ಮಾನ್ವಿ: ಪಟ್ಟಣದ ಕುಬಾ ಮಸ್ಜೀದ್ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮಾನವಿ ತಾಲೂಕು ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಸುದ್ದಿಗಾರರೊಂದಿಗೆ ಮಾತನಾಡಿ ಪ್ರವಾದಿ ಮುಹಮ್ಮದ್ ರವರ ಜನ್ಮ ದಿನ ಅಂಗವಾಗಿ ಪ್ರವಾದಿ ಮುಹಮ್ಮದ್ ರವರ ಸಂದೇಶಗಳನ್ನು ಕನ್ನಡ ಜನತೆಗೆ ಪರಿಚಯಿಸುವುದು, ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು, ಪರಸ್ಪರ ಬಾಂಧವ್ಯಗಳನ್ನು ಬಲಪಡಿಸುವ ಉದ್ದೇಶದಿಂದ ಮಾನ್ವಿ ತಾಲೂಕಿನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಆ.26 ರಿಂದ ಸೆ.6 ರವರೆಗೆ ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ ಎನ್ನುವ ಹೆಸರಿನಡಿಯಲ್ಲಿ ಸೀರತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಆ.26 ರಂದು ವಿವಿಧ ಸಮುದಾಯಗಳ ಮುಖಂಡರ ಭೇಟಿ, ಆ.27ರಂದು ಹಾಗೂ ಆ.28 ರಂದು ಕುಬಾ ಮಸೀದ್ ಸಭಾಂಗಣದಲ್ಲಿ ಸಮುದಾಯದ ಮುಖಂಡರೊಂದಿಗೆ ಸಭೆ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮ, ಹಾಗೂ ಉಮರ್ ಹಾಗೂ ಅಕ್ಬರಿ ಮಸ್ಜಿದ್‌ಗಳಲ್ಲಿ ಹಿರಿಯ ಸಾಹಿತಿ ಯೋಗೇಶ್ ಮಾಸ್ಟರ್ ರಚಿಸಿದ ಮಾನವ ಮನದೊಡೆಯ ಪ್ರವಾದಿ ಮುಹಮ್ಮದ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಆ.29 ರಂದು ಪಟ್ಟಣದ ಆಸ್ಪತ್ರೆಗಳಿಗೆ ಹಣ್ಣುಗಳ ವಿತರಣೆ, ಆ.30 ರಿಂದ ಸೇ 3 ರವರೆಗೆ ಗ್ರಾಮೀಣ ಭಾಗದಲ್ಲಿ ಹಾಗೂ ಪಟ್ಟಣದಲ್ಲಿ ಸೀರತ್ ಸೌಹಾರ್ದ ಕಾರ್ಯಕ್ರಮಗಳು .ಸೆ.4 ರಂದು ಪಟ್ಟಣದ ಈದ್ಗಾ ಶಾದಿ ಮಹಲ್‌ನಲ್ಲಿ ಹಿರಿಯ ಸಾಹಿತಿ ಅಬ್ದುಸಲಾಮ್ ಪುತ್ತಿಗೆಯವರು ರಚಿಸಿದ ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್ ಎಂಬ ಪುಸ್ತಕವನ್ನು ಹಿರಿಯ ವೈದ್ಯಾರಾದ ಡಾ.ಬಸವಪ್ರಭು ಪಾಟೀಲ್ ಬಿಡುಗಡೆ ಗೊಳ್ಳಿಸಲಿದ್ದಾರೆ. ನಂತರ ವಿಚಾರಗೋಷ್ಠಿಗಳು ನಡೆಯಲಿವೇ. ಸೆ.6 ರಂದು ಮಹಿಳಾ ವಿಭಾಗದ ಸೀರತ್ ಕಾರ್ಯಕ್ರಮ & ವಸ್ತು ಪ್ರದರ್ಶನದಲ್ಲಿ ಪ್ರವಾದಿ ಮುಹಮ್ಮದ್ ರವರ ಜೀವನ ಹಾಗೂ ಸಂದೇಶಗಳುಳ್ಳ ಭಿತ್ತಿ ಪತ್ರಗಳ ಪ್ರದರ್ಶನ ಹಾಗೂ ಕಾಲೇಜುಗಳಲ್ಲಿ ಪ್ರಭಂದ ಸ್ಪರ್ಧೆ ,ಸೌಹಾರ್ದ ಸಂದೇಶ ದೊಂದಿಗೆ ರ‍್ಯಾಲಿಗಳು ನಡೆಯಲಿವೆ ಎಂದು ತಿಳಿಸಿದರು.
ಸೀರತ್ ಅಭಿಯಾನದ ಭಿತ್ತಿ ಪತ್ರಗಳನ್ನು ಜಮಾಅತೆ ಇಸ್ಲಾಮೀ ಹಿಂದ್ ರಾಯಚೂರು ಜಿಲ್ಲಾ ಸಂಚಾಲಕರಾದ ಅಬ್ದುಲ್ ಕರೀಮ್ ಖಾನ್ ಸಾಬ್ ಬಿಡುಗಡೆಗೊಳ್ಳಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಮಹಿಳಾ ವಿಭಾಗದ ಸಂಚಾಲಕರಾದ .ಸೈಯದಾ ನುಸ್ರತ್ ಜಹಾ,ಜಿಲ್ಲಾ ಉಪಾಧ್ಯಕ್ಷರಾದ ಎಮ್.ಎ.ಎಚ್.ಮುಖೀಮ್, ಸದಸ್ಯರಾದ ಜುಬೇದಾ ಬೇಗಂ, ಮುಹಮ್ಮದ್ ದಾವೂದ್ ಸಿದ್ದಿಖಿ , ಶೇಖ್ ಫಾರೀದ್ ಉಮ್ರಿ, ಉಮರ್ ಫಾರೂಖ್ ದೇವರಮನಿ ಸೇರಿದಂತೆ ಇನ್ನಿತರರು ಇದ್ದರು.
ವರದಿ :ಆಂಜನೇಯ ನಸಲಾಪುರ


