Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪತಿಯನ್ನು ಬಿಟ್ಟು ಬರಲು ನಿರಾಕರಿಸಿದ ಅತಿಥಿ ಶಿಕ್ಷಕಿ : ಅವರನ್ನು ಕೊಂದು ಪ್ರಿಯಕರ ಆತ್ಮಹತ್ಯೆ 

Advertisement

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇತ್ತೀಚೆಗೆ ಕಾರಿನೊಳಗೆ ಮಹಿಳೆಯೊಬ್ಬರು ಸುಟ್ಟು ಕರಕಲಾಗಿದ್ದ ನಿಗೂಢ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. 

ಪ್ರಿಯತಮೆ ತನ್ನ ಪತಿಯನ್ನು ಬಿಟ್ಟು ಬರಲು ನಿರಾಕರಿಸಿದ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿ, ಕಾರಿನ ಸಮೇತ ಸುಟ್ಟು ಹಾಕಿದ್ದ ಪ್ರಿಯಕರ, ನಂತರ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಿಗ್ರಮೆಗೊಳಿಸುವ ಸತ್ಯ ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಘಟನೆಯ ಹಿನ್ನೆಲೆ:

ದೇವನಹಳ್ಳಿ ಮೂಲದ ಸುಜಾತಾ (35) ಕೊಲೆಯಾದ ದುರ್ದೈವಿ. ಆರೋಪಿ ರಾಮಾಂಜಿನಪ್ಪ ಈ ಕೃತ್ಯ ಎಸಗಿದ ಕಿರಾತಕ. ಇವರಿಬ್ಬರ ನಡುವೆ ಕಳೆದ ಕೆಲವು ಸಮಯದಿಂದ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ.

 ಸುಜಾತಾಳ ಮೇಲಿನ ವ್ಯಾಮೋಹದಿಂದ ರಾಮಾಂಜಿನಪ್ಪ ನಾಲ್ಕು ತಿಂಗಳ ಹಿಂದಷ್ಟೇ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದನು. ಇದೇ ರೀತಿ ಸುಜಾತಾ ಕೂಡ ತನ್ನ ಪತಿಯನ್ನು ಬಿಟ್ಟು ತನ್ನೊಂದಿಗೆ ಬರಬೇಕೆಂದು ಆತ ಸತತವಾಗಿ ಒತ್ತಾಯಿಸುತ್ತಿದ್ದನು.

ಕಾರಿನೊಳಗೆ ಸಜೀವ ದಹನ:

ಘಟನೆಯ ದಿನದಂದು ಸುಜಾತಾ ಪತಿಯನ್ನು ಬಿಟ್ಟು ಬರಲು ಖಡಾಖಂಡಿತವಾಗಿ ನಿರಾಕರಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ರಾಮಾಂಜಿನಪ್ಪ, ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆ ಬಚ್ಚಹಳ್ಳಿ ಬಳಿ ಕಾರಿನಲ್ಲಿ ಸುಜಾತಾಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವಿದ್ದ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದನು.

ತನಿಖೆ ವೇಳೆ ಬಯಲಾದ ಸತ್ಯ:

ಸುಟ್ಟು ಕರಕಲಾಗಿದ್ದ ಕಾರಿನ ಮಾಲೀಕರನ್ನು ಪತ್ತೆಹಚ್ಚಿದ ಪೊಲೀಸರಿಗೆ, ಅದು ಮಾರಸಂದ್ರದ ಸುರೇಶ್ ಎಂಬುವವರಿಗೆ ಸೇರಿದ್ದೆಂದು ತಿಳಿದುಬಂದಿದೆ.

ಸುರೇಶ್ ಅವರಿಂದ ಕಾರನ್ನು ರಾಮಾಂಜಿನಪ್ಪ ಪಡೆದುಕೊಂಡು ಹೋಗಿದ್ದ ಎನ್ನುವ ಸುಳಿವು ಸಿಗುತ್ತಿದ್ದಂತೆ ತನಿಖೆ ಚುರುಕುಗೊಂಡಿತು.

ಆದರೆ, ಪೊಲೀಸರು ರಾಮಾಂಜಿನಪ್ಪನ ಪತ್ತೆಗೆ ಮುಂದಾದಾಗ ಬೆಂಗಳೂರಿನ ಬಿಡದಿ ಸಮೀಪದ ರೈಲ್ವೆ ಹಳಿಗಳ ಬಳಿ ಆತನ ಶವ ಪತ್ತೆಯಾಗಿದೆ. ಕೃತ್ಯ ಎಸಗಿದ ಬಳಿಕ ಪಶ್ಚಾತ್ತಾಪದಿಂದಲೋ ಅಥವಾ ಸಿಕ್ಕಿಬೀಳುವ ಭಯದಿಂದಲೋ ಆತ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST