ಬೆಳಗಾವಿ : ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 1.15 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಆಗಿದ್ದು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಕೆಳಹಂತದ 6 ಕೆಳ ಹಂತದ ಸೇತುವೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ.
ಗ್ರಾಮದ ನಾಲ್ಕೈದು ಮನೆಗಳಿಗೆ ನದಿಯ ನೀರು ನುಗ್ಗಿದೆ. ಕಾರದಕ ಗ್ರಾಮದ ಸಮೀಪಕ್ಕೆ ದೂದಗಂಗಾ ನದಿ ನೀರು ಬಂದಿದ್ದು ಚಿಕ್ಕೋಡಿಯಲ್ಲಿ 3 ಮತ್ತು ಗೋಕಾಕ್ನಲ್ಲಿ ಕೆಳಹಂತದ ಒಂದು ಸೇತುವೆ ಜಲಾವೃತಗೊಂಡಿದೆ.
ಬೆಳಗಾವಿ ಜಿಲ್ಲೆಯಲ್ಲಿ ಇದುವರೆಗೂ 10 ಸಂಪರ್ಕ ಸೇತುವೆಗಳು ಮುಳುಗಡೆಯಾಗಿದೆ. ಜಮೀನುಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಆಗಿದೆ.
ಜಮೀನುಗಳಲ್ಲಿರುವ ಮನೆಗಳಿಗೆ ನೀರು ಬರುವುದನ್ನು ತಿಳಿದು ಮೊದಲೇ ಜನರು ಮನೆ ಖಾಲಿ ಮಾಡಿದ್ದರಿಂದ ಭಾರಿ ಅನಾಹುತ ತಪ್ಪಿದೆ.
ಅಪಾಯದ ಮಟ್ಟ ಮೀರಿ ಕೃಷ್ಣಾ ನದಿ ಹಾಗೂ ವೇದಗಂಗಾ ದೂದಗಂಗಾ ನದಿ ಹರಿಯುತ್ತಿದ್ದು ಇದೀಗ ಬೆಳಗಾವಿ ಜಿಲ್ಲೆಯ ನಿಪ್ಪಣಿ ತಾಲೂಕಿನ ಕಾರದಗ ಗ್ರಾಮದಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ.
ಸುಮಾರು 30ಕ್ಕೂ ಹೆಚ್ಚು ಗ್ರಾಮಸ್ಥರು ಪರ್ಯಾಯ ಮಾರ್ಗದಲ್ಲಿ ಸಂಚಾರ ಕಲ್ಪಿಸಲಾಗಿದೆ ಮನೆಯ ಅಕ್ಕ-ಪಕ್ಕದ ಜಮೀನುಗಳು ಕೂಡ ಜಲಾವೃತವಾಗಿದೆ. ಮಳೆ ಮುಂದುವರೆದರೆ ಮನೆಗಳು ಮತ್ತು ಶಾಲೆಗೆ ನೀರು ಮಗು ಆತಂಕ ಎದುರಾಗಿದೆ.


