Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯ ಜೆಡಿಎಸ್ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರಾಗಿ ಶಿವಕುಮಾರ್ ನಾಟೀಕಾರ ನೇಮಕ

Advertisement


 ಹಗರಿಬೊಮ್ಮನಹಳ್ಳಿ: ಜೆಡಿಎಸ್ ಪಕ್ಷದ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರಾಗಿ ಶಿವಕುಮಾರ್ ನಾಟೀಕಾರ್ ಅವರನ್ನು ನೇಮಕ ಮಾಡಿರುವುದಕ್ಕೆ ವಿಜಯನಗರ ಜಿಲ್ಲಾ ಗಂಗಾಮತ ಬೆಸ್ತ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರ್ದಾರ್ ಯಮನೂರಪ್ಪ ಅವರು ಅಭಿನಂದನೆಯನ್ನುಸಲ್ಲಿಸಿರುತ್ತಾರೆ   ಶಿವಕುಮಾರ್ ನಾಟೀಕಾರ್ ಅವರ 15 ರಿಂದ 20 ವರ್ಷಗಳ ನಿರಂತರ ಸಾರ್ವಜನಿಕರ ಸೇವೆಯನ್ನು ಗುರುತಿಸಿ ಈ ಹಿಂದೆ ಅವರನ್ನು   ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನೇಮಿಸಲಾಗಿತ್ತು.

news_1779372710_0_875.webp

 

 ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಫಜಲಪುರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಲಾಗಿತ್ತು ಈಗ ಮತ್ತೆ ಜೆಡಿಎಸ್ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷನಾಗಿ ರಾಜ್ಯಾದ್ಯಂತ ತಳಮ-ಟ್ಟದಲ್ಲಿ ಪಕ್ಷವನ್ನು ಕಟ್ಟುವ ಜವಾಬ್ದಾರಿಯನ್ನು ಎಚ್ ಡಿ ಕುಮಾರಸ್ವಾಮಿ ಅವರು ನೇಮಿಸಿದ್ದಾರೆ ಕುಮಾರಸ್ವಾಮಿ ಅಣ್ಣನವರನ್ನು ಅಭಿನಂದನೆಗಳನ್ನು ತಿಳಿಸುತ್ತಾರೆ.  ಭೀಮಾನದಿಯ ಉಳಿವಿಗಾಗಿ, ಈ ಹಿಂದೆ ಭೀಮಾನದಿ ಸಂಪೂರ್ಣ ಬತ್ತಿ ಕುಡಿಯುವ ನೀರಿಗೂ ಹಾಹಾಕಾರವಾದಾಗ ಶಿವಕುಮಾರ್ ನಾಟಿಕಾರ ಅವರು ಮಾಡಿದ ಅಮರಣಾಂತ ಉಪವಾಸ ಸತ್ಯಾಗ್ರಹ, ಪ್ರಸಿದ್ದಿ ಯಾತ್ರಾ ಸ್ಥಳವಾದ  ದೇವಲಗಾಣಪುರದ ದತ್ತಾತ್ರೇಯ ದೇವಸ್ಥಾನದ ಅಭಿವೃದ್ಧಿಗಾಗಿ ಮಾಡಿರುವ ಹೋರಾಟ ರಾಜ್ಯದ ಜನರ ಗಮನ ಸೆಳೆದಿದ್ದವು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಇದ್ದರು.  ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಶಿವಕುಮಾರ್ ನಾಟೀಕರ್ ಅವರ ನಾಯಕತ್ವದಲ್ಲಿ ಪಕ್ಷದ ಸಂಘಟನೆ ಮತ್ತಷ್ಟು ಗಟ್ಟಿಯಾಗಲಿ ಎಂದು ಸರ್ದಾರ್ ಯಮನೂರಪ್ಪ ಶುಭ ಹಾರೈಸಿದ್ದಾರೆ.

 ಕೇಂದ್ರ ಸಚಿವರು ಹಾಗೂ ಜೆಡಿಎಸ್ ರಾಜ್ಯ ನಾಯಕರು ಆದ ಎಚ್ ಡಿ ಕುಮಾರಸ್ವಾಮಿ ಅಣ್ಣನವರ ಮಾರ್ಗದರ್ಶನದಲ್ಲಿ ಶಿವಕುಮಾರ್ ನಾಟೀಕಾರ್ ಅವರನ್ನು ಹಿಂದುಳಿದ ವರ್ಗದ ರಾಜ್ಯ ಅಧ್ಯಕ್ಷರಾಗಿ ನೇಮಕ ಮಾಡಿರುವುದು ಪಕ್ಷದ ಸಂಘಟನೆ ಹೊಸ ಬಲ ನೀಡಿದೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.  ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ನೇಮಿರಾಜ ನಾಯ್ಕ. ಮತ್ತು ಪಕ್ಷದ ಮುಖಂಡರು ಕಾರ್ಯಕರ್ತರು ಮತ್ತು ಇತರರು ಇದ್ದರು
ವರದಿ : ಎಂ ಮಂಜುನಾಥ್

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST