Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದು ರಾತ್ರಿ 8:30ಕ್ಕೆ ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ 

Advertisement

ನವದೆಹಲಿ: ಸಂಸತ್ತಿನ ಮಹತ್ವದ ಬಜೆಟ್ ಅಧಿವೇಶನವು ಇಂದು (ಶನಿವಾರ) ಮುಕ್ತಾಯಗೊಂಡಿದ್ದು, ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.


ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಇಂದು ರಾತ್ರಿ 8:30 ಕ್ಕೆ ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ .


ಭಾಷಣದ ಮುಖ್ಯಾಂಶಗಳು ಏನಿರಬಹುದು?


ಮಹಿಳಾಮೀಸಲಾತಿಬಿಲ್: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿಗೆ ಸಂಬಂಧಿಸಿದ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯು ವಿರೋಧ ಪಕ್ಷಗಳ ಅಸಮ್ಮತಿಯಿಂದಾಗಿ ವಿಫಲಗೊಂಡಿರುವ ಹಿನ್ನೆಲೆಯಲ್ಲಿ, ಪ್ರಧಾನಿಯವರು ಈ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವ ಸಾಧ್ಯತೆಯಿದೆ.


ಪಶ್ಚಿಮ. ಏಷ್ಯಾ ಬಿಕ್ಕಟ್ಟು: ಜಾಗತಿಕವಾಗಿ ನಡೆಯುತ್ತಿರುವ ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಅದರಿಂದ ಭಾರತದ ಇಂಧನ ಅಗತ್ಯತೆಗಳ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಪ್ರಧಾನಿ ಮಾತನಾಡಬಹುದು ಎನ್ನಲಾಗಿದೆ.


ಆರ್ಥಿಕ ನಿರ್ಧಾರಗಳು: ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಶೇ. 2 ರಷ್ಟುತುಟ್ಟಿಭತ್ಯೆ (DA) ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದ್ದು, ಈ ಕುರಿತು ಅಥವಾ ಎಂಟನೇ ವೇತನ ಆಯೋಗದ ಮುನ್ಸೂಚನೆಗಳ ಬಗ್ಗೆಯೂ ಮಾಹಿತಿ ನೀಡುವ ಸಾಧ್ಯತೆಯಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಲು ನಿರಾಕರಿಸುವ ಮೂಲಕ ವಿರೋಧ ಪಕ್ಷಗಳು ಮಹಿಳೆಯರ ವಿರುದ್ಧ ನಡೆದುಕೊಳ್ಳುತ್ತಿವೆ ಮತ್ತು ಅವರು ಈ ವಿಷಯದಲ್ಲಿ “ಅಪರಾಧಿಗಳು” ಎಂದು ಪ್ರಧಾನಿ ಆರೋಪಿಸಿದ್ದಾರೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭರ್ಜರಿ ಗೆಲುವಿನೊಂದಿಗೆ ಪ್ಲೇ ಆಪ್‌ಗೆ ಎಂಟ್ರಿ ಪಡೆದ ಆರ್‌ಸಿಬಿಶಿವಾನಂದ ನೀಲಣ್ಣವರ್ ಪ್ರಕರಣ ಸಿಐಡಿಗೆ ವಹಿಸಲಾಗಿದ್ದು, ತನಿಖೆ ಬಳಿಕ ಎಲ್ಲವೂ ಬಹಿರಂಗ : ಸತೀಶ್ ಜಾರಕಿಹೊಳಿ ಪ್ರೀತಿ ವಿಷಯಕ್ಕೆ 17 ವರ್ಷದ ಮಗಳನ್ನೇ ಕೊಂದ ತಂದೆ ಶಿವಾನಂದ ನೀಲಣ್ಣವರ ವಂಚನೆ ಕೇಸ್ : 4 ಬ್ಯಾಂಕ್ ಖಾತೆಗಳು ಪ್ರೀಜ್, ಕೋಟಿ ಕೋಟಿ ಹಣ ಪತ್ತೆ ಶಾಲೆಯಲ್ಲಿ ಹಾಜರಾತಿ ಹಾಕುವ ವೇಳೆ 'ಎಸ್ ಸರ್' ಬದಲು ಜೈ ಶ್ರೀರಾಮ್ ಹೇಳಿ : ಶಾಸಕ ಯತ್ನಾಳ್ ಕೊರಗಜ್ಜ ಸನ್ನಿಧಿಯಲ್ಲಿ ಹರಕೆ ಕೋಲ ಸೇವೆ ಸಲ್ಲಿಸಿದ ನಟಿ ರಚಿತಾ ರಾಮ್ನಟ ವಿಜಯ್ ತಮಿಳುನಾಡಿನ ಸಿಎಂ ಆಗಿರುವುದು ನನಗೆ ಅಸೂಯೆ ಇಲ್ಲ : ನಟ ರಜನಿಕಾಂತ್ ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಇಂಧನ, ಚಿನ್ನದ ಖರೀದಿಯಲ್ಲಿ ಭಾರಿ ಇಳಿಕೆ ಇಂದು ಡಿಸಿ- ಆರ್‌ಆರ್ ಕದನಗೆಲ್ಲಲೇಬೇಕಾದ ಒತ್ತಡದಲ್ಲಿ ಪಂಜಾಬ್ ಕಿಂಗ್ಸ್