ಕಾಗವಾಡ: ತಾಲೂಕಾಡಳಿತ, ತಾಲೂಕಾ ಪಂಚಾಯತ ಇವರ ಇವರ ಸಂಯುಕ್ತಾಶ್ರದಲ್ಲಿ ಶನಿವಾರ ಸೆಪ್ಟಂಬರ್ 5 ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ, ಗುರು-ಶಿಷ್ಯರ ನಮನ ಕಾರ್ಯಕ್ರಮದ ಪ್ರಯುಕ್ತ ಪೂರ್ವಿಭಾವಿಯಾಗಿ ಗುರುವಾರ ದಿ. 3 ರಂದು ಬೆಳಿಗ್ಗೆ 8 ರಿಂದ ಸಂಜೆ 6 ರ ವರೆಗೆ ಐನಾಪೂರ ಪಟ್ಟಣದ ಕೆಆರ್‌ಎಸ್ ಪ.ಪೂ. ಕಾಲೇಜಿನ ಸಭಾಭವನದಲ್ಲಿ ಬೃಹತ್ ರಕ್ತದಾನ ಶಿಬಿರದನ್ನು ಹಮ್ಮಿಕೊಳ್ಳಲಾಗಿದ್ದು, ಶಿಬಿರದಲ್ಲಿ ತಾಲೂಕಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ, ಯಶಸ್ವಿಗೊಳಿಸಬೇಕೆಂದು ತಾ.ಪಂ. ಇಓ ವೀರಣ್ಣ ವಾಲಿ ತಿಳಿಸಿದ್ದಾರೆ.

ಅವರು, ಮಂಗಳವಾರ ದಿ. 01 ರಂದು ತಾಲೂಕಾ ಪಂಚಾಯತ ಕಾರ್ಯಲಯದಲ್ಲಿ ಬೃಹತ್ ಉಚಿತ ರಕ್ತದಾನ ಶಿಬಿರದ ಕುರಿತು ವಿವಿಧ ಇಲಾಖೆಯ ತಾಲೂಕ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪೂರ್ವಿಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಶಿಬಿರದಲ್ಲಿ 18 ವರ್ಷ ಮೇಲ್ಪಟ್ಟು ಮತ್ತು 55 ವರ್ಷ ಒಳಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದ್ದಾರೆ.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚನ್ನಿಗರಾಮಯ್ಯ, ಶಿಶು ಅಭಿವೃದ್ಧಿ ಅಧಿಕಾರಿ ಸಂಜೀವಕುಮಾರ ಸದಲಗೆ, ತಾಲೂಕಾ ಆರೋಗ್ಯಾಧಿಕಾರಿ ಡಾ, ಬಸಗೌಡ ಕಾಗೆ, ಪಿಎಂ ಪೋಶನ್ ಅಭಿಯಾನ ಸಹಾಯಕ ನಿರ್ದೇಶಕ ಎಂ.ವಿ. ನಾಮಾದಾರ, ಸಿಆರ್‌ಸಿ ಪಾಂಡುರAಗ ಮಧಬಾವಿ, ಮೆಹಬೂಬ ಮುಜಾವರ, ಎ.ಡಿ. ಅನ್ಸಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ. ಚಂದ್ರಕಾಂತ ಕಾಂಬಳೆ


