LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕಾಯಕ ದಾಸೋಹ ಜಂಗಮ ಸೇವೆಯ ಮೂಲಕ ಜೀವನದ ಸಾರ್ಥಕತೆಯನ್ನು ಕಂಡವರು ಶರಣರು : ಜಗದ್ಗುರು ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು

Advertisement

ಮಾನ್ವಿ: ತಾಲೂಕಿನ ಚೀಕಲಪರ್ವಿ ಗ್ರಾಮದ ಶ್ರೀ ರುದ್ರಮುನಿ ಮಹಾಶಿವಯೋಗಿಗಳ ಮಠದಲ್ಲಿ ಹಮ್ಮಿಕೊಂಡ ಶ್ರೀ ರುದ್ರಮುನಿ ಮಹಾಶಿವಯೋಗಿಗಳ 98ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ  ಜಾತ್ರಮಹೋತ್ಸವ ಅಂಗವಾಗಿ ನಡೆದ ಧರ್ಮಸಭೆಯನ್ನು ಉದ್ಘಾಟಿಸಿ ಮೂರುಸಾವಿರ ಮಠ ಹುಬ್ಬಳ್ಳಿ-ಹಾನಗಲ್ ಹಾಗೂ ಶ್ರೀಮದ್ ವೀರಶೈವ ಶಿವಯೋಗ ಮಂದಿರದ ಅಧ್ಯಕ್ಷರಾದ ಶ್ರೀ ನಿರಂಜನ ಜಗದ್ಗುರು ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಆರ್ಶೀವಾಚನ ನೀಡಿ 12 ನೇ ಶತಮಾನದಲ್ಲಿ ಬಾಳಿದ ಶರಣರು ತಮ್ಮ ಜೀವನದ ಅನುಭವಗಳನ್ನೇ ತತ್ವಗಳನ್ನಾಗಿಸಿಕೊಂಡು ಕಾಯಕ,ದಾಸೋಹ,ಜಂಗಮ ಸೇವೆಯ ಮೂಲಕ ಜೀವನದ ಸಾರ್ಥಕತೆಯನ್ನು ಕಂಡವರು ಶರಣರು ಅವಿದ್ಯಾವಂತರಾಗಿದ್ದರು ಕೂಡ ಅವರು ರಚಿಸಿದ ವಚನಗಳ ಬಗ್ಗೆ ಅನೇಕ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನ ಪ್ರಬಂದಗಳು ಮಂಡನೆಯಾಗುತ್ತಿವೆ. ಶರಣರು ತಿಳಿಸಿದಂತೆ ಬಡತನದಲ್ಲಿ ಹಸಿವಿನ ಚಿಂತೆ, ಹಸಿವು ನೀಗಿದ ಮೇಲೆ ಬಟ್ಟೆಗಳ ಚಿಂತೆ, ಬಟ್ಟೆ ದೊರೆತಲ್ಲಿ ಬದುಕಿನ ಚಿಂತೆ,ಹಿಗೇ ಜೀವನದಲ್ಲಿ ಒಂದಾಲ್ಲ ಒಂದು ಚಿಂತೆಗಳು ಮಾನವನನ್ನು ಕಾಡುತ್ತಿರುತ್ತವೆ. ಗುರುವಿನ ಮಾರ್ಗದಲ್ಲಿ ಭಗವಂತನ ಚಿಂತೆಯಲ್ಲಿ ನಮ್ಮನ್ನು ನಾವು ತೊಡಗಿಸಿ ಕೊಂಡಲ್ಲಿ  ಮಾತ್ರ ಉತ್ತಮ ಫಲಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ . ನಮ್ಮನ್ನು ಸರ್ವವ್ಯಾಪಿಯಾಗಿರುವ ಭಗವಂತನ ಕಡೆ ಕರೆದುಕೊಂಡು ಹೋಗುವವರು ಶರಣರು ಭಗವಂತನ ಸಂದೇಶವನ್ನು ಜನರಲ್ಲಿ ಮೂಡಿಸುವವರು ಗುರುಗಳು.ನಿತ್ಯ ಭಗವಂತನನ್ನು ಪೂಜಿಸಿ ಸ್ಮರಿಸಿದಲ್ಲಿ ಮಾತ್ರ ಭಗವಂತನ ಅನುಗ್ರಹವನ್ನು ಪಡೆಯುವುದಕ್ಕೆ ಸಾಧ್ಯ .ಭಗವಂತ ನಮ್ಮ ಕಾಣಿಗೆ ಕಾಣದೆ ಇದ್ದರು ಕೂಡ ಎಲ್ಲಾ ಕಡೆ ವ್ಯಾಪಿಸಿಕೊಂಡಿರುವ ಭಗವಂತ ಮಾನವರಲ್ಲಿ ಅತ್ಮರೂಪದಲ್ಲಿ ನೆಲೆಸಿದ್ದರು ಕೂಡ ನಾವು ಭಗವಂತನನ್ನು ಕಾಣುವುದಕ್ಕೆ ಸಾಧ್ಯವಾಗುವುದಿಲ್ಲ ಸರ್ವವ್ಯಾಪಿಯಾಗಿರುವ ಭಗವಂತನನ್ನು ಕಾಣುವ ಕಣ್ಣುಗಳು ಬೇಕು. ಪ್ರಕೃತಿಯಲ್ಲಿ ಮಾನವನಿಗೆ ಅಗತ್ಯವಾಗಿರುವ ಗಾಳಿ ಬೆಳಕು ಬೆಂಕಿ ನೀರು ಭೂಮಿ ಸೇರಿದಂತೆ ಎಲ್ಲಾವನ್ನು ಭಗವಂತ ಸೃಷ್ಟಿಸಿದ್ದಾನೆ  ಪ್ರತಿಯೊಬ್ಬರು ಕೂಡ ಭಗವಂತನು ನೀಡಿದವುಗಳನ್ನು ಸದುಪಯೋಗ ಪಡಿಸಿಕೊಂಡು ಕಾಯಕ ದಾಸೋಹದ ಮೂಲಕ ತಮ್ಮ ದೇಹವನ್ನು ಪವಿತ್ರಗೊಳಿಸಿಕೊಳ್ಳಬೇಕು.ಗುರು ಲಿಂಗ ಜಂಗಮರ ಬಗ್ಗೆ ಮತ್ತು ಅಂಗದ ಮೇಲಿನ ಗುರು ನೀಡಿದ ಲಿಂಗದ ಬಗ್ಗೆ ಭಕ್ತಿ ಮತ್ತು ಗೌರವವನ್ನು ಬೆಳಿಸಿಕೊಳ್ಳಬೇಕು. ಭಕ್ತರು ಶ್ರೀಮಠಕ್ಕೆ ನೀಡಿದ ಕಾಣಿಕೆಗಳನ್ನು ಶ್ರೀಗಳು ಎಂದಿಗೂ ಬಳಸುವುದಿಲ್ಲ  ಮರಳಿ ಸಮಾಜದ ಉದ್ದಾರ ಮಾಡುವುದಕ್ಕಾಗಿಯೇ ವಿನಿಯೋಗಿಸುತ್ತಾರೆ ಎನ್ನುವುದಕ್ಕೆ ಬಳ್ಳಾರಿಯಲ್ಲಿ ವೀರಶೈವ ಸಂಘವನ್ನು ಕಟ್ಟುವುದಕ್ಕೆ ಶ್ರೀಮಠದ ರುದ್ರಮುನೀಶ್ವರತಾತಾನವರು 250 ಬೆಳ್ಳಿಯ ನಾಣ್ಯಗಳನ್ನು ನೀಡಿ ಆರ್ಶೀವದಿಸಿರುವುದೆ ಕಾರಣ .ಗುರು ಮುಟ್ಟಿದ ಹಾಗೂ ನೋಡಿದ ಎಲ್ಲಾವು ಕೂಡ ಪವಿತ್ರವಾಗುವುದರಿಂದ ಗುರುಗಳ ಕೃಪ ದೃಷ್ಟಿಯಲ್ಲಿ ಪ್ರತಿಯೊಬ್ಬರು ಇರಬೇಕು. ನಮ್ಮ ನಾಡಿನ ಅನೇಕ ಮಹಾತ್ಮರು ಶರಣರು ಸಂತರು ತಾವು ಭಗವಂತನ ಸ್ಮರಣೆಯಿಂದ ಪಡೆದ ತಪಸ್ಸಿನ ಶಕ್ತಿಯನ್ನು ಜನರ ಕಲ್ಯಾಣಕ್ಕಾಗಿ ಉದ್ದಾರಕ್ಕಾಗಿ ಮಾತ್ರ ಬಳಸಿರುವುದನ್ನು ನಾವು ಕಾಣಬಹುದು. ನಾಡಿನ ಅನೇಕ ಮಠಗಳು ನಿರಂತರ ಅನ್ನದಾಸೋಹ,ಜ್ಞಾನದಾಸೋಹವನ್ನು ನೀಡುವುದರ ಜೊತೆಗೆ ನಮ್ಮ ಪೂರ್ವಿಕರು ನೀಡಿದ ಸಂಸ್ಕಾರ ಪರಂಪರೆ ಗೋವುಗಳನ್ನು  ಸಂರಕ್ಷಿಸುವ ಕಾರ್ಯವನ್ನು ಮಠಗಳಲ್ಲಿ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.

news_1786361315_0_774.webp

 


ಸಿಂಧನೂರು ಶಾಸಕರಾದ ಹಂಪನಗೌಡ ಬಾದರ್ಲಿ ಮಾತನಾಡಿ. ಈ ಭಾಗದಲ್ಲಿನ ಶ್ರೀ ಮಠಗಳು ಜನರಿಗೆ ಬಸವತತ್ವದಡಿಯಲ್ಲಿ ಭಕ್ತರಿಗೆ ಸನ್ಮಾರ್ಗವನ್ನು ತೊರುತ್ತ ಬಂದಿವೇ.1992 ರಲ್ಲಿ ತುಂಗಭದ್ರ ನದಿಯಲ್ಲಿ ನೆರಹಾವಳಿ ಬಂದುಈ ಭಾಗದನೇಕ ಗ್ರಾಮಗಳಿಗೆ ನದಿಯ ನೀರು ನುಗ್ಗಿ ಜನರು ಸಂಕಷ್ಟದಲ್ಲಿದ ಸಮಯದಲ್ಲಿ ಚೀಕಲಪರ್ವಿ ಮಠದ ಶ್ರೀಗಳು ಜನರಿಗೆ ಆಶ್ರಯವನ್ನು ನೀಡಿ ಅವರ ಬದುಕಿನಲ್ಲಿ ಧರ್ಯವನ್ನು ತುಂಬಿ.ಮುನ್ನಡೆಸಿಮರಳಿ ಹೊಸಬದುಕನ್ನು ಕಟ್ಟಿಕೊಳ್ಳುವುದಕ್ಕೆ ಪ್ರೇರಣೆ ನೀಡಿ ಅವಕಾಶಮಾಡಿಕೊಟ್ಟಿರುವುದನ್ನು ಯಾರು ಕೂಡ ಮರೆಯುವಂತಿಲ್ಲ. ರಾಜ್ಯದಲ್ಲಿನ ವೀರಶೈವ ಲಿಂಗಾಯತ ಮಠಗಳು ಜನರಿಗೆ ಬೇದಭಾವವಿಲ್ಲದೆ  ಜ್ಞಾನ ದಾಸೋಹ,ಅನ್ನದಾಸೋಹ  ಶಿಕ್ಷಣವನ್ನು ನೀಡಿ ಉದ್ದರಮಾಡುತ್ತ ಬಂದಿವೇ. ಶ್ರೀಮಠದ ಪೀಠಾಧಿಪತಿಗಳು ತಮ್ಮ ಮಠದ ಪರಂಪರೆಯನ್ನು ಉಳಿಸಿಕೊಂಡುಹೋಗುವುದರಜೊತೆಗೆ  ಸಾಮಾಜಿಕ ಧಾರ್ಮಿಕ ಕಾರ್ಯಗಳ ಮೂಲಕ ಭಕ್ತರ ಹೃದಯವನ್ನು ತುಂಬಿಕೊಂಡಿದ್ದಾರೆ ಎಂದು ತಿಳಿಸಿದರು.
ಮೂರುಸಾವಿರ ಮಠ ಹುಬ್ಬಳ್ಳಿಯ ಶ್ರೀ ನಿರಂಜನ ಜಗದ್ಗುರು ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳನ್ನು ಸುಮಂಗಲಿಯರು ಕುಂಭ ಮತ್ತು ಕಳಸದೊಂದಿಗೆ ಚೀಕಲಪರ್ವಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಗ್ರಾಮದ ಭಕ್ತರು  ಶ್ರೀಮಠದವರೆಗೆ ಬರಮಾಡಿಕೊಂಡರು. ನಂತರ ಶ್ರೀಮಠದವತಿಯಿಂದ ಶ್ರೀಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸುವರ್ಣಗಿರಿ ವಿರಕ್ತಮಠ ಒಳಬಳ್ಳಾರಿಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಬಸವಲಿಂಗ ಮಹಾಸ್ವಾಮಿಗಳು ಶ್ರೀ ಚರಣಗಿರಿ ಸಂಸ್ಥಾನಮಠ ಹಾಲ್ವಿಯ ಶ್ರೀ ಅಭಿನವ ಮಹಾಂತ ಮಹಾಸ್ವಾಮಿಗಳುಶ್ರೀಮಠದ ಶ್ರೀ  ಸದಾಶಿವ ಮಹಾಸ್ವಾಮಿಗಳು  ಸೋಮಶೇಖರ ಮಠ ಮುನವಳ್ಳಿಯ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು. ಸುವರ್ಣಗಿರಿ ವಿರಕ್ತಮಠ ಯದ್ಧಲದೊಡ್ಡಿಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು  ಸುವರ್ಣಗಿರಿ ವಿರಕ್ತಮಠ ಅಡವಿ ಅಮರೇಶ್ವರ ಮಠದ ಶ್ರೀ ತೋಂಟದಾರ್ಯ ಮಹಾಸ್ವಾಮಿಗಳು ಆರ್ಶೀವಾಚನ ನೀಡಿದರು.
ಶ್ರೀ ಮಹಾಂತ ರುದ್ರಮುನೀಶ್ವರ  ಪುರಾಣ ಪ್ರವಚನವನ್ನು ಶ್ರೀಶಿವಾಚಾರ್ಯ ಶಾಸ್ತಿçಗಳು ಗಿಣಿವಾರ ರವರಿಂದ ಹಾಗೂ ಸಂಗೀತ ಗಾಯಾನ ಶ್ರೀ ಅಮರೇಶಸಾಲಿಮಠ ಗಾವಾಯಿಗಳಿಂದ ನಡೆಯಿತು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST