ನವದೆಹಲಿ : ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (NPPA) ಹೃದಯ ಸಂಬಂಧಿ ಕಾಯಿಲೆ, ಮಧುಮೇಹ (Diabetes) ಮತ್ತು ಹಾರ್ಮೋನ್ (Good News) ಸಮಸ್ಯೆಗಳಿಗೆ ಬಳಸುವ ಒಟ್ಟು 42 ಔಷಧಗಳ ಬೆಲೆಯನ್ನು ಇಳಿಕೆ ಮಾಡಿದೆ.
ಔಷಧಗಳ ಬೆಲೆ ನಿಯಂತ್ರಣ ಕಾಯ್ದೆ 2013ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಇನ್ಮುಂದೆ ಮೆಡಿಕಲ್ ಶಾಪ್‌ಗಳಲ್ಲಿ ಈ ಮಾತ್ರೆಗಳು ನಿಗದಿಪಡಿಸಿದ ಗರಿಷ್ಠ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ.
ಪ್ರಮುಖವಾಗಿ ದೀರ್ಘಕಾಲದ ಚಿಕಿತ್ಸೆಗೆ ಬಳಸುವ ಕಾಂಬಿನೇಷನ್ ಮಾತ್ರೆಗಳ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ:

