ಪಂಚ ರಾಜ್ಯಗಳ ಚುನಾವಣೆಗೆ ಸಂಬAಧಿಸಿದAತೆ ಎಲ್ಲ ಐದು ರಾಜ್ಯಗಳಲ್ಲಿ ಇಂದು ಕಡೆಯ ಹಂತದ ಮತದಾನ ಮುಗಿದಿದೆ. ಏತನ್ಮಧ್ಯೆ ಎಲ್ಲ ಐದೂ ರಾಜ್ಯಗಳ ಮತದಾನ ನಂತರದ ಸಮೀಕ್ಷೆ ವರದಿ (ಎಕ್ಸಿಟ್ ಪೋಲ್) ಬಹಿರಂಗಗೊAಡಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ.
ತಮಿಳು ನಾಡಿನಲ್ಲಿ ಡಿಎಂಕೆ ಅಧಿಕಾರದಲ್ಲಿ ಮುಂದುವರೆಯಲಿದೆ ಎಂದು ಸಮೀಕ್ಷೆ (ಎಕ್ಸಿಟ್ ಪೋಲ್) ಹೇಳಿದ್ದು, ಆಸ್ಸಾಮ್‌ನಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧಿಸಲಿದೆ.
ಕೇರಳದಲ್ಲಿ ಕಾಂಗ್ರೆಸ್ ಹಾಗೂ ಕಮುನಿಷ್ಟ ಪಕ್ಷಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿಟ್ಟಿದೆ ಎಂದು ಸಮೀಕ್ಷೆ ವರದಿಗಳು ಹೇಳಿವೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಆದರೆ ಇದು ಸಮೀಕ್ಷೆಯಷ್ಟೇ ಆಗಿದ್ದು, ಮೇ. ೪ ರಂದು ಅಂತಿಮ ಫಲಿತಾಂಶ ಹೊರ ಬೀಳಲಿದೆ.

