LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಒಂದು ದಿನದ ವಿಶೇಷ ಅಧಿವೇಶನ ಕರೆಯಲು ರಾಜ್ಯ ಸರ್ಕಾರ ತೀರ್ಮಾನ : ಕಾರಣ ಇಲ್ಲಿದೆ

Advertisement

ಬೆಂಗಳೂರು : ಪಶ್ಚಿಮ ಘಟ್ಟಗಳ ಭಾಗಗಳನ್ನು ಕಸ್ತೂರಿರಂಗನ್ ಸಮಿತಿಯ ಶಿಫಾರಸಿನ ಆಧಾರದ ಮೇಲೆ 'ಪರಿಸರ ಸೂಕ್ಷ್ಮ ಪ್ರದೇಶ' (ESA) ಎಂದು ಘೋಷಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯ ಕುರಿತು ಚರ್ಚಿಸಲು ರಾಜ್ಯ ಸರ್ಕಾರವು ಶೀಘ್ರದಲ್ಲೇ ಒಂದು ದಿನದ ವಿಶೇಷ ಶಾಸನಸಭೆ ಅಧಿವೇಶನವನ್ನು ಕರೆಯಲಿದೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬುಧವಾರ ಪ್ರಕಟಿಸಿದ್ದಾರೆ.

ಕಾಂಗ್ರೆಸ್ ಎಂಎಲ್‌ಸಿಗಳು ಹಾಗೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳೊಂದಿಗೆ ನಡೆಸಿದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯದ ಕುರಿತು ಸರ್ವಪಕ್ಷ ಮಟ್ಟದ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

ಕಸ್ತೂರಿರಂಗನ್ ವರದಿ ಆಧರಿಸಿ ಕೇಂದ್ರ ಹೊರಡಿಸಿರುವ 7 ನೇ ಕರಡು ಅಧಿಸೂಚನೆಯನ್ನು ಪ್ರಸ್ತುತ ರೂಪದಲ್ಲಿ ಅಂತಿಮಗೊಳಿಸಬಾರದು. ಕೇಂದ್ರವು 6 ರಾಜ್ಯಗಳಾದ್ಯಂತ 56,000 ಚದರ ಕಿ.ಮೀ ಪ್ರದೇಶವನ್ನು ಇಎಸ್‌ಎ ಎಂದು ಘೋಷಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಇದರಲ್ಲಿ ಕರ್ನಾಟಕ ಒಂದರಲ್ಲೇ 10 ಜಿಲ್ಲೆಗಳ 33 ತಾಲೂಕುಗಳು ಹಾಗೂ 1,449 ಗ್ರಾಮಗಳನ್ನು ಒಳಗೊಂಡ 20,668 ಚದರ ಕಿ.ಮೀ ಪ್ರದೇಶವನ್ನು ಸೇರಿಸಲಾಗಿದೆ.

ಈ ನಿರ್ಧಾರದಿಂದ ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಮಡಿಕೇರಿ, ಹಾಸನ, ಕಾರವಾರ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ರೈತರ ಜೀವನೋಪಾಯ ಹಾಗೂ ಮುಂಬರುವ ಅಭಿವೃದ್ಧಿ ಕಾರ್ಯಗಳ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಸಚಿವ ಸತೀಶ್ ಜಾರಕಿಹೊಳಿಗೆ ಮನೆ ಮೇಲೆ ಇಡಿ ದಾಳಿ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ : ಕನ್ನಡ ಮಾಧ್ಯಮ ಶಾಲೆಗೆ ಅನುದಾನ ನೀಡುವಂತೆ ಆಗ್ರಹ ಸಿಎಂ ಸಂಪರ್ಕ ಸಲಹೆಗಾರರಾಗಿ ದೀಪಕ್ ತಿಮ್ಮಯ್ಯ ನೇಮಕ ನಾಳೆ ಡಿ. ಕೆ ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ 100 ದಿನ : ಮಹತ್ವದ ಘೋಷಣೆ ಸಾಧ್ಯತೆ ಕಾಸ್ಮೆಟಿಕ್ ಟ್ರೀಟ್‌ಮೆಂಟ್ ಬಳಿಕ ಉದ್ಯಮಿ ದುರ್ಮರಣ :7 ಕೋಟಿ ರೂ. ಚಿನ್ನದ ಶವಪೆಟ್ಟಿಗೆಯಲ್ಲಿ ಅಂತ್ಯಕ್ರಿಯೆ ನಾಳೆಯಿಂದ ಇಂಗ್ಲೆಂಡ್- ಪಾಕಿಸ್ತಾನ ತೃತೀಯ ಟೆಸ್ಟ್ ಶುರು ವಿಜಯೇಂದ್ರ ಏನೇ ಪಾದಯಾತ್ರೆ ಮಾಡಿದ್ರೂ ರಾಜ್ಯಾಧ್ಯಕ್ಷ ಸ್ಥಾನದಿಂದ ಔಟ್ ಫಿಕ್ಸ್ : ಯತ್ನಾಳ್ ಡಿಕೆಶಿ ಸರ್ಕಾರಕ್ಕೆ 100 ದಿನದ ಸಂಭ್ರಮ : ಡಿ. ಕೆ ಶಿವಕುಮಾರ್ ಗೆ ಹೈಕಮಾಂಡ್ ಬುಲಾವ್ಸರ್ವಜನಾಂಗದ ಹಿತಕ್ಕಾಗಿ ಭಗವಂತನೇ ಸೃಷ್ಟಿಸಿದ ಯೋಜನೆ: ಮೃತ್ಯುಂಜಯ ದೇಶೀಕೇಂದ್ರ ಶ್ರೀ ಶ್ಲಾಘನೆಮಾನ್ವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆ ಒಕ್ಕೂಟದ ವತಿಯಿಂದ ಶಿಕ್ಷಕರ ದಿನಾಚರಣೆ.  ಶ್ರೀ ರಾಜಾ ಸುಭಾಷ್ ಚಂದ್ರ ನಾಯಕ್