
ಗತ್ತು-ಗಮ್ಮತ್ತಿನ ಅಖಾಡಕ್ಕೆ ಸಿದ್ಧರಾಗಿ! ಕೇವಲ ಸ್ಪರ್ಧೆಯಲ್ಲ, ಇದು ನಮ್ಮ ಮಣ್ಣಿನ ಸಂಸ್ಕೃತಿಯ ಪ್ರತಿಬಿಂಬ. ಅಚ್ಚುಕಟ್ಟಾಗಿ ಸಿಂಗರಿಸಿದ ಜೋಡಿ ಎತ್ತುಗಳು ಅಖಾಡಕ್ಕೆ ಇಳಿಯುವಾಗ ನೋಡುಗರ ಮೈಮನ ಪುಳಕಗೊಳ್ಳುವುದು ಖಚಿತ.
ದಿನಾಂಕ: 15-04-2026 ಸ್ಥಳ: ನಯಾನಗರ ಲಕ್ಷ್ಮಿಪುತ್ರರ ಸನ್ಮಾನ: ರೈತ ಮಿತ್ರರ ಶ್ರಮಕ್ಕೆ ಗೌರವ ಸಲ್ಲಿಸಲು ಭರ್ಜರಿ ನಗದು ಬಹುಮಾನಗಳನ್ನು ಘೋಷಿಸಲಾಗಿದೆ.ಪ್ರಥಮ ಬಹುಮಾನ: ರೂ. 20,000/- (ಶ್ರೀ ಅಮಿತ ಜೋರಾಪುರ ಅವರಿಂದ)
ದ್ವಿತೀಯ ಬಹುಮಾನ: ರೂ. 10,000/- (ಶ್ರೀ ಪ್ರಶಾಂತ ಫೋಪಡೆ ಅವರಿಂದ) ತೃತೀಯ ಬಹುಮಾನ: ರೂ. 5,000/- (ಶ್ರೀ ಮಂಜುನಾಥ ವೆಂಕಣ್ಣವರ ಅವರಿಂದ)
ವಿಶೇಷ ಸೇವೆ ಮತ್ತು ಸಂಪ್ರದಾಯ:
ಈ ಬಾರಿಯ ಪ್ರದರ್ಶನಕ್ಕೆ 'ಹಸಿರು ಟವಲ್' ಸೇವೆಯನ್ನು ಶ್ರೀ ಹನುಮಂತ ಕರಿದೇಮನ್ನವರ (CISF) ಸಲ್ಲಿಸುತ್ತಿದ್ದು, ಹಗ್ಗದ ಸೇವೆಯನ್ನು ಊರಿನ ಪ್ರಮುಖ ಗಣ್ಯರು ವಹಿಸಿಕೊಂಡಿದ್ದಾರೆ. ರೈತರೇ ನಮ್ಮ ಈ ಸಂಭ್ರಮದ ಜೀವಾಳ.
ರೈತ ಬಾಂಧವರಿಗೆ ಸೂಚನೆ: ಎತ್ತುಗಳಿಗೆ ಬೇಕಾದ ಮೇವು ಮತ್ತು ನೀರಿನ ವ್ಯವಸ್ಥೆಯನ್ನು ಸಮಿತಿಯೇ ನೋಡಿಕೊಳ್ಳಲಿದೆ. ನೀವು ನಿಮ್ಮ ಹೆಮ್ಮೆಯ ಜೋಡಿ ಎತ್ತುಗಳನ್ನು ಕರೆತಂದು ಈ ಕೃಷಿ ಸಂಭ್ರಮದ ಭಾಗವಾಗಿ. ವರದಿ ಮಹಾಂತೇಶ್ ಎಸ್ ಹುಲಿಕಟ್ಟಿ

