Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಈ ಜೀವ ನಿಮ್ಮಗೆ ಅರ್ಪಣೆ : ಡಿ. ಕೆ ಶಿವಕುಮಾರ್ ಸ್ನೇಹ ಕೊಂಡಾಡಿದ ನಟ ರವಿಚಂದ್ರನ್ 

Advertisement

ಬೆಂಗಳೂರು : ನಟ ರವಿಚಂದ್ರನ್ (Ravichandran) ದಶಕಗಳಿಂದಲೂ ಚಿತ್ರರಂಗದಲ್ಲಿರುವವರು. ಅವರ ತಂದೆ ವೀರಾಸ್ವಾಮಿ ಖ್ಯಾತ ನಿರ್ಮಾಪಕರು ಮತ್ತು ಉದ್ಯಮಿಗಳು ಸಹ ಆಗಿದ್ದವರು.

ರವಿಚಂದ್ರನ್ ಅವರಿಗೆ ಚಿತ್ರರಂಗದ ಜೊತೆಗೆ ರಾಜಕೀಯ ರಂಗದ ಹಲವು ಪ್ರಮುಖರ ಆಪ್ತ ಪರಿಚಯವಿದೆ. ಆದರೆ ರವಿಚಂದ್ರನ್ ಅವರು ಎಂದಿಗೂ ರಾಜಕೀಯದ ಅಖಾಡದತ್ತ ಮುಖ ಸಹ ಹಾಕಿದವರಲ್ಲ.

ಅವರ ಗೆಳೆತನವನ್ನು ಬಳಸಿಕೊಂಡವರೂ ಅಲ್ಲ. ಆದರೆ ಇದೀಗ ಕಾರ್ಯಕ್ರಮವೊಂದರಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಮನಸಾರೆ ಕೊಂಡಾಡಿರುವ ರವಿಚಂದ್ರನ್, 'ಈ ಜೀವ ನಿಮಗೆ ಅರ್ಪಣೆ' ಎಂದು ಭಾವುಕರಾಗಿ ಹೇಳಿದ್ದಾರೆ.

ಕಳೆದ ಕೆಲ ದಿನಗಳಿಂದಲೂ ನಡೆಯುತ್ತಿರುವ ಮದ್ದೂರು ಉತ್ಸವ 2026 ಕಾರ್ಯಕ್ರಮದಲ್ಲಿ ನಿನ್ನೆ (ಮೇ 06) ಭಾಗಿ ಆಗಿದ್ದ ನಟ ರವಿಚಂದ್ರನ್, ಕೆಲ ಹಳೆಯ ವಿಷಯಗಳನ್ನು ನೆನಪು ಮಾಡಿಕೊಂಡರು.

ಜೊತೆಗೆ ಅದೇ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿ ಆಗಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬಗ್ಗೆಯೂ ಮಾತನಾಡಿದರು. 

'ಮನುಷ್ಯ ಅಂದ ಮೇಲೆ ಕಟ್ಟ ಗಳಿಗೆಗಳು ಕೆಲವೊಮ್ಮೆ ಬಂದು ಬಿಡುತ್ತವೆ. ಅಂಥಹಾ ಸಮಯ ಬಂದಾಗ, ಯಾರು ನಮ್ಮ ಕೈ ಹಿಡಿಯುತ್ತಾರೆ ಎಂದು ನಾವೂ ಸಹ ಎದುರು ನೋಡುತ್ತಿರುತ್ತೇವೆ.

ಆದರೆ ನನಗೆ (ರವಿಚಂದ್ರನ್) ಕೈ ಚಾಚಿ ಅಭ್ಯಾಸವೇ ಇಲ್ಲ. ಆದರೆ ನಾನು ಕೈ ಚಾಚುವ ಮುಂಚೆಯೇ ನನ್ನ ಕೈ ಹಿಡಿದವರು ಡಿಕೆ ಶಿವಕುಮಾರ್ ಅವರು' ಎಂದಿದ್ದಾರೆ ಕ್ರೇಜಿ ಸ್ಟಾರ್.

'ನಿಮ್ಮನ್ನು ಈ ಜೀವನದಲ್ಲಿ ಮರೆಯೋದಿಲ್ಲ ಸರ್, ಈ ಜೀವ ನಿಮಗೇ ಅರ್ಪಣೆ ಸರ್' ಎಂದು ವೇದಿಕೆ ಮುಂದೆ ಆಸೀನರಾಗಿದ್ದ ಡಿಕೆ ಶಿವಕುಮಾರ್ ಅವರನ್ನು ಉದ್ದೇಶಿಸಿ ಹೇಳಿದ ರವಿಚಂದ್ರನ್, 'ಚಿತ್ರರಂಗಕ್ಕೆ ಬಂದು 40 ವರ್ಷವಾಯ್ತು. ಆದರೆ ನಾನು ಕೈಚಾಚುವ ಮುಂಚೆ, ನನ್ನ ಹೆಗಲ ಮೇಲೆ ಕೈಹಾಕಿ ಡಿಕೆ ಶಿವಕುಮಾರ್ ಅವರು ಕೇಳಿದ್ದು ಒಂದೇ ಮಾತು, 'ನಾನು ಏನು ಮಾಡಬೇಕು ಏಳಪ್ಪ' ಎಂದಿದ್ದರು' ಎಂದು ರವಿಚಂದ್ರನ್ ಹೇಳಿದರು.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST