ಬಾಗಲಕೋಟೆ : ಬಾಗಲಕೋಟೆಯಲ್ಲಿ ಭೀಕರವಾದ ದುರಂತ ಸಂಭವಿಸಿದ್ದು ನಿಯಂತ್ರಣ ತಪ್ಪಿ ಟಿಪ್ಪರ್ ಕೃಷ್ಣಾ ನದಿಗೆ ಉರುಳಿ ಬಿದ್ದಿದೆ. ಬಾಗಲಕೋಟೆಯ ಕೊಲ್ಹಾರ ಸೇತುವೆಯಿಂದ ಟಿಪ್ಪರ್ ಒಂದು ನಿಯಂತ್ರಣ ತಪ್ಪಿ ಬಿದ್ದಿದೆ.
ಈ ವೇಳೆ ಮುಳುಗಿದ ಟಿಪ್ಪರ್ ಮೇಲೆ ಕುಳಿತು ಚಾಲಕ ಸಹಾಯಕ್ಕಾಗಿ ಮೊರೆ ಇಟ್ಟಿದ್ದಾನೆ. ತಕ್ಷಣ ತೆಪ್ಪದ ಮೂಲಕ ತೆರಳಿ ಸ್ಥಳೀಯರು ಚಾಲಕನನ್ನು ರಕ್ಷಣೆ ಮಾಡಿದ್ದಾರೆ.
ಘಟನೆ ಬಗ್ಗೆ ತಿಳಿದು ಘಟನಾ ಸ್ಥಳಕ್ಕೆ ಬೀಳಗಿ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೃಷ್ಣಾ ನದಿಯಲ್ಲಿ ಟಿಪ್ಪರ್ ಬಿದ್ದ ವೇಳೆ ಟಿಪ್ಪರ್ ಸಂಪೂರ್ಣವಾಗಿ ಮುಳುಗಿದೆ.
ಈ ವೇಳೆ ಚಾಲಕ ಟಿಪ್ಪರ್ ಮೇಲೆ ಕುಳಿತು ಸಹಾಯಕ್ಕಾಗಿ ಆಂಗಲಾಚಿದ್ದಾನೆ. ಇದನ್ನು ನೋಡಿದ ಸ್ಥಳೀಯರು ತಕ್ಷಣ ತೆಪ್ಪ ತೆಗೆದುಕೊಂಡು ಹೋಗಿ ಚಾಲಕನನ್ನು ರಕ್ಷಣೆ ಮಾಡಿದ್ದಾರೆ.


