LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ರಾಯರೆಡ್ಡಿ ನಾಲ್ಕೈದು ಮದುವೆ ಆಗುವ ಆಸೆಯಿಂದ ಇಸ್ಲಾಂ ಶ್ರೇಷ್ಠ ಎಂದಿದ್ದಾರೆ: ಸಿ.ಟಿ. ರವಿ

 ಸತ್ಯ ಹೇಳಿದ್ರೆ ಕೊಂದು ಬಿಡ್ತಾರೆ ಅನ್ನೋ ಭಯ ಅವರಲ್ಲಿದೆ

Advertisement

ವಿಜಯನಗರ:ಜಿಲ್ಲೆ ಮುಸ್ಲಿಂ ಧರ್ಮದಲ್ಲಿ ನಾಲ್ಕೈದು ಮದುವೆ ಆಗುವ ಅವಕಾಶ ಇದೆ. ನಾಲ್ಕೈದು ಮದುವೆ ಆಗುವ ಆಸೆಯಿಂದ ಮುಸ್ಲಿಂ ಧರ್ಮ ಶ್ರೇಷ್ಠವೆಂದು ರಾಯರೆಡ್ಡಿ ಹೇಳಿರಬಹುದು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ (C T Ravi) ವಾಗ್ದಾಳಿ ನಡೆಸಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲೇ ಇಸ್ಲಾಂ ಧರ್ಮ ಶ್ರೇಷ್ಠವೆಂದು ರಾಯರೆಡ್ಡಿ ಹೇಳಿದ್ದಾರೆ. ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ ಇವೆಲ್ಲವೂ ಮತಗಳು. ಇವೆಲ್ಲವೂ ವ್ಯಕ್ತಿಯಿಂದ ಸ್ಥಾಪಿಸಲ್ಪಟ್ಟಿವೆ. ಸನಾತನ ಅನ್ನೋದು ಜಗತ್ತಿನಲ್ಲೇ ಶ್ರೇಷ್ಠವಾದ ಧರ್ಮವಾಗಿದೆ.‌ ಮುಸ್ಲಿಂ ಧರ್ಮದಲ್ಲಿ ಪ್ರಶ್ನಿಸೋದಕ್ಕೆ ಅವಕಾಶವೇ ಇಲ್ಲ. ಸನಾತನ ಧರ್ಮಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ನಾಶ ಮಾಡೋದಕ್ಕೆ ಬಂದೋರೆಲ್ಲ ನಾಶವಾಗಿ ಹೋಗಿದ್ದಾರೆ ಎಂದು ಹೇಳಿದರು.

ಮುಸ್ಲಿಂ ಧರ್ಮದಲ್ಲಿ ಸತ್ತ ಮೇಲೆ ಸ್ವರ್ಗದಲ್ಲಿ 73 ಕನ್ಯೆಯರು ಸಿಗುತ್ತಾರೆ ಎಂದೆಲ್ಲಾ ಹೇಳುತ್ತಾರೆ. ಇಲ್ಲಿ ಸಾಯುವ ಮೊದಲು ಸಿಗದಿದ್ದು ಸತ್ತ ಮೇಲೆ ದುರಾಸೆ ಇಡೇರಲಿ ಎಂಬ ಆಸೆ ರಾಯರೆಡ್ಡಿ ಅವರಿಗೆ ಇರಬಹುದು. ಅಬೇಂಡ್ಕರ್ ಬರೆದಿರುವ ʼಮೈ ಥಾಟ್ಸ್ ಆಫ್ ಪಾಕಿಸ್ತಾ ಅದರಲ್ಲಿ ಹೇಗೆ ಮಹಿಳೆಯರ ಶೋಷಣೆಯಾಗುತ್ತದೆ? ಹೇಗೆ ಬುರ್ಕಾ ಮಹಿಳೆಯರನ್ನು ಶೋಷಣೆ ಮಾಡುತ್ತೆ? ಎಂಬುವುದರ ಬಗ್ಗೆ ಬರೆದಿದ್ದಾರೆ. ಮನುಸ್ಮೃತಿ ಮಹಿಳೆಯನ್ನ ಇನ್ನೊಬ್ಬರ ಮೇಲೆ ಅವಲಂಬನೆಯಾಗುವ ರೀತಿ ಮಾಡುತ್ತೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ರಾಹುಲ್ ಗಾಂಧಿ ಆಗಾಗ ಎಡಬಿಡಂಗಿ ತರ ಮಾತನಾಡುತ್ತಾರೆ ಎಂದರು 

ಮುಸ್ಲಿಂ ಧರ್ಮದಲ್ಲಿ ಮಹಿಳೆಯನ್ನ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುವುದನ್ನು ಅಂಬೇಡ್ಕರ್ ಸ್ಪಷ್ಟವಾಗಿ ಹೇಳಿದ್ದಾರೆ. ಜಾಗತಿಕ ಭಯೋತ್ಪಾದನೆಗೆ ಪ್ರಮಖವಾಗಿ ಇಸ್ಲಾಂ ತತ್ವ ಕಾರಣ. ಗೂಗಲ್ ಸರ್ಚ್ ಮಾಡಿ ನೋಡಿದರೆ ಭಯೋತ್ಪಾದನೆಗೆ ಇಸ್ಲಾಂ ಚಿಂತನೆಗಳೇ ಕಾರಣ ಎಂದು ಹೇಳುತ್ತೆ. ಭಯೋತ್ಪಾದಕರಿಗೆ ಭಯಗೊಂಡು ಬಸವರಾಜ್ ರಾಯರೆಡ್ಡಿ ಇಸ್ಲಾಂ ಧರ್ಮ ಶ್ರೇಷ್ಠ ಅಂತ ಹೇಳಿರಬಹುದು. ಸುಳ್ಳು ಹೇಳಿದ್ರೆ ನನ್ನನ್ನ ಭಯೋತ್ಪಾದಕರು ಬಿಟ್ಟು ಬಿಡುತ್ತಾರೆ. ಸತ್ಯ ಹೇಳಿದ್ರೆ ಎಲ್ಲಿ ನನ್ನನ್ನೂ ಕೊಂದು ಬಿಡುತ್ತಾರೋ ಅನ್ನೋ ಭಯದಿಂದ ಹೇಳಿದ್ದಾರೆ ಎಂದು ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ

ವರದಿ : ಪಿ ಶ್ರೀನಿವಾಸ್

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಿಳಾ ಏಸಿಯಾ ಕಪ್: ನಾಳೆ ಭಾರತ-ಪಾಕ್ ಪಂದ್ಯ ಸೆ. 9 ರಂದು ಪಾಕಿಸ್ತಾನ- ಇಂಗ್ಲೆಂಡ್ ತೃತೀಯ ಟೆಸ್ಟ್ ಶೀಘ್ರದಲ್ಲೇ ಬರಪೀಡಿತ ತಾಲೂಕುಗಳ 2ನೇ ಪಟ್ಟಿ ಘೋಷಣೆ: ಡಿ.ಕೆ.ಶಿವಕುಮಾರ್ ಶೀಘ್ರದಲ್ಲಿಯೇ ಬಸ್ ಟಿಕೆಟ್ ದರ ಏರಿಕೆ: ಸಚಿವ ಬೈರತಿ ಸುರೇಶ್ ಸುಳಿವು ಚೊಕ್ಕಸಂದ್ರದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ, ದೇವರ ದರ್ಶನ ಪಡೆದ ನಾಗರಾಜ್ ಯಾದವ್ ದಂಪತಿಅಬ್ಬಿಗೆರೆಯಲ್ಲಿ ಶ್ರೀ ಕೃಷ್ಣ ಯಾದವ ಸೇವಾ ಸಮಿತಿ ವತಿಯಿಂದ  ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಗೃಹಲಕ್ಷ್ಮಿ ಬಡಾವಣೆಯಲ್ಲಿ ವಿವಿಧ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ:  ಶಾಸಕ ಎಸ್ ಮುನಿರಾಜುಕಿರಿಯ ಕ್ರಿಕೆಟ್ ಅಟಗಾರ್ ರೋಹಿತ್ ಯಾದವ್ ಗೆ 2 ವರ್ಷ ನಿಷೇಧ ಹೇರಿದ ಬಿಸಿಸಿಐ ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿ ಕೆ ಶಿವಕುಮಾರದೌರ್ಜನ್ಯ ವಿರೋಧಿ ಸಂಘಟನೆಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಸಚಿವರಿಗೆ ಮನವಿ