ಬೆಂಗಳೂರು : ರಾಜ್ಯ ಸರ್ಕಾರಿ ಅರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘ ರಾಜ್ಯಾಧ್ಯಕ್ಷರ ನೇತ್ರತ್ವದಲ್ಲಿ ದಿನಾಂಕ: 24ಮೇ 2026ರಂದು ಬೆಳಿಗ್ಗೆ 10-30ಗಂಟೆಗೆ ಭಾನುವಾರ ಬೆಂಗಳೂರು ನಗರದ ಡಾ. ರಾಜಕುಮಾರ್ ಗಾಜಿನ ಮನೆ ಗ್ರೇಟರ್ ಅಭಿವೃದ್ಧಿ ಪ್ರಾಧಿಕಾರ ಆವರಣದಲ್ಲಿ ರಾಜ್ಯ ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳ ಪೂರ್ವ ಭಾವಿ ಸಭೆ ಕರೆಯಲಾಗಿದೆ ಎಂದು ರಾಜ್ಯಾಧ್ಯಕ್ಷ ಮಹೇಶ್ ಸಿ ಹುಬಳ್ಳಿ ಮಾತನಾಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ಎಸ್ ಜಡಗಿ ಮಾತನಾಡಿ ನಾವುಗಳು ಸೇವೆ ಇದ್ದು ಪ್ರತಿಯೋಬ್ಬ ಸದಸ್ಯರು ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಸಭೆಯಲ್ಲಿ ಸಮಾವೇಶದ ರೂಪ ರೇಷಗಳು ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಸಚಿವರು ಕೇಂದ್ರ ಸಚಿವರು ಶಾಸಕರು ಸಂಸದರು ಮಾಜಿ ಹಾಲಿ ಜನ ಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು ಮತ್ತು ಸಮಾವೇಶ ಸ್ಥಳ , ದಿನಾಂಕ ನಿಗದಿ ಪಡಿಸಲಾಗುವುದು ಎಂದು ಸುಧಾಕರ್ ಎಸ್ ಜಡಗಿ ಮತ್ತು ರಾಜ್ಯ ಕಾರ್ಯಾಧ್ಯಕ್ಷರು ಜೈಭೀಮ್ ಬಿ ವಿ ನ್ಯೂಸ್-5 ಚಾನಲ್ ಯಲಹಂಕದ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.
ವರದಿ : ಅಯ್ಯಣ್ಣ ಮಾಸ್ಟರ್


