ಧಾರವಾಡ: ಕಲಘಟಗಿ ಪಟ್ಟಣದಲ್ಲಿ ನಡೆಯುವ ಮಂಗಳವಾರ ಸಂತೆ ಮಾರುಕಟ್ಟೆಯ ಪ್ರದೇಶವಾದ ಆಂಜನೇಯ ವೃತ್ತದಲ್ಲಿ ಬೆಲೆಬಾಳುವ 18000 ರೂಪಾಯಿ ಮೌಲ್ಯದ ಒಪೋ ಕಂಪನಿಯ ಮೊಬೈಲ್ ಫೋನ ಪಟ್ಟಣದ ಪ್ರಜಾ ಪ್ರಗತಿ ವರದಿಗಾರ ಸುನಿಲ್ ಕಮ್ಮಾರ್ ಅವರಿಗೆ ಸಿಕ್ಕಿರುತ್ತದೆ ತಕ್ಷಣ ಕಲಘಟಗಿ ಪೊಲೀಸ್ ಠಾಣೆ ಪಿಎಸ್ಐ ಸಿಎನ್ ಕರಿವೀರಪ್ಪನವರ ಅವರಿಗೆ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ
ತಾಲೂಕಿನ ಕಲಕುಂಡಿ ಗ್ರಾಮದ ಪ್ರವೀಣ್ ಕುರುಬರ ಎಂಬ ಯುವಕ ಮಂಗಳವಾರ ಸಂತೆ ಮಾರುಕಟ್ಟೆಗೆ ಆಗಮಿಸಿದಾಗ ಮೊಬೈಲ್ ಫೋನನ್ನು ಕಳೆದುಕೊಂಡಿರುತ್ತಾರೆ
ಕಳೆದು ಹೋದ ಜಾಗಕ್ಕೆ ಮರಳಿ ಬಂದಾಗ ಕಲಘಟಗಿ ಪೊಲೀಸ್ ಠಾಣೆ ಮುಖಾಂತರ ಕಳೆದುಕೊಂಡ ಮೊಬೈಲನ್ನು ವಾರಸುದಾರರಿಗೆ ಪ್ರಾಮಾಣಿಕವಾಗಿ ಹಿಂದಿರುಗಿಸಿ ಸ್ಥಳೀಯ ಪತ್ರಕರ್ತ ಮಾನವೀಯತೆ ಬರೆದಿದ್ದಾರೆ ವಾರಸುದಾರರು ಕೃತಜ್ಞತೆ ಸಲ್ಲಿಸಿದರು ಈ ಸಂದರ್ಭದಲ್ಲಿ ಠಾಣೆಯ ಎಎಸ್ಐ ಸುಭಾಷ್ ತಿಮ್ಮಾಪುರ್ ಪರಶು ಮಾಳಗುಡ್ಡ, ಜ್ಯೋತಿಬಾ ಹುಲಕೋಪ್ಪ, ಇದ್ದರು.


