Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾಮಾನ್ಯರಿಗೆ  ಕಾನೂನಿನ ಉರುಳು, ಬಲಿಷ್ಠನಿಗೆ ಅಧಿಕಾರದ ನೆರಳು: ಇದು ವ್ಯವಸ್ಥೆಯ ಅಟ್ಟಹಾಸ!

Advertisement

ವರದಿ: ಉಮೇಶ ಗೌರಿ(ಯರಡಾಲ)

ಬೆಳಗಾವಿ: ಪ್ರಜಾಪ್ರಭುತ್ವದ ಅಟ್ಟಣೆಯ ಮೇಲೆ ಕುಳಿತು 'ಸಮಾನ ನ್ಯಾಯ'ದ ಭಾಷಣ ಮಾಡುವವರಿಗೆ ರಸ್ತೆಯ ಮೇಲಿನ ಈ ದೃಶ್ಯಗಳು ಕಾಣುತ್ತಿಲ್ಲವೇ? ಇಂದಿನ ವ್ಯವಸ್ಥೆಯಲ್ಲಿ ಕಾನೂನು ಎಂಬುದು ಕೇವಲ ಬಡವನ ಜೇಬಿಗೆ ಹಾಕುವ ಕತ್ತರಿಯಾಗಿದೆ. ಹಣ, ಅಧಿಕಾರ ಮತ್ತು ಪ್ರಭಾವವಿದ್ದರೆ ಸಾಕು, ಇಲ್ಲಿ ಯಾವ ಸಂವಿಧಾನವೂ ಕೆಲಸ ಮಾಡುವುದಿಲ್ಲ ಎಂಬ ಕಟು ಸತ್ಯ ಸಾರ್ವಜನಿಕರನ್ನು ಕೆರಳಿಸಿದೆ.

ಇತ್ತೀಚಿನ ದಿನಗಳಲ್ಲಿ ರಸ್ತೆಗಿಳಿಯುವ ಬೈಕ್ ಸವಾರರಿಗೆ ಟ್ರಾಫಿಕ್ ಪೊಲೀಸರ ಭಯ ಎಷ್ಟರಮಟ್ಟಿಗೆ ಆವರಿಸಿದೆ ಎಂದರೆ, ವಾಹನ ಸವಾರರು ಪೊಲೀಸರನ್ನು ಕಂಡೊಡನೆ ದಾರಿ ಬದಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಇದೇ ನಿಯಮಗಳು ಎಲ್ಲರಿಗೂ ಒಂದೇ ಆಗಿವೆಯೇ? ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದೆ.

ಅಲ್ಲದೇ, ಈಗ ಹಳ್ಳಿ ಮತ್ತು ಪಟ್ಟಣಗಳಲ್ಲಿ ಸಿವಿಲ್ ಪೊಲೀಸರ ಕಾಟವೂ ಹೆಚ್ಚಾಗಿದೆ. ಮುಖ್ಯ ರಸ್ತೆಗಳಲ್ಲಿ ಗಾಡಿ ನಿಲ್ಲಿಸಿ, ದಾಖಲೆಗಳ ನೆಪವೊಡ್ಡಿ ಸವಾರರನ್ನು ಗಂಟೆಗಟ್ಟಲೆ ಪೀಡಿಸುವುದು ಸಾಮಾನ್ಯವಾಗಿದೆ. ಎಲ್ಲ ದಾಖಲೆಗಳು ಸರಿಯಾಗಿದ್ದರೂ ಯಾವುದಾದರೂ ಒಂದು ಸಣ್ಣ ನೆಪ ಹುಡುಕಿ ಹಣ ವಸೂಲಿ ಮಾಡುವ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಹೆದ್ದಾರಿಗಳಲ್ಲಿ ಸಾಗುವ ವಾಹನ ಸವಾರರ ಪರಿಸ್ಥಿತಿಯಂತೂ ಹೇಳತೀರದಂತೆ. ಹೈವೇ ಪಕ್ಕದಲ್ಲಿರುವ ಪೊಲೀಸ್ ಠಾಣೆಗಳ ಸಿಬ್ಬಂದಿ ಕೆಲಸವೇ ವಾಹನಗಳನ್ನು ತಡೆದು ನಿಲ್ಲಿಸುವುದಾಗಿದೆ. ಅಪಘಾತ ತಡೆಯುವುದು ಅಥವಾ ಸುರಕ್ಷತೆ ಕಾಪಾಡುವುದಕ್ಕಿಂತ ಹೆಚ್ಚಾಗಿ, ಮೂಲೆಯಲ್ಲಿ ಹೊಂಚು ಹಾಕಿ ಕುಳಿತು ವಾಹನ ಸವಾರರನ್ನು ಹಿಡಿಯುವುದರಲ್ಲೇ ಇವರು ಮಗ್ನರಾಗಿದ್ದಾರೆ. ಸುಖಾಸುಮ್ಮನೆ ಕಿರುಕುಳ ನೀಡಿ ಸವಾರರಿಂದ ಹಣ ಕೀಳುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಹೆದ್ದಾರಿ ಪಕ್ಕದ ಗ್ರಾಮಸ್ಥರು ದೂರುತ್ತಾರೆ.


ಕುಡಿತದ ಅಮಲು: ಸಾಮಾನ್ಯನಿಗೆ ಜೈಲು, ಪ್ರಭಾವಿಗೆ 'ಸೇಫ್' ಪಾಸ್!

ಇತ್ತೀಚಿನ ದಿನಗಳಲ್ಲಿ 'ಡ್ರಿಂಕ್ ಆಂಡ್ ಡ್ರೈವ್' ತಪಾಸಣೆಯ ಹೆಸರಿನಲ್ಲಿ ನಡೆಯುತ್ತಿರುವ ದರ್ಪ ಅಸಹನೀಯ.ಕುಡಿದು ವಾಹನ ಚಲಾಯಿಸುವುದು ತಪ್ಪೇ.ಆದರೆ ಹಗಲಿಡೀ ಕಷ್ಟಪಟ್ಟು ದುಡಿದು, ಸಂಜೆ ಅಲ್ಪಸ್ವಲ್ಪ ಕುಡಿದು ಬೈಕ್ ಏರುವ ಸಾಮಾನ್ಯ ಕಾರ್ಮಿಕ ಪೊಲೀಸರ ಕೈಗೆ ಸಿಕ್ಕರೆ ಮುಗಿಯಿತು; ಆತನ ವಾಹನ ಜಪ್ತಿ, ಸಾವಿರಾರು ರೂಪಾಯಿ ದಂಡ, ಜೊತೆಗೆ ನ್ಯಾಯಾಲಯದ ಅಲೆದಾಟ ತಪ್ಪಿದ್ದಲ್ಲ. ಆದರೆ, ಐಷಾರಾಮಿ ಕಾರುಗಳಲ್ಲಿ ಕುಡಿತದ ಮತ್ತಿನಲ್ಲಿ ತೇಲುತ್ತಾ, ರಸ್ತೆಯಲ್ಲಿ ಸಾವು-ನೋವುಗಳಿಗೆ ಕಾರಣವಾಗುವ ಪ್ರಭಾವಿ ವ್ಯಕ್ತಿಗಳ ಮಕ್ಕಳು ಅಥವಾ ರಾಜಕಾರಣಿಗಳ ಬೆಂಬಲಿಗರು ಪೊಲೀಸರಿಗೆ ಸಿಕ್ಕರೂ, ಒಂದು ಫೋನ್ ಕರೆಯಲ್ಲೇ 'ರಾಜಮರ್ಯಾದೆ'ಯೊಂದಿಗೆ ಬಿಡುಗಡೆಯಾಗುತ್ತಾರೆ. ರಕ್ತ ಪರೀಕ್ಷೆಯ ವರದಿಯೇ ಬದಲಾಗುವ ಈ ಕಾಲದಲ್ಲಿ ಸಾಮಾನ್ಯನ ಉಸಿರಿನ ಪರೀಕ್ಷೆ (Breath Analyzer) ಮಾತ್ರ ಪೊಲೀಸರಿಗೆ ದೊಡ್ಡ ಆದಾಯದ ಮೂಲವಾಗಿದೆ!

ಬೆಳಿಗ್ಗೆ ಕಚೇರಿಗೆ ಧಾವಿಸುವ ಉದ್ಯೋಗಿ ಅಥವಾ ದಿನದ ದುಡಿಮೆಗಾಗಿ ಹೊರಬರುವ ಬಡವ - ಇವರೇ ಪೊಲೀಸರ ಮುಖ್ಯ ಗುರಿ. ಹೆಲ್ಮೆಟ್ ಸ್ಟ್ರಾಪ್ ಹಾಕದಿದ್ದರೂ ಅಥವಾ ಇಂಡಿಕೇಟರ್ ಹಾಕದಿದ್ದರೂ ನೂರಾರು ರೂಪಾಯಿಗಳ ದಂಡ ವಿಧಿಸಲಾಗುತ್ತಿದೆ. "ದುಡಿಯುವ ಅರ್ಧ ಸಂಬಳ ದಂಡ ಕಟ್ಟುವುದಕ್ಕೇ ಸರಿಯಾಗುತ್ತಿದೆ" ಎಂಬುದು ಸಾಮಾನ್ಯರ ಅಳಲು. ಆದರೆ, ನಂಬರ್ ಪ್ಲೇಟ್ ಸರಿಯಿಲ್ಲದ, ಕಪ್ಪು ಗ್ಲಾಸ್ ಹಾಕಿದ ಪ್ರಭಾವಿಗಳ ವಾಹನಗಳು ಕಣ್ಣಮುಂದೆಯೇ ಸಿಗ್ನಲ್ ಜಂಪ್ ಮಾಡಿದರೂ ಪೊಲೀಸರು ಮೌನ ವಹಿಸುವುದು ಈ ತಾರತಮ್ಯಕ್ಕೆ ಸಾಕ್ಷಿ.

ದೇವಸ್ಥಾನದ ಗರ್ಭಗುಡಿಯಲ್ಲೂ ವರ್ಗಭೇದ!

ನಂಬಿಕೆಯ ಪವಿತ್ರ ತಾಣಗಳಲ್ಲೂ 'ವಿಐಪಿ ಸಂಸ್ಕೃತಿ' ವಿಷದಂತೆ ಹರಡಿದೆ. ಸಾಮಾನ್ಯ ಭಕ್ತರು ಗಂಟೆಗಟ್ಟಲೆ ಬಿಸಿಲಿನಲ್ಲಿ ಸಾಲುಗಳಲ್ಲಿ ನಿಂತು ದಣಿಯುತ್ತಿದ್ದರೆ, ಪ್ರಭಾವಿಗಳು ತಮ್ಮ ವಾಹನಗಳನ್ನು ನೇರವಾಗಿ ಗರ್ಭಗುಡಿಯ ದ್ವಾರದವರೆಗೆ ತಂದು ನಿಲ್ಲಿಸುತ್ತಾರೆ. ದೇವರಿಗಿಂತ ಹೆಚ್ಚಾಗಿ ಪ್ರಭಾವಿಗಳ ಅಬ್ಬರವೇ ಇಲ್ಲಿ ಜಾಸ್ತಿ. ಕ್ಯೂನಲ್ಲಿ ನಿಂತವರಿಗೆ ಲಭಿಸುವುದು ಕೇವಲ ದೂಡಾಟ, ಆದರೆ ಅಧಿಕಾರವಿದ್ದವರಿಗೆ ಸಿಗುವುದು ವಿಶೇಷ ಆಸನ ಮತ್ತು ದರ್ಶನ!

ನಾಗರಿಕರ ಆಕ್ರೋಶದ ಎಚ್ಚರಿಕೆ

"ನಾವು ಕಟ್ಟುವ ತೆರಿಗೆಯಿಂದ ಸಂಬಳ ಪಡೆಯುವ ಅಧಿಕಾರಿಗಳು ಪ್ರಭಾವಿಗಳ ಗುಲಾಮರಂತೆ ವರ್ತಿಸುವುದು ನಿಲ್ಲಲಿ. ಕಾನೂನು ಬಡವನ ಮೇಲೆ ಸವಾರಿ ಮಾಡುವ ಅಸ್ತ್ರವಾಗಬಾರದು," ಎಂದು ಸಾರ್ವಜನಿಕರು ಗುಡುಗುತ್ತಿದ್ದಾರೆ.
ರಸ್ತೆ ಸುರಕ್ಷತೆ ಮತ್ತು ಶಿಸ್ತು ಅವಶ್ಯಕ, ಅದರಲ್ಲಿ ಎರಡು ಮಾತಿಲ್ಲ. ಆದರೆ ಆ ಶಿಸ್ತು ಮಂತ್ರಿ ಇರಲಿ, ಮಜದೂರ ಇರಲಿ - ಎಲ್ಲರಿಗೂ ಸಮಾನವಾಗಿ ಅನ್ವಯವಾದಾಗ ಮಾತ್ರ ಈ ವ್ಯವಸ್ಥೆಗೆ ಬೆಲೆ ಸಿಗುತ್ತದೆ. ಇಲ್ಲದಿದ್ದರೆ ಈ 'ದಂಡ'ಯಾತ್ರೆ ಜನಸಾಮಾನ್ಯರ ಆಕ್ರೋಶದ ಕಿಚ್ಚಿಗೆ ಬಲಿಯಾಗುವುದು ಗ್ಯಾರಂಟಿ.

ಪೊಲೀಸ್ ಇಲಾಖೆ ಎಂದರೆ ಜನಸಾಮಾನ್ಯರ ರಕ್ಷಕನಂತಿರಬೇಕು. ಆದರೆ ದಂಡ ವಸೂಲಿಯೇ ಗುರಿಯಾದರೆ ಜನಸಾಮಾನ್ಯರಿಗೆ ಕಾನೂನಿನ ಮೇಲೆ ನಂಬಿಕೆ ಹೋಗುತ್ತದೆ. ಉನ್ನತ ಅಧಿಕಾರಿಗಳು ಈ ಕೂಡಲೇ ಮಧ್ಯಪ್ರವೇಶಿಸಿ, ನಡೆಯುತ್ತಿರುವ ಅನಗತ್ಯ ಕಿರುಕುಳಕ್ಕೆ ಬ್ರೇಕ್ ಹಾಕಬೇಕಿದೆ. ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯವಾಗಲಿ ಎಂಬುವುದೆ ನಮ್ಮ ಉದ್ದೇಶ.

ಬೆಳಿಗ್ಗೆ ಕಚೇರಿಗೆ ಧಾವಿಸುವ ಉದ್ಯೋಗಿ ಅಥವಾ ದಿನದ ದುಡಿಮೆಗಾಗಿ ಹೊರಬರುವ ಕಾರ್ಮಿಕ - ಹೀಗೆ ಜನಸಾಮಾನ್ಯರ ಸಣ್ಣ ಪುಟ್ಟ ತಪ್ಪುಗಳನ್ನೂ ಪೊಲೀಸರು ಬಿಡುತ್ತಿಲ್ಲ. ಹೆಲ್ಮೆಟ್ ಸ್ಟ್ರಾಪ್ ಹಾಕದಿದ್ದರೂ ಅಥವಾ ಇಂಡಿಕೇಟರ್ ಹಾಕದಿದ್ದರೂ ನೂರಾರು ರೂಪಾಯಿಗಳ ದಂಡ ವಿಧಿಸಲಾಗುತ್ತಿದೆ. "ದುಡಿಯುವ ಅರ್ಧ ಸಂಬಳ ದಂಡ ಕಟ್ಟುವುದಕ್ಕೇ ಸರಿಯಾಗುತ್ತಿದೆ" ಎಂಬುದು ಒಬ್ಬ ಸಾಮಾನ್ಯ ಬೈಕ್ ಸವಾರನ ಅಳಲು.


"ನಾವು ಶಿಸ್ತಿನಿಂದ ಗಾಡಿ ಓಡಿಸಿದರೂ ಯಾವುದೋ ಒಂದು ಕಾರಣಕ್ಕೆ ನಮ್ಮನ್ನು ತಡೆದು ನಿಲ್ಲಿಸುತ್ತಾರೆ. ಆದರೆ ಹೆಲ್ಮೆಟ್ ಇಲ್ಲದೆ ರಾಜಾರೋಷವಾಗಿ ಓಡಾಡುವ ಪ್ರಭಾವಿಗಳನ್ನು ಮಾತ್ರ ಪೊಲೀಸರು ಕೇಳುವುದಿಲ್ಲ. ನಾವು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ."
                                                                         .* ಒಬ್ಬ ಸಂತ್ರಸ್ತ ಬೈಕ್ ಸವಾರ

'ಡ್ರಿಂಕ್ ಆಂಡ್ ಡ್ರೈವ್' ತಪಾಸಣೆ ಮಾಡಿ ದಂಡ ವಸೂಲಿ ಮಾಡುವ ಬದಲಿಗೆ  ಸರಕಾರ ನಮ್ಮ ರಾಜ್ಯದಲ್ಲಿ ಸಂಪೂರ್ಣ ಸರಾಯಿ ಯಾಕೆ ಬಂದ ಮಾಡಬಾರದು. ದಂಡ ವಸೂಲಿ ಮಾಡಲು ಇವರಿಗೆ ನೈತಿಕತೆ ಏನಿದೆ. 
    ದಂಡ ಕಟ್ಟಿದ ಖಾಸಗಿ ಕಂಪನಿ ನೌಕರ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಫ್ರಾನ್ಸ್ನಲ್ಲಿ ವಿಶ್ವದ ಅಗ್ರಗಣ್ಯ ನಾಯಕರ ಜಿ-೭ ಸಭೆರಾಜ್ಯದ ಅರ್ಹರಿಗಷ್ಟೇ ಗ್ಯಾರಂಟಿ ಯೋಜನೆಗಳು : ಎಂ. ಬಿ. ಪಾಟೀಲ ಬೆಂಗಳೂರಿನ ಹಲವು ಆರ್ ಟಿ ಓ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶಬೆಳಗಾವಿಯಲ್ಲಿ ಕಸದ ರಾಶಿಯಲ್ಲಿ ಒಟ್ಟು 59 ಜೀವಂತ ಗುಂಡುಗಳು ಪತ್ತೆಚಿಕ್ಕ ಪಾನ್ ಅಂಗಡಿಗೆ 1.85 ಲಕ್ಷ ರೂ. ವಿದ್ಯುತ್ ಬಿಲ್ : ಭಯದಿಂದ ವ್ಯಾಪಾರಿ ಆತ್ಮಹತ್ಯೆ ಬಸ್ ಹಾಗೂ ಟಿಪ್ಪರ್ ನಡುವೆ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು, ಹತ್ತಕ್ಕೂ ಹೆಚ್ಚು ಮಂದಿಗೆ ಗಾಯಇಬ್ಬರು ಅಪ್ರಾಪ್ತ ಅಕ್ಕ-ತಂಗಿಯ ಮೇಲೆ ಕಿರಾತಕನಿಂದ ಲೈಂಗಿಕ ದೌರ್ಜನ್ಯಡಾಕ್ಟರ್ ಚೀಟಿ ಇಲ್ಲದೇ ಯಾವುದೇ ಕೆಮ್ಮಿನ ಔಷಧ ಮಾರಾಟ ಮಾಡುವಂತಿಲ್ಲ : ಕೇಂದ್ರ ಸರ್ಕಾರಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ಸೋಮವತಿ ಅಮಾವಾಸ್ಯೆ ಅಂಗವಾಗಿ ಖಾನಾಪುರದಲ್ಲಿ ಶ್ರೀ ಮೈಲಾರ ಮಲ್ಲಣ್ಣನ ಪಲ್ಲಕ್ಕಿ ಉತ್ಸವ ವೈಭವ