ಬೆಳಗಾವಿ :ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಇಂದು ರಾಮದುರ್ಗದ ಉಪವಿಭಾಗ ಮತ್ತು ವಿಭಾಗದ ವತಿಯಿಂದ ಅತ್ಯಂತ ಗಂಭೀರವಾದ ಮತ್ತು ಕಳವಳಕಾರಿ ವಿಷಯವೊಂದನ್ನು ಖಂಡಿಸಲು ಕಛೇರಿ ಆವರಣದಲ್ಲಿ ಜಮಾಯಿಸಿದರು.
ನೂರಾರು ವರ್ಷಗಳಿಂದ ಸಾರ್ವಜನಿಕರ ಹಿತ ಕಾಯುತ್ತಿದ್ದ ಸಂಸ್ಥೆಯನ್ನು, ಟಾಟಾ ಕಂಪನಿಯು ಖಾಸಗೀಕರಣ ಮಾಡಲಿಕ್ಕೆ ಅರ್ಜಿ ಹಾಕಿದೆ. ಈ ನಡೆ ಕೇವಲ ಒಂದು ಕಂಪನಿಯ ಲಾಭಕ್ಕಾಗಿಯೇ ಹೊರತು, ನಮ್ಮ ಸಾಮಾನ್ಯ ಜನರ ಹಿತಕ್ಕಾಗಿ ಖಂಡಿತ ಅಲ್ಲ. ಇದನ್ನು ಒಕ್ಕೊರಲಿನಿಂದ, ತೀವ್ರವಾಗಿ ವಿರೋಧಿಸುತ್ತವೆ !"
ಟಾಟಾ ಕಂಪನಿ ಸಲ್ಲಿಸಿರುವ ಈ ಖಾಸಗೀಕರಣದ ಅರ್ಜಿಯನ್ನು ಸರ್ಕಾರ ತಕ್ಷಣವೇ ತಿರಸ್ಕರಿಸಬೇಕು. ಲಾಭದ ಹಪಾಹಪಿಗೆ ಬಿದ್ದು ಸಾರ್ವಜನಿಕ ವ್ಯವಸ್ಥೆಯನ್ನು ಖಾಸಗಿಯವರ ಪಾಲು ಮಾಡಲು ನಾವು ಬಿಡುವುದಿಲ್ಲ.
ರಾಮದುರ್ಗ ಉಪವಿಭಾಗದ ಪ್ರತಿಯೊಬ್ಬ ನಾಗರಿಕನೂ ಇವತ್ತು ಈ ಹೋರಾಟಕ್ಕೆ ಕೈಜೋಡಿಸಿದ್ದಾರೆ ಒಂದು ವೇಳೆ ಈ ಅರ್ಜಿಯನ್ನು ಪುರಸ್ಕರಿಸಿ, ಖಾಸಗೀಕರಣಕ್ಕೆ ಮುಂದಾದರೆ ಮುಂದಿನ ದಿನಗಳಲ್ಲಿ ಇಡೀ ತಾಲೂಕು ಮತ್ತು ಜಿಲ್ಲಾದ್ಯಂತ ಉಗ್ರವಾದ ಪ್ರತಿಭಟನೆ, ಧರಣಿ ಮತ್ತು ರಸ್ತೆ ತಡೆ ಚಳವಳಿಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ನೇರವಾಗಿ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿದರು.
ವರದಿ: ಮಂಜುನಾಥ್ ಕಲಾದಗಿ


