LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ: ಕಪ್ಪು ಟೀ ಶರ್ಟ್ ಧರಿಸಿ ವಿಧಾನಸಭೆಗೆ ನುಗ್ಗಿದ ಬಿಜೆಪಿ-ಜೆಡಿಎಸ್ ಶಾಸಕರು

Advertisement

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಆರೋಪ ಹೊತ್ತಿರುವ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಶಾಸಕರು ಇಂದು ವಿನೂತನ ಪ್ರತಿಭಟನೆ ನಡೆಸಿದರು.

ಶಾಸಕರ ಭವನದ ಆವರಣದಲ್ಲಿರುವ ಶ್ರೀ ವಾಲ್ಮೀಕಿ ಮಹರ್ಷಿಗಳ ಪ್ರತಿಮೆ ಬಳಿ ಕಪ್ಪು ಟೀ ಶರ್ಟ್ ಧರಿಸಿ ಪ್ರತಿಭಟನೆ ನಡೆಸಿದ ಬಿಜೆಪಿ-ಜೆಡಿಎಸ್ ಶಾಸಕರು ನಾಗೇಂದ್ರ ರಾಜೀನಮೆಗೆ ಬಳಿಕ ವಿಧಾನಸೌಧಕ್ಕೆ ಪಾದಯಾತ್ರೆ ಮೂಲಕ ಆಗಮಿಸಿದರು.

ಕಪ್ಪು ಟೀ ಶರ್ಟ್ ಧರಿಸಿ ವಿಧಾನಸಭೆ ಮೊಗಸಾಲೆಯೊಳಗೆ ಹೋಗುವಾಗ ಮಾರ್ಷಲ್​ಗಳು ಶಾಸಕರನ್ನು ತಡೆಯಲು ಯತ್ನಿಸಿದರು. ಪ್ರತಿಪಕ್ಷ ಶಾಸಕರು ಹಾಗೂ ಮಾರ್ಷಲ್​ಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಂತರ ಟೀ ಶರ್ಟ್ ಧರಿಸಿಯೇ ಒಟ್ಟಾಗಿ ಶಾಸಕರು ಒಳಗೆ ನುಗ್ಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಎಸ್‌ಟಿ ವರ್ಗಕ್ಕೆ ಅಪಮಾನ ಮಾಡಲಾಗಿದೆ. ನಿಗಮದ ಅಧಿಕಾರಿ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡರು. ಡೆತ್‌ ನೋಟ್‌ನಲ್ಲಿ ಸಚಿವ ಮೌಖಿಕ ಸೂಚನೆಯ ಮೇರೆಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದಿದ್ದಾರೆ.

ಡೆತ್​ ನೋಟ್ ಪ್ರಮುಖ ಸಾಕ್ಷಿ, ಪ್ರಮುಖ ದಾಖಲೆ. ಹಣ ವರ್ಗಾವಣೆ ಆಗಿರುವ ಬಗ್ಗೆ ಯೂನಿಯನ್ ಬ್ಯಾಂಕ್ ಚೆಕ್ ಇದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಯಾವ್ಯಾವ ಅಕೌಂಟ್​​ಗಳಿಗೆ ಈ ಹಣ ಹೋಗಿದೆ ಅಂತಲೂ ದಾಖಲೆ ಇದೆ ಎಂದರು. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಯಕನಾದವನಿಗೆ ಅಡಿಗಡಿಗೂ ಅಡಚಣೆಗಳು ಜಾಸ್ತಿ: ಡಿ.ಕೆ.ಶಿವಕುಮಾರ್ ಮುಸ್ಲಿಂರ ಟೋಪಿ ಹಾಕಿದಕ್ಕೆ ತಲೆ ಬೋಳಿಸಿಕೊಂಡು, ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದೇನೆ : ಶಾಸಕ ಯತ್ನಾಳ್ಸತೀಶ್ ಜಾರಕಿಹೊಳಿ ಮೇಲೆ ಇ.ಡಿ ದಾಳಿ : ಕಾಶಪ್ಪನವರ್ ಸ್ಫೋಟಕ ಹೇಳಿಕೆಬಿಜೆಪಿಯವರ ಎದೆ ಸೀಳಿದರೆ ರಾಜ್ಯದ ಹಿತ ಕಾಯುವ ಒಂದು ಅಂಶವಿಲ್ಲ : ಡಿ.ಕೆ.ಶಿವಕುಮಾರ್ ಕಿಡಿರಮೇಶ್ ಜಾರಕಿಹೊಳಿ ಮುಗ್ಸಿದ್ರು, ಈಗ ಸತೀಶ್ ಜಾರಕಿಹೊಳಿ ಸರತಿ: ಕುಮಾರಸ್ವಾಮಿ ,ಮೊಹಸಿನ್ ನಕ್ವಿ ಯಾವುದೇ ಆಕ್ಷೇಪ ವ್ಯಕ್ತ ಪಡಿಸಿಲ್ಲ,ಕರ್ತವ್ಯಲೋಪ, ಸರ್ಕಾರಿ ಜಮೀನು ಅಕ್ರಮ ಖಾತೆ ಆರೋಪ: ಮಾಯಸಂದ್ರ ಕಂದಾಯ ನಿರೀಕ್ಷಕರ ವಜಾಕ್ಕೆ ರೈತ ಸಂಘ ಒತ್ತಾಯಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಸಚಿನ್ ದಾಖಲೆ ಅಳಿಸಿ ಹಾಕಿದ ಟೇಲರ್ RuPay ಬಳಕೆದಾರರಿಗೆ ಸಿಹಿ ಸುದ್ದಿ: ₹2,000 ವರೆಗಿನ ಡಿಜಿಟಲ್ ಪಾವತಿಗೆ ಯಾವುದೇ ಶುಲ್ಕವಿಲ್ಲ