ಬೆಂಗಳೂರು: ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿ (KSDC) ತುರ್ತು ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ರಾಜ್ಯ ಸರ್ಕಾರದ ಪ್ರಮುಖ ಆನ್ಲೈನ್ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ ಎಂದು ತುರ್ತು ಸೂಚನೆ ಹೊರಡಿಸಲಾಗಿದೆ.
ಸೇವೆಗಳು ಸ್ಥಗಿತಗೊಳ್ಳುವ ಸಮಯ
ಆರಂಭ: ಜೂನ್ 25, 2026ರ ರಾತ್ರಿ 9:00 ಗಂಟೆಯಿಂದ
ಮುಕ್ತಾಯ: ಜೂನ್ 26, 2026ರ ರಾತ್ರಿ 9:00 ಗಂಟೆಯವರೆಗೆ
ಒಟ್ಟು ಅವಧಿ: 24 ಗಂಟೆಗಳು
ಪ್ರಮುಖ ಸೇವೆಗಳು:
ನಾಗರಿಕ ಸೇವಾ ಕೇಂದ್ರಗಳು: ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ನ ಡಿಜಿಟಲ್ ಸೇವೆಗಳು.
ಕಂದಾಯ ಇಲಾಖೆ ಸೇವೆಗಳು: ನಾಡಕಚೇರಿ ಸೇವೆಗಳಾದ ಜಾತಿ, ಆದಾಯ, ವಾಸಸ್ಥಳ ಪ್ರಮಾಣಪತ್ರಗಳು ಹಾಗೂ ಭೂಮಿ ಪೋರ್ಟಲ್ನ ಪಹಣಿ (RTC) ಮತ್ತು ಮ್ಯುಟೇಷನ್ ಸೇವೆಗಳು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ: ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಪ್ರಕ್ರಿಯೆಗಳು.
ಸಾರಿಗೆ ಇಲಾಖೆ (Sarathi & Vahan): ಡಿಎಲ್ (DL), ಎಲ್‌ಎಲ್ (LL), ಆರ್ಸಿ (RC) ಮತ್ತು ಆನ್ಲೈನ್ ಶುಲ್ಕ ಪಾವತಿ.
ನೋಂದಣಿ ಮತ್ತು ಮುದ್ರೆಗಳ ಇಲಾಖೆ (KAVERI 2.0): ಆಸ್ತಿ ನೋಂದಣಿ, ಇಸಿ (EC) ಮತ್ತು ಮಾರುಕಟ್ಟೆ ಮೌಲ್ಯ ತಪಾಸಣೆ.
ಇತರ ಸೇವೆಗಳು: ಸೇವಾ ಸಿಂಧು (Seva Sindhu) ಮತ್ತು ಇ-ಕೆವೈಸಿ (e-KYC) ಪ್ರಕ್ರಿಯೆಗಳು.
ಸಾರ್ವಜನಿಕರಿಗೆ ಪ್ರಮುಖ ಎಚ್ಚರಿಕೆ: ಹಣ ಕಟ್ ಆಗುವ ಅಪಾಯ!
ಈ 24 ಗಂಟೆಗಳ ಅವಧಿಯಲ್ಲಿ ಯಾವುದೇ ಆನ್ಲೈನ್ ಅರ್ಜಿ ಸಲ್ಲಿಕೆ ಅಥವಾ ಶುಲ್ಕ ಪಾವತಿ ಪ್ರಕ್ರಿಯೆಗಳಿಗೆ ಪ್ರಯತ್ನಿಸಬೇಡಿ. ಸರ್ವರ್ ದೋಷದಿಂದಾಗಿ ನಿಮ್ಮ ಅರ್ಜಿ ವಿಫಲವಾಗಿ, ಹಣ ನಷ್ಟವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಾಗರಿಕರು ಸಹಕರಿಸಬೇಕಾಗಿ ವಿನಂತಿ.


