Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಂತ್ಯ ಸಂಸ್ಕಾರಕ್ಕೆ ಬಾರದ ಮಕ್ಕಳು : ಸಮಾಜ ಸೇವಕರೇ ವೃದ್ಧೆಯ ಅಂತ್ಯಕ್ರಿಯೆ 

Advertisement
ಬೆಳಗಾವಿ: ಇಲ್ಲಿನ ಶಾಹೂ ನಗರದ ವೃದ್ಧಾಶ್ರಮದಲ್ಲಿ ಅಂಜನಾ ಧಾಮನೆ (66) ಎನ್ನುವವರು ಸೋಮವಾರ ನಿಧನರಾದರು. ಅವರಿಗೆ ಇರುವ ಇಬ್ಬರು ಗಂಡು ಮಕ್ಕಳು ಶವ ಸಂಸ್ಕಾರಕ್ಕೂ ಬರಲಿಲ್ಲ. ಮೂವರು ಸಮಾಜ ಸೇವಕರೇ ವೃದ್ಧೆ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದರು.

ತಾಲ್ಲೂಕಿನ ಮಾರಿಹಾಳ ಗ್ರಾಮದ ಅಂಜನಾ ಅವರಿಗೆ ಮಕ್ಕಳಿದ್ದರೂ ನೋಡಿಕೊಳ್ಳದೇ ಕೆಲವು ವರ್ಷಗಳ ಹಿಂದೆ ವೃದ್ಧಾಶ್ರಮ ಸೇರಿಸಿದ್ದರು.

ಕೆಲ ತಿಂಗಳಿಂದ ಅವರು ವಯೋಸಹಜ ಕಾಯಿಲೆಗೆ ಒಳಗಾದರು. ಮಾಹಿತಿ ನೀಡಿದರೂ ಮಕ್ಕಳು ತಾಯಿಯ ಆರೈಕೆಗೆ ಬರಲಿಲ್ಲ. ಭಾನುವಾರ ಅವರು ನಿಧನರಾದ ಬಳಿಕವೂ ಮಕ್ಕಳಿಗೆ ವಿಷಯ ಮುಟ್ಟಿಸಲಾಯಿತು. ನೀವೇ ಶವಸಂಸ್ಕಾರ ಮಾಡಿ ಎಂಬ ಉತ್ತರ ಮಕ್ಕಳಿಂದ ಬಂದು ಎಂದು ಅನಾಥಾಶ್ರಮದ ಸಿಬ್ಬಂದಿ ತಿಳಿಸಿದರು.

ಸ್ಥಳಕ್ಕೆ ಬಂದ ಮಹಾನಗರ ಪಾಲಿಕೆ ಸದಸ್ಯ ಶಂಕರ ಪಾಟೀಲ ಹಾಗೂ ಸಮಾಜಸೇವಕ ಗಂಗಾಧರ ಪಾಟೀಲ ವೃದ್ಧೆಯ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡರು. ಇವರಿಗೆ ನಿಖಿಲ್ ಅಪ್ಪುಗೋಳ, ಸ್ಮಶಾನ ಭೂಮಿ ಸಿಬ್ಬಂದಿ ನಿಸ್ಸಾರ ಅವರು ಸಾಥ್ ನೀಡಿದರು. ಆಂಬುಲೆನ್ಸ್‌ ಮೂಲಕ ಶವ ಸಾಗಿಸಿ, ಸದಾಶಿವ ನಗರದ ರುದ್ರಭೂಮಿಯಲ್ಲಿ ಅಗ್ನಿಸ್ಪರ್ಶ ಮಾಡಿದರು.

 

 

 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚೆನ್ನೆöÊ ಸೂಪರ್ ಕಿಂಗ್ಸ್ಗೆ ೨೩೦ ರನ್‌ಗಳ ಗೆಲುವಿನ ಗುರಿನಾಳೆ ಆರ್‌ಸಿಬಿ- ಎಸ್‌ಆರ್‌ಎಚ್ ಪಂದ್ಯಜೂನ್ ೧೧ ರಿಂದ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿರಾಜ್ಯ ಜೆಡಿಎಸ್ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರಾಗಿ ಶಿವಕುಮಾರ್ ನಾಟೀಕಾರ ನೇಮಕಒಂದನೇ ತರಗತಿ ದಾಖಲಾತಿಗೆ ವಯೋಮಿತಿ ಆದೇಶವ ಮರುಪರಿಶೀಲಿಸುವಂತೆ ಹೈಕೋರ್ಟ್ ತಾಕೀತು ಗುಜರಾತ್ ಟೈಟನ್ಸ್ಗೆ ಮೊದಲೆರಡು ಸ್ಥಾನದಲ್ಲೇ ಅಭಿಯಾನ ಮುಗಿಸುವ ಗುರಿಧರ್ಮಸ್ಥಳ ಗ್ರಾಮದ 'ಬುರುಡೆ ರಹಸ್ಯ : ಬಂಗ್ಲೆಗುಡ್ಡೆ ಅರಣ್ಯದಲ್ಲಿ SIT ತೀವ್ರ ತನಿಖೆ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ 8,67,590/- ರೂ. ದಂಡ ವಸೂಲಿಅಪರಿಚಿತನಿಂದ ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್‌ ಹಮ್ಜಾ ಬುರ್ಹಾನ್ ಹತ್ಯೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದಿಲ್ಲ : ಸಿದ್ದರಾಮಯ್ಯ