LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಮಗನಿಗೆ ಸರ್ಕಾರಿ ನೌಕರಿ ಸಿಗಲಿ ಎಂದು ಆತ್ಮಹತ್ಯೆ : ಪಿಎಸ್‍ಐ ಡೆತ್ ನೋಟ್ ನಲ್ಲಿ ಉಲ್ಲೇಖ

Advertisement
ದಾವಣಗೆರೆ : ದಾವಣಗೆರೆ PSI ನಾಗರಾಜಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಲ್ಲಿ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ.

ತುಮಕೂರಿನಲ್ಲಿ ದಾವಣಗೆರೆ ಪಿಎಸ್ ಐ ನಾಗರಾಜಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದರು. ತುಮಕೂರಿಗೆ ಬರುವ ಮುನ್ನ ಮನೆಯಲ್ಲಿ ಪಿಎಸ್ ಐ ಜಗಳವಾಡಿದ್ದರು ಎನ್ನಲಾಗಿದೆ.

ಇಂಜಿನಿಯರಿಂಗ್ ಓದಿದ್ದ ಮಗ ಮನೆಯಲ್ಲಿ ಇದ್ದಿದ್ದಕ್ಕೆ ನಾಗರಾಜಪ್ಪ ತೀವ್ರ ಬೇಸರಗೊಂಡಿದ್ದರು. ಈ ವಿಚಾರಕ್ಕೆ ಮನನೊಂದು ನಾಗರಾಜಪ್ಪ ತುಮಕೂರಿನ ಲಾಡ್ಜ್ ಒಂದರಲ್ಲಿ ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮಗನ ವಿಚಾರಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನ ಮಗನಿಗೆ ಕೆಲಸ ಸಿಗಲಿ ಎಂಬ ಉದ್ದೇಶಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಪಿಎಸ್ ಐ ನಾಗರಾಜ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಈ ಪ್ರಕರಣವನ್ನ ದಾವಣಗೆರೆಯ ಠಾಣೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ದಾವಣಗೆರೆ ನಗರದ ಬಡಾವಣೆ ಠಾಣೆಯ ಪಿಎಸ್ ಐ ನಾಗರಾಜಪ್ಪ ತುಮಕೂರಿನ ದ್ವಾರಕ ಲಾಡ್ಜ್ ನ ರೂಮಿನಲ್ಲಿ ನೇಣಿಗೆ ಶರಣಾಗಿದ್ದರು.

ಜುಲೈ 1ರಂದು ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದ ಪಿಎಸ್ ಐ ನಾಗರಾಜ್, ಬಳಿಕ ರೂಮಿನಿಂದ ಹೊರಬಂದಿರಲಿಲ್ಲ. ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಬಾಗಿಲು ತೆರೆದು ನೋಡಿದಾಗಲೇ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಐರ್ಯಲೆಂಡ್‌ಗೆ ೩೦೦ ರನ್‌ಗಳ ಗೆಲುವಿನ ಗುರಿಶ್ರೀಲಂಕಾ ಇಲೆವೆನ್ ಉತ್ತಮ ಮೊತ್ತಕಳಸಕೊಪ್ಪ ಸೇರಿದಂತೆ 8 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮ: ಜೆ ಟಿ ಪಾಟೀಲಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಕೋಟಿ ಕೋಟಿ ಹಣ ವಂಚನೆ ಕೇಸ್ : ಶಿವಾನಂದ ನೀಲಣ್ಣವರ ಇಡಿ ರೇಡ್ಹಾಡ ಹಾಗಲೇ ಗುಂಡಿಕ್ಕಿ ಕಾಂಗ್ರೆಸ್ ಮುಖಂಡ ಬರ್ಬರ ಹತ್ಯೆ ಆಗಸ್ಟ್ 15ವರೆಗೆ ಖಾತೆ ಹಂಚಿಕೆಗೆ ಕಾಲಾವಕಾಶ ಇದೆ : ಡಿ.ಕೆ.ಶಿವಕುಮಾರ್ಆಗಸ್ಟ್ 13 ರಂದು ಅಧಿವೇಶನ,14 ರಂದು ನೂತನ ಉಪಸಭಾಪತಿಗಳ ಆಯ್ಕೆ : ಡಿ.ಕೆ.ಶಿವಕುಮಾರ್ಹುತಾತ್ಮ ಯೋಧ ಅಂಗಡಿ ಮಂಜುನಾಥ ನಾಯಕ ಸಾದಾಪುರ ಪುಣ್ಯ ಸ್ಮರಣೆ​ಶ್ರೀ ಕ್ಷೇತ್ರ ಪರಕನಹಟ್ಟಿಯಿಂದ ಹುಬ್ಬಳ್ಳಿಗೆ ಪ್ರಥಮ ವರ್ಷದ ಸಿದ್ಧಾರೂಢ ಪಾದಯಾತ್ರೆ: ಭಕ್ತಿಪರವಶತೆಯಿಂದ ಚಾಲನೆಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ  : ಶಾಸಕ ಜಿ.ಹಂಪಯ್ಯ ನಾಯಕ ಸಾಹುಕಾರ