ನೂತನ ಸಿಎಂಯಾಗಿ ವಿ.ಡಿ. ಸತೀಶನ್ ಪ್ರಮಾಣವಚನ ಸ್ವೀಕಾರಸುದೀರ್ಘ 8 ವರ್ಷಗಳ ಆಡಳಿತ ಪೂರ್ಣಗೊಳಿಸಿದ ಏಕೈಕ ವ್ಯಕ್ತಿಯಾದ ಸಿದ್ದರಾಮಯ್ಯ ಬಾಂಗ್ಲಾ ತಂಡಕ್ಕೆ ೧೬೭ ರನ್‌ಗಳ ಮುನ್ನಡೆ