ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣ ಇಡೀ ಕರ್ನಾಟಕವನ್ನೇ ನಡುಗಿಸಿತ್ತು. ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಕೇಸ್‌ನಲ್ಲಿ ಜೈಲು ಪಾಲಾಗಿ ಇಂದಿಗೆ (ಜೂನ್ 11) ಸರಿಯಾಗಿ ಎರಡು ವರ್ಷಗಳು ಕಳೆದಿವೆ.
ಕಳೆದ 2024ರ ಜೂನ್ 11ರಂದು ಮೈಸೂರಿನ ಹೋಟೆಲ್ ಒಂದರಲ್ಲಿ ಇದ್ದಾಗಲೇ ನಟ ದರ್ಶನ್ ಹಾಗೂ ಅವರ ಆಪ್ತರನ್ನು ಪೊಲೀಸರು ಬಂಧಿಸಿದ್ದರು.
ಮಧ್ಯದಲ್ಲಿ ಒಮ್ಮೆ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದ ದರ್ಶನ್, ಆ ಬಳಿಕ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ 2025ರ ಆಗಸ್ಟ್ 14ರಂದು ಮತ್ತೆ ಜೈಲು ಪಾಲಾಗಿದ್ದರು.
ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್, ತಮ್ಮ ಬಹುನಿರೀಕ್ಷಿತ 'ಡಿ ಡೆವಿಲ್' ಸಿನಿಮಾದ ಶೂಟಿಂಗ್ ಮುಗಿಸಿದ್ದರೂ, ಚಿತ್ರದ ರಿಲೀಸ್ ಸಂಭ್ರಮವನ್ನು ಜೈಲಿನಲ್ಲೇ ಕಳೆಯುವಂತಾಯಿತು.
ಅಷ್ಟೇ ಅಲ್ಲದೆ, ಈ ವರ್ಷ ತಮ್ಮ 49ನೇ ಹುಟ್ಟುಹಬ್ಬ ಹಾಗೂ 23ನೇ ಮದುವೆ ವಾರ್ಷಿಕೋತ್ಸವವನ್ನು ಕುಟುಂಬ ಮತ್ತು ಅಭಿಮಾನಿಗಳ ಜೊತೆ ಆಚರಿಸಲಾಗದೆ ಜೈಲಿನ ಕೋಣೆಯಲ್ಲೇ ಮಿಸ್ ಮಾಡಿಕೊಂಡಿದ್ದಾರೆ.


