ಚಿಕ್ಕೋಡಿ : ತಾಲೂಕಿನ ಹಿರೆಕೋಡಿ ಗ್ರಾಮದಲ್ಲಿ ಕನ್ನಡ ಸರಕಾರಿ ಶಾಲೆಯು ಕಳೆದ ಶತಮಾನಗಳಿಂದ ಅಚ್ಚು ಕಟ್ಟಾಗಿ ತನ್ನ ಕಾರ್ಯವನ್ನು ಮಾಡುತ್ತ ಬಂದಿದೆ, ಈ ಶಾಲೆಯು ಜನರಿಂದ ದಾನ ಪಡೆದ ಜಾಗೆಯನ್ನು ಹೊಂದಿದ್ದು, ಶಾಲೆಯ ಜಾಗೆಯನ್ನು ಕಬಳಿಸುವ ಕುತಂತ್ರ ನಡೆದಿದೆ, ಗ್ರಾಮದ ನಾಗರಿಕರ ಹಾಗೂ ಕರವೇ ಕಾರ್ಯಕರ್ತರ ವಿರೋಧದ ನಡುವೆಯೂ ಶಾಲೆಯ ಜಾಗೆಯನ್ನು ಅತಿಕ್ರಮಿಸಿ ರಸ್ತೆ ಮಾಡುತ್ತಿದ್ದಾರೆ, ಇದನ್ನು ಖಂಡಿಸಿ ಕರವೇ ಸೇನಾನಿಗಳು ಹಾಗೂ ಹಿರೆಕೋಡಿ ಗ್ರಾಮಸ್ಥರು, ಚಿಕ್ಕೋಡಿ ತಹಶಿಲ್ದಾರರ ಕಚೇರಿಯ ಎದುರಿಗೆ ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕೋಡಿ ತಾಲೂಕಾ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಕನ್ನಡ ಶಾಲಡಗಳನ್ನು ಉಳಿಸಿ ಬೆಳೆಸುವುದರಲ್ಲಿ ಆಸಕ್ತಿ ಇಲ್ಲ, ರಾಜ್ಯದಲ್ಲಿ ಎಷ್ಟೋ ಸರಕಾರಿ ಕನ್ನಡ ಶಾಲೆಗಳು ಮುಚ್ಚಿ ಜೋಗಿವೆ, ಅಲ್ಲಲ್ಲಿ ಉಳಿದಿರುವ ಕೆಲವು ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದೆ, ಹಿರೆಕೋಡಿ ಸರಕಾರಿ ಕನ್ನಡ ಸರಕಾರಿ ಶಾಲೆಯ ಜಾಗೆಯಲ್ಲಿ ರಸ್ತೆ ನಿರ್ಮಿಸಿ ಖಾಸಗಿಯವರಿಗೆ ಮನೆ ಹಾಕುತ್ತಿರುವುದು ಖಂಡನೀಯ, ನಾವು ನಮ್ಮ ಭಾಗದ ಸರಕಾರಿ ಕನ್ನಡ ಶಾಲೆಗಳ ಹಾಗೂ ಅದರ ಆಸ್ತಿಗಳ ಅಳಿವಿಗಾಗಿ ಬಿಡುವುದಿಲ್ಲ, ಬೇರೆಡೆಗೆ ರಸ್ತೆ ನಿರ್ಮಿಸುವ ಮೂಲಕ ಈಗ ನಡೆಯುತ್ತಿರುವ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಈಗಿನ ಕಾಲದಲ್ಲಿ ಬಡವರ ಶಾಲೆಗೆ ಜನರು ದಾನವಾಗಿ ನೀಡಿರುವ ಭೂಮಿಯನ್ನೂ ಬಿಡುತ್ತಿಲ್ಲ, ತಮ್ಮ ಸ್ವಾರ್ಥಕ್ಕಾಗಿ ಶಾಲೆಯ ಭೂಮಿಯಲ್ಲಿ ರಸ್ತೆ ನಿರ್ಮಿಸುವುದು ಎಷ್ಟೊಂದು ಸಮಂಜಸ ಎಂಬುದನ್ನು ಜನಪ್ರತಿನಿಧಿಗಳು ವಿಚಾರ ಮಾಡಬೇಕು, ಈ ಪ್ರಕಾರ ಶಾಲೆಯ ಆವರಣದಲ್ಲಿ ರಸ್ತೆ ನಿರ್ಮಿಸುವ ಮೂಲಕ ಅಭಿವೃದ್ಧಿ ತೋರಿಸುವ ಜನಪ್ರತಿನಿಧಿಗಳ ನಿರ್ಧಾರದಿಂದ, ಮುಂದಿನ ಪೀಳಿಗೆಗೆ ಸರಕಾರಿ ಶಾಲೆಗಳ ಆಸ್ತಿ ಉಳಿಯಬಹುದಾ ? ಎಂಬುದು ಯಕ್ಷ ಪ್ರಶ್ನೆಯಾಗಿದೆ, ಸರಕಾರಿ ಶಾಲೆಗಳ ಆಸ್ತಿಗಳಲ್ಲಿ ಬೆಳವಣಿಗೆ ಆಗಬೇಕು ಹೊರತಾಗಿ ಕಡಿಮೆಯಾಗಬಾರದು, ಒಂದು ವೇಳೆ ಹೀಗೆಯೇ ಮುಂದೆವರೆದರೆ ಸರಕಾರಿ ಕನ್ನಡ ಶಾಲೆಗಳನ್ನು ಹುಡುಕುವ ಸ್ಥಿತಿ ಎದುರಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಸುಭಾಷ್ ಬಾಳಿಕಾಯಿ, ರಾಜೇಂದ್ರ ಕಾಂಬಳೆ, ರಜನಿಕಾಂತ ಬಡಿಗೇರ, ಮೊಷಿನ ಪಟೇಲ,ರಶೀದ ಮಕಾನದಾರ, ರಫೀಕ್ ಪಠಾಣ, ರಮೇಶ ಡಂಗೇರ, ಅಮೂಲ ನಾವಿ, ಪಾರೀಶ ಬಾಳಿಕಾಯಿ, ಶಂಕರ ಚೌಗಲಾ, ಚಿದಾನಂದ ಚೌಗಲಾ, ಸಾತ್ವಿರ ಕಟ್ಟಿ, ಸುರೇಶ ಪೂಜಾರಿ, ಅಣ್ಣಪ್ಪ ಪೂಜಾರಿ, ಸಾಗರ ನಿಂಗಾಗೋಳ, ಸುರೇಶ ಫರಿತೆ, ಚನ್ನಪ್ಪ ಮಂಟೂರ ಸೇರಿದಂತೆ ಹಲವಾರು ಕನ್ನಡ ಶಾಲಾ ಪ್ರೇಮಿಗಳು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ

