Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶನಿ ಜಯಂತಿ ಅಂಗವಾಗಿ ಲೋಕ ಕಲ್ಯಾಣಕ್ಕಾಗಿ ಧನಶ್ರೀ ಶನೇಶ್ವರಸ್ವಾಮಿಗೆ ವಿಶೇಷ ಪೂಜೆ

Advertisement

ಐನಾಪುರ : ಸಮೀಪದ ಮಧಬಾವಿ ಗ್ರಾಮದ ಪ್ರಸಿದ್ಧ ಉತ್ತರ ಕರ್ನಾಟಕದ ವಿಶೇಷ ದೇವಸ್ಥಾನವಾದ ಶ್ರೀ ಧನಶ್ರೀ ಶನೇಶ್ವರ ದೇವಸ್ಥಾನದಲ್ಲಿ ವಿಶೇಷ ಬಾದಮಿ ಅಮವಾಸ್ಯೆ ನಿಮಿತ್ತ ಹಾಗೂ ಶನಿ ಜಯಂತಿ ಅಂಗವಾಗಿ ಲೋಕ ಕಲ್ಯಾಣಕ್ಕಾಗಿ ಧಾರ್ಮಿಕ ಕಾರ್ಯಕ್ರಮ ನಡೆದವು. ದೇವಸ್ಥಾನ ಪ್ರಧಾನ ಅರ್ಚಕ ಪ್ರವೀಣ ಶಾಸ್ತ್ರೀ ಹಿರೇಮಠ ಮಾತನಾಡಿ 13ವರ್ಷದಲ್ಲಿ ಶನಿ ಜಯಂತಿಯು ಶನಿವಾರದಂದು ದಿನದಂದು ಬಾದಮಿ ಅಮಾವಾಸ್ಯೆ ಬಂದಿರುವುದು ಅತ್ಯಂತ ಶ್ರೇಷ್ಠವಾಗಿದ್ದು . ಲೋಕ ಕಲ್ಯಾಣಕ್ಕಾಗಿ ಸಾಮೂಹಿಕವಾಗಿ ಬೆಳಿಗ್ಗೆ ಪ್ರಾರ್ಥಕಾಲದಲ್ಲಿ ಶನಿ ದೇವರಿಗೆ ತೈಲಾಭಿಷೇಕ,ಪಂಚಾಮೃತ ಅಭಿಷೇಕ್  ಗಣ ಹೊಮ,ನವಗ್ರಹ ಹೊಮ,ಮಹಾ ಮೃತುಂಜಯ ಹೊಮ,ಶನಿ ರುದ್ರಾಭಿಷೇಕ, ರಾಜೋಪಚಾರ ಹಾಗೂ ಮಹಾ ಮಂಗಳಾರತಿ ನಡೆದಿದ್ದು. ಅಷ್ಟಮ ಶನಿ, ಸಾಡಿ ಸಾತಿ ಶನಿ, ಶನಿ ದಶಾ, ಆರೋಗ್ಯ ಸಮಸ್ಯೆ, ಆರ್ಥಿಕ ಹಾನಿ, ಕುಟುಂಬ ಕಲಹ, ಉದ್ಯೋಗದಲ್ಲಿ ನಷ್ಟ ಹಾಗೂ ಅನೇಕ ಸಮಸ್ಯೆಗಳಿದ್ದವರು ಮತ್ತು ಮೇಷ, ಮಿಥುನ, ಕರ್ಕ, ಸಿಂಹ, ಕನ್ಯಾ, ಧನು, ಕುಂಭ ಹಾಗೂ ಮೀನ ರಾಶಿಯವರು ಭಕ್ತಿಯಿಂದ ಶ್ರೀ ಶನಿ ದೇವರ ಆರಾಧನೆ ಮಾಡಿ ದೇವರ ಕೃಪೆಗೆ ಪಾತ್ರರಾಗಿ ಲಾಭ ಪಡೆದುಕೊಳ್ಳಬೇಕೆಂದು ಕರೆ ನೀಡಿದ ಅವರು  ಸಾರ್ವಜನಿಕವಾಗಿ ದೇವರು ಓಳ್ಳಯದನ್ನು ಮಾಡಲಿ ಎಂದು ಪ್ರಾರ್ಥನೆ ಮಾಡಲಾಯಿತು,ಸನಾತನ ಧರ್ಮದ ವಿಶೇಷತೆ ಎನೆಂದರೆ ದೇವತೆಗಳನ್ನು ಆರಾಧನೆ ಮತ್ತು ಪರೋಪಕಾರ ಎಷ್ಟು ನಾವುಗಳು ದೇವತೆಗಳನ್ನು ಆರಾಧನೆ ಮಾಡುತ್ತಾ ಬರುತ್ತೆವೊ ಅಷ್ಟು ನಮಗೆ ಪುಣ್ಯ ಫಲಗಳು ಪ್ರಾಪ್ತಿ ಯಾಗುತ್ತದೆ ಹೋಗುತ್ತವೆ ಬರುವಂತಹ ದಿನಗಳು ಜನರಿಗೆ ಸುಖ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಕೇಳಿಕೊಳ್ಳುತ್ತೆನೆ ಎಂದು ಹೇಳಿದರು.

ಧರ್ಮಾಧಿಕಾರಿ ಮಾರುತಿ ಭಂಡಾರಿ ಮಾತನಾಡಿ ರಾಶಿಗಳಲ್ಲಿ ಅತ್ಯಂತ ಪ್ರಬಲವಾದ ಹಾಗೂ ನ್ಯಾಯ ದೇವತೆಯಾದ ಶನೇಶ್ಚರ ಸ್ವಾಮಿಯು ಪ್ರತಿಯೊಂದು ರಾಶಿಗಳಲ್ಲಿ ಬಂದು ಅವರ ಕರ್ಮಾದಿಗಳನ್ನು ಅನುಸರಿಸಿ ಶುಭ ಹಾಗೂ ಅಶುಭ ಫಲಗಳನ್ನು ನೀಡುತ್ತಾನೆ ಎಂದರು.   ಶನಿ ದೇವರಿಗೆ ಅಮವಾಸ್ಯೆ ನಿಮಿತ್ತ ವಿಶೇಷ ಇಪ್ಪತ್ತು ನೋಟಿನಿಂದ  ಅಲಂಕಾರ ಮಾಡಲಾಗಿತ್ತು ಹೊಮ ಹವನ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಜಿಲ್ಲೆಗಳ ಹಾಗೂ ನೆರೆ ಮಹಾರಾಷ್ಟ್ರ ರಾಜ್ಯದ ಸುಮಾರು  ಸಾವಿರಾರು ಭಕ್ತರು ಪಾಲ್ಗೊಂಡ ಪುನಿತರಾದರು. ಈ ವೇಳೆ  ಇಂದೂಧರ ಹಿರೇಮಠ ವಾಗೀಶ ಉಜ್ಜಯಿನಿಮಠದ ಶಾಂತವೀರಯ್ಯ ಹಿರೇಮಠ, ಸೋಮಯ್ಯ ಹಿರೇಮಠ, ಚಂದ್ರಶೇಖರಯ್ಯ ಹಿರೇಮಠ, ರಮೇಶ ಭಂಡಾರಿ, ಕೇಶವ ಭಂಡಾರಿ, ವಿಠಲ ಭಂಡಾರಿ, ದಿಲೀಪ್ ಕಾಂಬಳೆ ಸೇರಿದಂತೆ ಸಹಸ್ರಾರು ಭಕ್ತರು ಆಗಮಿಸಿದ್ದರು. ಪ್ರಸಾದ ಸೇವೆಯನ್ನು ಶ್ರೀಪಾಲ ದತ್ತ ವಾಡಿ ಮಾಡಿದ್ದರು.
ವರದಿ:ಮುರಗೇಶ ಗಸ್ತಿ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST