ಬೆಂಗಳೂರು: ಶ್ರೀಲಂಕಾದಿಂದ ಭಾರತಕ್ಕೆ ಐತಿಹಾಸಿಕ ರಾಮಸೇತು ಮಾರ್ಗದ ಮೂಲಕ ಈಜಿ ಬೆಂಗಳೂರಿನ (Bengaluru) ದಂಪತಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಆ ಮೂಲಕ ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದ್ ಈ ಮಾರ್ಗದ ಮೂಲಕ ಓಪನ್ ವಾಟರ್ ಈಜು ಪೂರ್ಣಗೊಳಿಸಿದ ಮೊದಲ ಜೋಡಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಮೇ 7ರಂದು ಶ್ರೀಲಂಕಾದ ತಲೈಮನ್ನಾರ್‌ನಿಂದ ಬೆಳಗ್ಗೆ ಸುಮಾರು 4.30ಕ್ಕೆ ಈಜು ಆರಂಭಿಸಿದ್ದ ದಂಪತಿ, ತಮಿಳುನಾಡಿನ ಧನುಷ್ಕೋಡಿಗೆ ಮಧ್ಯಾಹ್ನ ಸುಮಾರು 3.15ಕ್ಕೆ ತಲುಪಿದ್ದಾರೆ. ಪಾಲ್ಕ್ ಜಲಸಂಧಿಯಲ್ಲಿ ಸುಮಾರು 32 ಕಿಲೋಮೀಟರ್ ದೂರವನ್ನು ಈ ಸಮಯದಲ್ಲಿ ಅವರು ಈಜಿದ್ದಾರೆ. ಈ ಸವಾಲಿನ ಈಜು ಪೂರ್ಣಗೊಳಿಸಲು ಅವರಿಗೆ 10 ಗಂಟೆ 45 ನಿಮಿಷಗಳು ತಗುಲಿವೆ.
ಮುಖ್ಯಾಂಶಗಳು
ಶ್ರೀಲಂಕಾದಿಂದ ಭಾರತಕ್ಕೆ ಒಟ್ಟಾಗಿ ಈಜಿದ ದಂಪತಿ
ಬೆಂಗಳೂರಿನ ದಂಪತಿಯಿಂದ ಐತಿಹಾಸಿಕ ಸಾಧನೆ
10 ಗಂಟೆ 45 ನಿಮಿಷದಲ್ಲಿ 32 ಕಿ.ಮೀ. ಈಜಿದ ಜೋಡಿ


