ಬೆಂಗಳೂರು : ಸದ್ಯಕ್ಕೆ ಯಾವುದೇ ಬಿಪಿಎಲ್ ಎಪಿಎಲ್ ಕಾರ್ಡ್ ರದ್ದು ಮಾಡಲ್ಲ. ಮೂರು ತಿಂಗಳು ಯಾವುದೇ ಕಾರ್ಡ್ ರದ್ದು ಮಾಡದಂತೆ ಸೂಚನೆ ನೀಡಿದ್ದೇನೆ ಎಂದು ಮೈಸೂರಿನಲ್ಲಿ ಆಹಾರ ಸಚಿವ ರಿಜ್ವಾನ್ ಅರ್ಷದ ಹೇಳಿಕೆ ನೀಡಿದರು.
ಬಿಪಿಎಲ್ ಮಾನದಂಡ ಇಂದಿನ ಆರ್ಥಿಕ ವ್ಯವಸ್ಥೆಗೆ ಸರಿ ಹೋಗುತ್ತಿಲ್ಲ. ಮಾನದಂಡಗಳನ್ನು ಬದಲಿಸಬೇಕಿದೆ.
ಬಹಳಷ್ಟು ಅರ್ಹರು ಬಿಪಿಎಲ್ ಕಾರ್ಡ್ ನಿಂದ ಹೊರಗೆ ಉಳಿದಿದ್ದಾರೆ. ಅರ್ಹರನ್ನು ಬಿಪಿಎಲ್ ಕಾರ್ಡ್ನೊಳಗೆ ಸೇರಿಸಬೇಕಿದೆ. ಏಕಾಏಕಿ ಡಿಲೀಟ್ ಮಾಡಿದರೆ ಬಡವರಿಗೆ ಅನ್ಯಾಯವಾಗುತ್ತದೆ ಎಂದರು.
ಇನ್ನು ಬಸವರಾಜ್ ರಾಯರೆಡ್ಡಿ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ರಾಯರೆಡ್ಡಿ ಮುಸ್ಲಿಂ ಧರ್ಮದ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ.
ಅದರಲ್ಲಿ ತಪ್ಪು ಯಾಕೆ ಹುಡುಕಬೇಕು? ಸಚಿವರಾಯ ರೆಡ್ಡಿ ಬೇರೆ ಯಾವುದೇ ಧರ್ಮವನ್ನು ಟೀಕಿಸಿಲ್ಲ. ನಾಳೆ ನಾನು ಕೂಡ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗುತ್ತೇನೆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಅದು ತಪ್ಪ?
ರಾಯರೆಡ್ಡಿ ಮುಸ್ಲಿಂ ಧರ್ಮ ಮಾತ್ರ ಶ್ರೇಷ್ಠ ಎಂದು ಹೇಳಿಲ್ಲ ಬಿಜೆಪಿಗೆ ಯಾವಾಗಲೂ ಹಿಂದೂ ಮುಸ್ಲಿಂ ವಿಚಾರ ಬೇಕು ಹಿಂದೂ ಮುಸ್ಲಿಂ ಅಜೆಂಡ ಮಾತ್ರ ಬಿಜೆಪಿಯ ರಾಜಕೀಯ ವಿಷಯವಾಗಿದೆ. ಬಿಜೆಪಿಯ ಒಬ್ಬೇ ಒಬ್ಬ ಕೂಡ ಬರದ ಬಗ್ಗೆ ಮಾತನಾಡಿಲ್ಲ ಎಂದು ಮೈಸೂರಿನಲ್ಲಿ ಆಹಾರ ಸಚಿವ ರಿಜ್ವಾನ ಆರ್ಷದ್ ಹೇಳಿಕೆ ನೀಡಿದರು.


