Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಸ್ಕೋಟ ಸಸ್ಯರೋಗದಿಂದ ಬೆಳೆಹಾನಿ ಸಂಕಷ್ಟಕ್ಕೆ ಒಳಗಾದ ರೈತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು:ಗೋಪಾಲ ಎಂ ಪಿ

Advertisement

ಸೇಡಂ: ಕಲ್ಯಾಣ - ಕರ್ನಾಟಕದ'' ಕಲಬುರ್ಗಿ ಜಿಲ್ಲೆಯ ಚಿಂಚೋಳಿ, ಕಾಳಗಿ  ಸೇಡಂ ಚಿತ್ತಾಪುರ  ತಾಲೂಕು ಅಲ್ಲದೆ ಚಿಂಚೋಳಿ ತಾಲೂಕಿನ  ಮೂಲತ  ವಿಜ್ಞಾನಿಗಳ ವರದಿ ಪ್ರಕಾರ  ಕಸ್ಕೂಟ ವೈರಸ್ ಪತ್ತೆ ಕೇಂದ್ರ ಸ್ಥಾನ   ಗಾರಂಪಳ್ಳಿ. ಮತ್ತು ಕಲಬುರ್ಗಿ, ಬೀದರ ಜಿಲ್ಲೆಗಳ ವಿವಿಧ ಹಳ್ಳಿಗಳಲ್ಲಿ ಅರಬ್ ಕಂಟ್ರಿಯ ಭಯಾನಕರ  ಕಸ್ಕೊಟ  ವೈರಸ್ ರೋಗದಿಂದ ರೈತರ  ಬೆಳೆಗಳನ್ನು ಕಳೆದು ಕೊಂಡಿರುವ ರೈತರಿಗೆ ವರದಿ ಆಧಾರಿತವಾಗಿ ಪರಿಹಾರ ಮತ್ತು ಔಷಧಿ ಕೊಡಬೇಕು  ಮತ್ತು ಬೆಳೆಗಳನ್ನು ಕಳೆದುಕೊಂಡು ಕಷ್ಟ ಅನುಭವಿಸುತ್ತಿರುವ ನೊಂದ  ರೈತರಿಗೆ ಸರಕಾರ ವರದಿ ಆಧಾರಿತವಾಗಿ ನ್ಯಾಯ ಕೊಡಬೇಕು.

ಕಲಬುರಗಿ ಜಿಲ್ಲೆ ತೊಗರಿ ನಾಡಿನಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಅರಬ್ ಕಂಟ್ರಿಯ ಅತ್ಯಂತ ಭಯಾನಕರ ವಿಷಕಾರಿ ಕಸ್ಕೂಟ ಸಸ್ಯ ರೋಗ ವೈರಸ್ ಯಿಂದ ತೊಗರೆ,ಉದ್ದು, ಹೆಸರು , ಬೇಸಿಗೆ ತೊಗರಿ,  ಮತ್ತು ಈರುಳ್ಳಿ,ವೀಳ್ಯದೆಲೆ ಬಾಳೆ , ಕೃಷಿ ಇಲಾಖೆ, ಮತ್ತು ತೋಟಗಾರಿಕೆ ಇಲಾಖೆಯ  ಬೆಳೆಗಳು ಹಾಗೂ ಪಶು ಇಲಾಖೆಯ ವ್ಯಾಪ್ತಿಗೆ ಒಳಪಡುವ ಮೇಕೆ, ಜಾನುವಾರುಗಳು ಸಹ ಕಸ್ಕೊಟಾ ಕಳೆ ತಿಂದರೆ ಜಿರ್ಣವಾಗದೆ ಆತಂಕ ಸೃಷ್ಠಿಸುತ್ತ ದಿನೆ ದಿನೇ ಕಸ್ಕೊಟಾ ಕಳೆ ವ್ಯಾಪಕವಾಗಿ ವಿಸ್ತಾರಗೊಳ್ಳುತ್ತ ಸಂಪೂರ್ಣವಾಗಿ ಹಾನಿಯಾಗಿ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ಕಸ್ಕೊಟ ಸಸ್ಯರೋಗ್ಯಕ್ಕೆ ಯಾವುದೇ ಔಷದಿ ಇಲ್ಲವೆಂದು ಹೈದರಾಬಾದ್ ವಿಶ್ವವಿದ್ಯಾಲಯದ ಸಸ್ಯ ಸಂಶೋಧನಾ ವಿಜ್ಞಾನಿಗಳು ಮತ್ತು ರಾಯಚೂರು ವಿಶ್ವವಿದ್ಯಾಲಯದ ಸಸ್ಯಸಂಶೋಧನಾ ವಿಜ್ಞಾನಿಗಳು  ರೈತರ ಹೊಲಗಳಿಗೆ ಭೇಟಿ ಸಂದರ್ಭದಲ್ಲಿ ಸ್ಪಷ್ಟವಾಗಿ ಹೇಳಿದ್ದು, ಕಸ್ಕೊಟಾ ಒಂದು ಬೀಜ ನೆಲಕ್ಕೆ ಬಿದ್ದರೆ ಒಂದು ಲಕ್ಷ ಉತ್ಪಾದನೆ ಆಗುವ ಸಾಮರ್ಥ್ಯವಿದೆ ಮತ್ತು ಕಸ್ಕೊಟ ಕಂಡ ತಕ್ಷಣವೇ ಸುಟ್ಟು ಹಾಕಬೇಕು 10 ರಿಂದ 12 ವರ್ಷ ಜೀವಂತ ಇರುತ್ತದೆ ಅದನ್ನು ಕೂಡಲೆ ಮಣ್ಣಿನಲ್ಲಿ ಹುತೂ ಹಾಕಬೇಕೆಂದು  ರೈತರಿಗೆ ತಿಳಿಸಿದರು.

ಆದ್ದರಿಂದ ರೈತರಿಗೆ ತುಂಬಾ ಆತಂಕಕಾರಿಯಾಗಿದೆ ರೈತರಿಗೆ ಧೈರ್ಯ ತುಂಬಿ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು. ಕಲ್ಯಾಣ ಕರ್ನಾಟಕದ ಗಡಿಭಾಗ  ಹಿಂದುಳಿದ ತಾಲೂಕುಗಳಲ್ಲಿನ ರೈತರ ಸಮಸ್ಯೆಗೆ ಸ್ಪಂದಿಸಿ  ವರದಿ ಆಧಾರಿತವಾಗಿ ಪರಿಹಾರ ಕಲ್ಪಿಸಬೇಕು ಮತ್ತು  ಕಸ್ಕೂಟ ಸಸ್ಯರೋಗ ನಿರ್ಮೂಲನೆಗೆ ಅಧಿಕಾರಿಗಳಿಗೆ ಸೂಚಿಸಿ ಸಂಶೋಧನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತ್ವರಿತವಾಗಿ ಮುಂದಾಗಬೇಕು. 

ಬೆಳೆಗಳನ್ನು ಕಳೆದುಕೊಂಡಿರುವ  ರೈತರಿಗೆ  ಎಕರೆಗೆ 25,000 ಪರಿಹಾರ  ಕೊಟ್ಟು ರೈತರ ಹಿತವನ್ನು ಬಯಸಬೇಕೆಂದು ಹೋರಾಟದ ಮುಖಾಂತರ   ಸರಕಾರಕ್ಕೆ ರೈತರ ವತಿಯಿಂದ ಒತ್ತಾಯಿಸುತ್ತೇವೆ ಎಂದು ಹೋರಾಟ ಸಮಿತಿ ತಿಳಿಸಿದೆ. ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆ ಜಿಲ್ಲಾ ಉಪಾಧ್ಯಕ್ಷರಾದ ವರದ ಸ್ವಾಮಿಯವರ ನೇತೃತ್ವದಲ್ಲಿ ಮಾನ್ಯ ಸಹಾಯಕ ಆಯುಕ್ತರು  ಸೇಡಂ ರವರ ಮುಖಾಂತರ ಸರಕಾರಕ್ಕೆ ರೈತರ ವತಿಯಿಂದ ವರದಿ ಆಧಾರಿತವಾಗಿ  ಪರಿಹಾರ ಮತ್ತು ಔಷಧವನ್ನು ಕೊಡಬೇಕೆಂದು   ಮನವಿ ಪತ್ರವನ್ನು  ಸಲ್ಲಿಸಲಾಯಿತು.

ಈ ವೇಳೆ ಕಲ್ಯಾಣ- ಕರ್ನಾಟಕ ಕಸ್ಕೂಟ ಹೋರಾಟ ಸಮಿತಿಯ ಸಂಚಾಲಕರಾದ ಗೋಪಾಲ್ ಎಂ,ಪಿ ಅವರು ಮಾತನಾಡಿ  ಚಿಂಚೋಳಿ,ಸೇಡಂ,ಚಿತ್ತಾಪು ತಾಲೂಕಗಳಿಗೆ ವಿಶೇಷ ಕಸ್ಕೂಟ ಸಸ್ರೋಗ ವೈರಸ್ ಯಿಂದ ಬೆಳೆಗಳನ್ನು ಕಳೆದುಕೊಂಡಿರುವಂತ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಹಾಗೂ ಕಸ್ಕೊಟ ಸಸ್ಯರೋಗ ವಿಚಾರದಲ್ಲಿ  ಸರಕಾರ ಪ್ರಚಾರ ಕೊಡು ಅಂತ ಹೇಳ್ತಾ ಇದ್ರು ಕೂಡ ಅಧಿಕಾರಿಗಳು ಮುಚ್ಚಿಡುತ್ತಿದ್ದಾರೆ.

ಅಂತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬೆಳೆಗಳನ್ನು ಕಳೆದುಕೊಂಡಿರುವಂತ ರೈತರಿಗೆ ವರದಿ ಆಧಾರಿತವಾಗಿ ಪರಿಹಾರ ಕೊಡಬೇಕು  ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಾಮದೇವ ರಾಥೋಡ್, ಶಿವುಕುಮಾರ್ ಜ್ಯಾಡರ್,ಶೇಖರ್ ನಾಯ್ಕೋಡಿ  ಇದ್ದರು.

ವರದಿ ವೆಂಕಟಪ್ಪ ಕೆ ಸುಗ್ಗಾಲ್.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತೇವಗೊಂಡ ಮೈದಾನ: ಆರ್‌ಸಿಬಿ ಪಂದ್ಯ ವಿಳಂಭ ಮೊದಲ ಟೆಸ್ಟ್ಗೆ ಇಂಗ್ಲೆAಡ್ ತಂಡದಾಯ್ಕೆಡಾಲರ್‌ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿಹಿಜಾಬ್ ನಿಷೇಧ ವಾಪಸ್ ಪಡೆದ ರಾಜ್ಯ ಸರ್ಕಾರ ಸಗಣಿ ಭಕ್ತರು ಗಂಜಲ ಕುಡಿದು ಜೀವನ ಮಾಡುತ್ತಾರೆ, ಸಾಮಾನ್ಯರು ಏನು ಮಾಡಬೇಕು : ಬಿ. ಕೆ ಹರಿಪ್ರಸಾದ್ ಮಣ್ಣಲ್ಲಿ ಮಣ್ಣಾದ ನಟ ದಿಲೀಪ್ ರಾಜ್ : ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ಇನ್ಮುಂದೆ ಮೆಟ್ರೋದಲ್ಲಿ ಪ್ರಯಾಣ, ವಾಹನ ಬಳಕೆ ಶೇ. 40 ರಷ್ಟು ಕಡಿತ : ಆರ್. ಅಶೋಕ್ ರಟಕಲ್ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರ ಆಕ್ರೋಶ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆ ಅನನ್ಯ :ವಸಂತ ಎಸ್ಚರಂಡಿ ಸ್ವಚ್ಛಗೊಳಿಸಿ, ರೋಗಭಯವಿಲ್ಲದೆ ಬದುಕುವಂತೆ ಮಾಡಿ : ನಾಗರೀಕರ ಆಗ್ರಹ