ಹುಬ್ಬಳ್ಳಿ .ಕರ್ನಾಟಕ ರಾಜ್ಯ ಚಲವಾದಿ ಬಲಗೈ ಸಮುದಾಯಗಳ ಒಕ್ಕೂಟದಿಂದ ಪ್ರತಿಭಟನೆ ನೂತನ ಸಚಿವ ಸಂಪುಟದಲ್ಲಿ ಪ್ರಸಾದ ಅಬ್ಬಯ್ಯನವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಲು ಒತ್ತಾಯದ ಆಗ್ರಹ ದಲಿತ ಮುಖಂಡ ಚಂದ್ರಶೇಖರ ಯಾತಗೇರಿ ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಹುಬ್ಬಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರದ ಸತತ ಮೂರು ಬಾರಿ ಚುನಾಯಿತರಾಗಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಪ್ರಸಾದ ಅಬ್ಬಯ್ಯರವರಿಗೆ ಮುಂಬೈ ಕರ್ನಾಟಕದ ಭಾಗದ ಸಾಮಾಜಿಕ ನ್ಯಾಯದಡಿಯಲ್ಲಿ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಲು ಡಾ. ಬಿ ಆರ್ ಅಂಬೇಡ್ಕರ ಸೇವಾ ಸಂಘ ಅಯೋಧ್ಯನಗರ, ಅಂಬೇಡ್ಕರ ಕಾಲೋನಿ ಚಲವಾದಿ ಸಮಾಜ ಹಳೆ ಹುಬ್ಬಳ್ಳಿ ಮತ್ತು ಶ್ರೀ ಗುರು ಚನ್ನಬಸವೇಶ್ವರ ದಲಿತ ಸೇವಾ ಸಂಘ ಚಲವಾದಿ ಸಮಾಜ ಗಿರಣಿ ಚಾಳ ಹುಬ್ಬಳ್ಳಿ ವತಿಯಿಂದ ಚಲವಾದಿ ಸಮುದಾಯದ ನಮ್ಮ ಜನಪ್ರಿಯ ಶಾಸಕರಾದ ಸನ್ಮಾನ್ಯ ಪ್ರಸಾದ ಅಬ್ಬಯ್ಯನವರಿಗೆ ನೂತನ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಲು ಪ್ರತಿಭಟನೆಯ ಮೂಲಕ ಒತ್ತಾಯಿಸಿ ಆಗ್ರಹಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಲಿತ ಮುಖಂಡರು ಹಾಗೂ ಡಾ ಬಿ ಆರ್ ಅಂಬೇಡ್ಕರ ಸ್ವಾಭಿಮಾನ ದಲಿತ ಸಂಘರ್ಷ ರಾಜ್ಯ ಸಮಿತಿ ಅಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಚಲವಾದಿ ಬಲಗೈ ಸಮುದಾಯಗಳ ಒಕ್ಕೂಟದ ಜಿಲ್ಲಾ ಪ್ರತಿನಿಧಿ ಚಂದ್ರಶೇಖರ ಬಿ. ಯಾತಗೇರಿ ಮಾತನಾಡಿ ಮುಂಬೈ ಕರ್ನಾಟಕದ ಭಾಗದಲ್ಲಿ ಸುಮಾರು 32 ವರ್ಷಗಳಿಂದ ಚಲವಾದಿಯ ಸಮಾಜದ ಶಂಕರಾನಂದ ಅವರನ್ನು ಹೊರತುಪಡಿಸಿ ಸಮುದಾಯದ ಶಾಸಕರಿಗೆ ಇದುವರೆಗೂ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡದಿರುವುದು ಚಲವಾದಿ ಸಮುದಾಯಕ್ಕೆ ಸಾಮಾಜಿಕ ನ್ಯಾಯದಡಿಯಲ್ಲಿ ಅನ್ಯಾಯವಾಗುವದರೊಂದಿಗೆ ರಾಜ್ಯ ಸರ್ಕಾರವು ಮಲತಾಯಿ ಧೋರಣೆ ಅನುಸರಿಸುವುದರೊಂದಿಗೆ ನಮ್ಮ ಚಲವಾದಿ ಸಮುದಾಯಕ್ಕೆ ಅಘಾತ ಉಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿ ನೂತನ ಸಚಿವ ಸಂಪುಟದಲ್ಲಿ ಪ್ರಸಾದ ಅಬ್ಬಯರವರಿಗೆ ಸಚಿವ ಸ್ಥಾನ ಕಡೆಗಣಿಸಿದರೆ ಸಮಾಜದ ಕುಲಬಾಂಧವರು ಬೀದಿಗಿಳಿದು ಉಗ್ರಸ್ವರೂಪದ ಚಳುವಳಿಯ ಉಪವಾಸ ಸತ್ಯಾಗ್ರಹ ಮತ್ತು ಸಾಂಕೇತಿಕ ಧರಣಿ ಪ್ರತಿಭಟನೆ ಹೋರಾಟ ಮಾಡುವದು ಅನಿವಾರ್ಯವಾಗುವುದು ಎಂದು ಮಾತನಾಡಿದರು.
ನಂತರ ಚಲವಾದಿ ಸಮಾಜದ ಮುಖಂಡರು ಹಿರಿಯರು ನಮ್ಮ ಚಲವಾದಿ ಸಮಾಜದ ಶಾಸಕರಾದ ಸನ್ಮಾನ್ಯ ಪ್ರಸಾದ ಅಬ್ಬಯ್ಯರವರಿಗೆ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡುವ ಕುರಿತು ನೂರು ಜನರ ನಿಯೋಗದೊಂದಿಗೆ ವಿಧಾನಸೌಧ ಬೆಂಗಳೂರಿಗೆ ತೆರಳಿ ಗೌರವಾನ್ವಿತ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಮನವರಿಕೆ ಮಾಡುವುದರೊಂದಿಗೆ ಒತ್ತಾಯಿಸಲಾಗುವುದು ಎಂದು ಹೇಳಿದರು. ಡಾ. ಬಿ ಆರ್ ಅಂಬೇಡ್ಕರ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಮಾರುತಿ ದೊಡ್ಡಮನಿ ಯವರು ಮಾತನಾಡಿ ಸನ್ಮಾನ್ಯ ಶ್ರೀ ಪ್ರಸಾದ ಅಬ್ಬಯ್ಯನವರು ಮೂರು ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿಯ ಹರಿಕಾರರಾಗಿ ಅನುಭವ ಹೊಂದಿರುವ ಕ್ರಿಯಾಶೀಲ ಮನೋಭಾವನೆ ಉಳ್ಳವರಾಗಿರುತ್ತಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ದಲಿತ ಮುಖಂಡ ಗಣೇಶ ದೊಡ್ಡಮನಿ ಬೃಹತ್ ಪ್ರತಿಭಟನೆಯಲ್ಲಿ ಘೋಷಣೆ ಕೂಗಿ ರಾಜ್ಯ ಸರ್ಕಾರಕ್ಕೆ ಧ್ವನಿ ಎತ್ತುವುದರ ಮೂಲಕ ಎಚ್ಚರಿಕೆ ನೀಡಿದರು.ಹಿರಿಯ ದಲಿತ ಮುಖಂಡರಾದ ಪ್ರಭಾಕರ ಮಾತನಾಡಿ ಪ್ರಸಾದ ಅಬ್ಬಯ್ಯರವರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿ ಮುಂಬೈ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಹೇಳಿದರು.
ನಂತರ ಮಹಿಳಾ ಮುಖಂಡರಾದ ಶ್ರೀಮತಿ ಚೇತನ ಲಿಂಗದಾಳ ಮಾತನಾಡಿ ಶಾಸಕ ಪ್ರಸಾದ ಅಬ್ಬಯ್ಯನವರು ಅಭಿವೃದ್ಧಿಗಾಗಿ ಸಮಾನತೆಯ ಸಮತೋಲನವನ್ನು ಅನುಸರಿಸಿ ಸರ್ಕಾರದ ವಿವಿಧ ಯೋಜನೆಗಳನ್ನು ಸರ್ವಜಾತಿ ಜನಾಂಗದವರಿಗೆ ಅನುಷ್ಠಾನಗೊಳಿಸಿ ಮಹಿಳೆಯರಿಗೆ ವಿವಿಧ ಫಲಾನುಭವಿಗಳಿಗೆ ಸ್ವಾವಲಂಬಿ ಜೀವನ ನಡೆಸಲು ಸದುಪಯೋಗಪಡಿಸಿಕೊಳ್ಳಲು ಸಹಾಯದ ಹಸ್ತ ನೀಡಿದವರೆಂದು ತಮ್ಮ ಹಿತನುಡಿಗಳಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಚಲವಾದಿ ಸಮಾಜದ ಹಿರಿಯರು ಯುವ ಮುಖಂಡರಾದ ಮಲ್ಲಿಕಾರ್ಜುನ ಯಾತಗೇರಿ. ಪ್ರಶಾಂತ ಮನಮುಟಗಿ ನಿಂಗರಾಜ ಹೊಸಮನಿ. ಶ್ರೀಶೈಲ ಚಲವಾದಿ. ಶಿವೂ ಕರಿಯಮ್ಮನವರ. ಶಿವಪ್ಪ ಚಲವಾದಿ. ಪರಶುರಾಮ ಹೊನ್ನೂರು ಕಳಕ ಮಲ್ಲೇಶಿ ಜ್ವಾಲಾಪುರ ಯಾದವ ಈಟಿ ಮಲ್ಲಿಕಾರ್ಜುನ ನಂದಿಹಾಳ. ಸಮಾಜದ ಮಹಿಳೆಯರು ಹಿರಿಯರು ಯುವಕರು ಉಪಸಿದ್ಧರಿದ್ದರು.
ವರದಿ:ಗುರುರಾಜ ಹಂಚಾಟೆ


