LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಮಹಾರಾಷ್ಟ್ರದಲ್ಲಿ ನಕಲಿ ಪನ್ನೀರ್ ಸಂಪೂರ್ಣ ನಿಷೇಧ : 6 ತಿಂಗಳು ಜೈಲು ಶಿಕ್ಷೆ, ₹1 ಲಕ್ಷ ದಂಡ

Advertisement

ಮುಂಬೈ: ಆಹಾರ ಕಲಬೆರಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ ನಕಲಿ (ನಾನ್-ಡೈರಿ) ನಕಲಿ ಪನ್ನೀರ್ ತಯಾರಿಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. 

ಈ ನಿಯಮ ಉಲ್ಲಂಘಿಸಿದವರಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಹಾಗೂ ₹1 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ಈ ನಿರ್ಧಾರ ಕೈಗೊಂಡಿರುವ ಛತ್ತೀಸ್‌ಗಢದ ನಂತರದ ಎರಡನೇ ರಾಜ್ಯ ಮಹಾರಾಷ್ಟ್ರವಾಗಿದೆ.

ಆಹಾರ ಸುರಕ್ಷತಾ ಆಯುಕ್ತ ತುಕಾರಾಂ ಮುಂಧೆ ಹೊರಡಿಸಿರುವ ಆದೇಶದ ಪ್ರಕಾರ, ಅನಲಾಗ್ ಅಥವಾ ನಾನ್-ಡೈರಿ ಪನೀರ್‌ನ ತಯಾರಿಕೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ಸಾಗಣೆ, ಸಗಟು ಹಾಗೂ ಚಿಲ್ಲರೆ ಮಾರಾಟ, ವಿತರಣೆ ಮತ್ತು ಮಾರಾಟಕ್ಕೆ ಒದಗಿಸುವ ಎಲ್ಲ ಚಟುವಟಿಕೆಗಳಿಗೆ ರಾಜ್ಯಾದ್ಯಂತ ನಿಷೇಧ ಹೇರಲಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಅಡಿಯಲ್ಲಿ ಅಪರಾಧದ ತೀವ್ರತೆಗೆ ಅನುಗುಣವಾಗಿ 6 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ₹1 ಲಕ್ಷದವರೆಗೆ ದಂಡ ವಿಧಿಸಬಹುದು. 

ಕಲಬೆರಕೆಯ ಆಹಾರ ಸೇವನೆಯಿಂದ ಯಾರಾದರೂ ಮೃತಪಟ್ಟರೆ, ಜೀವಾವಧಿ ಶಿಕ್ಷೆ ಹಾಗೂ ಕನಿಷ್ಠ ₹10 ಲಕ್ಷ ದಂಡ ವಿಧಿಸುವ ಅವಕಾಶವೂ ಇದೆ.

ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA), ಅನಲಾಗ್ ಪನೀರ್ ಅನ್ನು ನಿಜವಾದ ಹಾಲಿನ ಪನೀರ್ ಎಂದು ಮಾರಾಟ ಮಾಡುವುದು ಗ್ರಾಹಕರನ್ನು ತಪ್ಪುದಾರಿಗೆಳೆಯುವ ಅನ್ಯಾಯದ ವ್ಯಾಪಾರ ಪದ್ಧತಿ ಎಂದು ಎಚ್ಚರಿಕೆ ನೀಡಿದೆ.

ಇಂತಹ ಕೃತ್ಯದಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ.

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಐರ್ಯಲೆಂಡ್‌ಗೆ ೩೦೦ ರನ್‌ಗಳ ಗೆಲುವಿನ ಗುರಿಶ್ರೀಲಂಕಾ ಇಲೆವೆನ್ ಉತ್ತಮ ಮೊತ್ತಕಳಸಕೊಪ್ಪ ಸೇರಿದಂತೆ 8 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮ: ಜೆ ಟಿ ಪಾಟೀಲಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಕೋಟಿ ಕೋಟಿ ಹಣ ವಂಚನೆ ಕೇಸ್ : ಶಿವಾನಂದ ನೀಲಣ್ಣವರ ಇಡಿ ರೇಡ್ಹಾಡ ಹಾಗಲೇ ಗುಂಡಿಕ್ಕಿ ಕಾಂಗ್ರೆಸ್ ಮುಖಂಡ ಬರ್ಬರ ಹತ್ಯೆ ಆಗಸ್ಟ್ 15ವರೆಗೆ ಖಾತೆ ಹಂಚಿಕೆಗೆ ಕಾಲಾವಕಾಶ ಇದೆ : ಡಿ.ಕೆ.ಶಿವಕುಮಾರ್ಆಗಸ್ಟ್ 13 ರಂದು ಅಧಿವೇಶನ,14 ರಂದು ನೂತನ ಉಪಸಭಾಪತಿಗಳ ಆಯ್ಕೆ : ಡಿ.ಕೆ.ಶಿವಕುಮಾರ್ಹುತಾತ್ಮ ಯೋಧ ಅಂಗಡಿ ಮಂಜುನಾಥ ನಾಯಕ ಸಾದಾಪುರ ಪುಣ್ಯ ಸ್ಮರಣೆ​ಶ್ರೀ ಕ್ಷೇತ್ರ ಪರಕನಹಟ್ಟಿಯಿಂದ ಹುಬ್ಬಳ್ಳಿಗೆ ಪ್ರಥಮ ವರ್ಷದ ಸಿದ್ಧಾರೂಢ ಪಾದಯಾತ್ರೆ: ಭಕ್ತಿಪರವಶತೆಯಿಂದ ಚಾಲನೆಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ  : ಶಾಸಕ ಜಿ.ಹಂಪಯ್ಯ ನಾಯಕ ಸಾಹುಕಾರ