ತುಮಕೂರು : ತವರಿನಿಂದ ಪತ್ನಿ ವಾಪಸ್ ಬರಲಿಲ್ಲವೆಂದು ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಷಾಡಕ್ಕೆ ತವರಿಗೆ ಹೋದ ಪತ್ನಿ ಬರಲಿಲ್ಲವೆಂದು ಅವಿನಾಶ್ (28) ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಮಹಾವೀರ ನಗರದಲ್ಲಿ ನಡೆದಿದೆ.
ಆಷಾಢ ಹಿನ್ನೆಲೆಯಲ್ಲಿ ಪತ್ನಿ ತವರಿಗೆ ಹೋಗಿದ್ದಳು.ಈ ಹಿನ್ನೆಲೆ ತವರಿನಿಂದ ಪತ್ನಿ ವಾಪಸ್ ಬರಲಿಲ್ಲವೆಂದು ಮನನೊಂದು ನೇಣು ಬಿಗಿದುಕೊಂಡು ಅವಿನಾಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ಅಷ್ಟೇ ಅವಿನಾಶ್ ಮದುವೆಯಾಗಿದ್ದರು. ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಯುವತಿಯ ಜೊತೆಗೆ ಅವಿನಾಶ್ ಪ್ರೀತಿಸಿ ಮದುವೆಯಾಗಿದ್ದರು.
ಇತ್ತೀಚಿಗೆ ಅವಿನಾಶ್ ಪತ್ನಿ ಆಷಾಢಕ್ಕೆ ಎಂದು ತವರು ಮನೆಗೆ ಹೋಗಿದ್ದಾಳೆ. ಈ ವೇಳೆ ಅವಿನಾಶ್ ಕರೆ ಮಾಡಿ ಮನೆಗೆ ವಾಪಸ್ ಬರುವಂತೆ ಹೇಳಿದ್ದಾರೆ. ನಾನು ವಾಪಸ್ ಬರಲ್ಲ ಎಂದು ಪತ್ನಿ ಅಭಿನಾಶ್ಗೆ ಹೇಳಿದ್ದಾಳೆ ಪತ್ನಿಯ ಮಾತಿನಿಂದ ಮನನೊಂದು ಪತಿ ಅವಿನಾಶ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


