Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

15 ಸಾವಿರ ಲಂಚ ಪಡೆದ ಆರೋಪ : ಪಿಡಿಒಗೆ ನಾಲ್ಕು ವರ್ಷ ಜೈಲು ಶಿಕ್ಷೆ, 75 ಸಾವಿರ ದಂಡ

Advertisement
ಲಿಂಗಸುಗೂರು: ದನದ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನ ಬಿಡುಗಡೆ ಮಾಡಲು ₹15 ಸಾವಿರ ಲಂಚ ಸ್ವೀಕರಿಸಿದ್ದ ಗೊರೆಬಾಳ ಗ್ರಾಮ ಪಂಚಾಯಿತಿ ಪಿಡಿಒ ಮಹಮ್ಮದ್ ಖಾಜಾಗೆ ಲಿಂಗಸುಗೂರಿನ ಮೂರನೇ ಅಧಿಕ ಮತ್ತು ಜಿಲ್ಲಾ ಸೆಷೆನ್ಸ್ ನ್ಯಾಯಾಲಯವು ಶುಕ್ರವಾರ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ ₹ 75 ಸಾವಿರ ದಂಡ ವಿಧಿಸಿದೆ.

ನ್ಯಾಯಾಧೀಶ ಬಿ.ಬಿ.ಜಕಾತಿ ಅವರು ಅಪರಾಧಿ ಪಿಡಿಒ ಮಹಮ್ಮದ್ ಖಾಜಾಗೆ ಭ್ರಷ್ಟಚಾರ ಪ್ರತಿಬಂಧ ಕಾಯ್ದೆ 1988 ರ ಕಲಂ 7 ರಡಿಯಲ್ಲಿ ಮೂರು ವರ್ಷ ಜೈಲು ಶಿಕ್ಷೆ ಹಾಗೂ ₹ 25 ಸಾವಿರ ದಂಡ ಹಾಗೂ ಕಲಂ 13(1)(ಡಿ) ಸಹಿತ 13(2) ಅಡಿಯಲ್ಲಿ 4ವರ್ಷ ಜೈಲು ಶಿಕ್ಷೆ ₹ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.


ಲಿಂಗಸುಗೂರು ತಾಲ್ಲೂಕಿನ ಗೊರೆಬಾಳ ತಾಂಡಾದ ಚೇತನ್ ಲೋಕಪ್ಪ ಅವರು ದನದ ಕೊಟ್ಟಿಗೆ ನಿರ್ಮಿಸಲು ಅಗತ್ಯವಿದ್ದ ಸಹಾಯಧನ ಬಿಡುಗಡೆ ಮಾಡಲು ಗೊರೆಬಾಳ ಪಿಡಿಒ ಮಹಮ್ಮದ್ ಖಾಜಾ ಅವರಿಗೆ ಮನವಿ ಮಾಡಿದ್ದರು.


ಆದರೆ, ಅವರು ಸಹಾಯಧನ ಬಿಡುಗಡೆಗೆ ₹ 15 ಸಾವಿರ ಲಂಚ ಕೇಳಿದ್ದರು. ಚೇತನ್, 2017ರ ನವೆಂಬರ್ 22ರಂದು ಎಸಿಬಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.


ಚೇತನ್‌ ಅವರಿಂದ ಪಿಡಿಒ ಮಹಮ್ಮದ್ ಖಾಜಾ ₹15 ಸಾವಿರ ಲಂಚ ಪಡೆಯುವಾಗ ಎಸಿಬಿಗೆ ಬಲೆಗೆ ಬಿದ್ದಿದ್ದರು. ಆರೋಪಿಯನ್ನು ಬಂಧಿಸಿ ಪೋಲಿಸ್ ಇನ್‌ಸ್ಪೆಕ್ಟರ್ ಶ್ರೀಧರ ದೊಡ್ಡಿ ಅವರು ದೋಷಾರೋಪ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.


ಈ ಪ್ರಕರಣದಲ್ಲಿ ಪಿರ್ಯಾದಿ ಚೇತನ್ ಲೋಕಪ್ಪ ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷಿ ನೀಡಿದ್ದಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಿ ಅಭಿಯೋಜಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.


ನ್ಯಾಯಾಲಯವು ಅರ್ಜಿಯನ್ನು ಪರಿಗಣಿಸಿ ನ್ಯಾಯಾಲಯದ ಶಿರಸ್ತೇದಾರರಿಗೆ ಪಿರ್ಯಾದಿ ಚೇತನ್ ಲೋಕಪ್ಪ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದೆ. ಲೋಕಾಯುಕ್ತ ಪರವಾಗಿ ಸರ್ಕಾರಿ ಅಭಿಯೋಜಕ ಬಸವರಾಜ ಹೊಸಳ್ಳಿ ವಾದ ಮಂಡಿಸಿದ್ದರು.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭರ್ಜರಿ ಗೆಲುವಿನೊಂದಿಗೆ ಪ್ಲೇ ಆಪ್‌ಗೆ ಎಂಟ್ರಿ ಪಡೆದ ಆರ್‌ಸಿಬಿಶಿವಾನಂದ ನೀಲಣ್ಣವರ್ ಪ್ರಕರಣ ಸಿಐಡಿಗೆ ವಹಿಸಲಾಗಿದ್ದು, ತನಿಖೆ ಬಳಿಕ ಎಲ್ಲವೂ ಬಹಿರಂಗ : ಸತೀಶ್ ಜಾರಕಿಹೊಳಿ ಪ್ರೀತಿ ವಿಷಯಕ್ಕೆ 17 ವರ್ಷದ ಮಗಳನ್ನೇ ಕೊಂದ ತಂದೆ ಶಿವಾನಂದ ನೀಲಣ್ಣವರ ವಂಚನೆ ಕೇಸ್ : 4 ಬ್ಯಾಂಕ್ ಖಾತೆಗಳು ಪ್ರೀಜ್, ಕೋಟಿ ಕೋಟಿ ಹಣ ಪತ್ತೆ ಶಾಲೆಯಲ್ಲಿ ಹಾಜರಾತಿ ಹಾಕುವ ವೇಳೆ 'ಎಸ್ ಸರ್' ಬದಲು ಜೈ ಶ್ರೀರಾಮ್ ಹೇಳಿ : ಶಾಸಕ ಯತ್ನಾಳ್ ಕೊರಗಜ್ಜ ಸನ್ನಿಧಿಯಲ್ಲಿ ಹರಕೆ ಕೋಲ ಸೇವೆ ಸಲ್ಲಿಸಿದ ನಟಿ ರಚಿತಾ ರಾಮ್ನಟ ವಿಜಯ್ ತಮಿಳುನಾಡಿನ ಸಿಎಂ ಆಗಿರುವುದು ನನಗೆ ಅಸೂಯೆ ಇಲ್ಲ : ನಟ ರಜನಿಕಾಂತ್ ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಇಂಧನ, ಚಿನ್ನದ ಖರೀದಿಯಲ್ಲಿ ಭಾರಿ ಇಳಿಕೆ ಇಂದು ಡಿಸಿ- ಆರ್‌ಆರ್ ಕದನಗೆಲ್ಲಲೇಬೇಕಾದ ಒತ್ತಡದಲ್ಲಿ ಪಂಜಾಬ್ ಕಿಂಗ್ಸ್