Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಟ್ರಾಫಿಕ್ ದಂಡದಲ್ಲಿ ಶೇ. 50 ರಿಯಾಯಿತಿ : ಎರಡೇ ದಿನದಲ್ಲಿ 2.24 ಕೋಟಿ ರೂ. ಸಂಗ್ರಹ 

Advertisement

ಬೆಂಗಳೂರು : ರಾಜ್ಯ ಸರ್ಕಾರ ಇತ್ತೀಚೆಗೆ ಟ್ರಾಫಿಕ್ ಫೈನ್​ನಲ್ಲಿ (fine) ಶೇಕಡಾ 50 ರಿಯಾಯಿತಿ ಘೋಷಿಸುವ ಮೂಲಕ ವಾಹನ ಸವಾರರಿಗೆ ಗುಡ್​ ನ್ಯೂಸ್​ ನೀಡಿದೆ. 

ಇದೀಗ ಈ ಉಪಕ್ರಮ ನಿನ್ನೆಯಿಂದ ಅಂದರೆ ಜೂನ್​​ 21ರಿಂದ ಆರಂಭವಾಗಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿರುವ ವಾಹನ ಸವಾರರು ಆರಂಭವಾಗಿ ಎರಡು ದಿನದಲ್ಲಿ 75,487 ಪ್ರಕರಣಗಳಿಂದ ಒಟ್ಟು 2,24,70,450 ರೂ.ದಂಡ ಸಂಗ್ರಹವಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಖ್ಯಾಂಶಗಳು

ಸರ್ಕಾರದಿಂದ ಟ್ರಾಫಿಕ್ ಫೈನ್​ನಲ್ಲಿ 50% ರಿಯಾಯಿತಿ

ಎರಡು ದಿನದಲ್ಲಿ 2,24,70,450 ರೂ. ದಂಡ ಸಂಗ್ರಹ

ಜು.10ರವರೆಗೆ ಅವಕಾಶ ಕಲ್ಪಿಸಿರುವ ರಾಜ್ಯ ಸರ್ಕಾರ

ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?  

ಈ ಕುರಿತಾಗಿ ಬೆಂಗಳೂರು ಸಂಚಾರ ಪೊಲೀಸರು ಟ್ವೀಟ್​ ಮಾಡಿದ್ದು, ರಾಜ್ಯ ಸರ್ಕಾರದ ಆದೇಶದಂತೆ ಜೂನ್​​ 4ರಂದು ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್​ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ದಂಡವನ್ನು ಪಾವತಿಸಲು ಶೇ.50% ರಷ್ಟು ರಿಯಾಯಿತಿಗೆ ಆದೇಶಿಸಲಾಗಿತ್ತು.

ಈ ಆದೇಶವು ಜೂನ್​​ 21ರಿಂದ ಜಾರಿಗೆ ಬಂದಿದೆ. ಎರಡು ದಿನದಲ್ಲಿ ಅಂದರೆ ಜೂನ್​​ 21 ಮತ್ತು 22ರಂದು ಮಾತ್ರ 75,487 ಪ್ರಕರಣಗಳಿಂದ ಒಟ್ಟು 2,24,70,450 ರೂ. ದಂಡ ಸಂಗ್ರಹವಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ಬಾಕಿ ಉಳಿದಿರುವ ದಂಡ ಪಾವತಿಸಲು ಆಗದೆ ತೊಂದರೆ ಅನುಭವಿಸುತ್ತಿರುವ ವಾಹನ ಸವಾರರಿಗಾಗಿ ಸರ್ಕಾರ ಮತ್ತೊಮ್ಮೆ 50% ರಿಯಾಯಿತಿ ಅವಕಾಶ ನೀಡಿದೆ. 

ಪೊಲೀಸ್ ಮತ್ತು ಸಾರಿಗೆ ಇಲಾಖೆಗಳು ಜಂಟಿಯಾಗಿ ಬಾಕಿ ಚಲನ್ ಮೊತ್ತದ ಮೇಲೆ ಈ ಬಾರಿ 50% ರಿಯಾಯಿತಿಯನ್ನು ಇತ್ತೀಚೆಗೆ ಘೋಷಿಸಿತ್ತು. ದಂಡ ಭರಿಸಲು ಪರದಾಡುತ್ತಿದ್ದ ಸವಾರರಿಗೆ ಇದು ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

ಸದ್ಯ ವಾಹನ ಸವಾರರು ರಾಜ್ಯ ಸರ್ಕಾರ ನೀಡಿರುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದು ಕೇವಲ ಎರಡೇ ದಿನದಲ್ಲಿ ಕೋಟ್ಯಂತರ ರೂ ಸಂಗ್ರಹವಾಗಿದೆ. ಜುಲೈ 10ರವರೆಗೆ 50% ರಿಯಾಯಿತಿ ದಂಡ ತುಂಬಲು ಅವಕಾಶವಿದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST