LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಪೊಲೀಸ್ ಪರೀಕ್ಷೆ ಬರೆದು ಬರುವಾಗ ದುರಂತ : ಟ್ರ್ಯಾಕ್ಟರ್ ಡಿಕ್ಕಿಯಾಗಿ ಯುವಕ ಸಾವು 

Advertisement

ಹಾಸನ: ಖಾಕಿ ಸಮವಸ್ತ್ರ ಧರಿಸಿ ಪೊಲೀಸ್ ಅಧಿಕಾರಿಯಾಗಬೇಕೆಂಬ ಕಷ್ಟಪಟ್ಟು ಪರೀಕ್ಷೆ ಬರೆದು ಮನೆಗೆ ತೆರಳುತ್ತಿದ್ದ ಯುವಕನೊಬ್ಬ ಭೀಕರ ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಂಡಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಾಗನೂರು ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.ಮೃತ ಯುವಕನನ್ನು 20 ವರ್ಷ ಪ್ರಾಯದ ಸಾಗರ್‌ಗೌಡ ಎಂದು ಗುರುತಿಸಲಾಗಿದೆ.

ಪರೀಕ್ಷೆ ಮುಗಿಸಿ ಬರುವಾಗ ಸಂಭವಿಸಿದ ದುರಂತ

ಹಾಸನದಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದ ಸಾಗರ್‌ಗೌಡ, ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುವ ಅಪಾರ ಆಸೆಯನ್ನು ಹೊಂದಿದ್ದ. ಈ ಹಿನ್ನೆಲೆಯಲ್ಲಿ ಭಾನುವಾರ ನಡೆದಿದ್ದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದ. ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದು ಮುಗಿಸಿದ ನಂತರ, ತಮ್ಮ ದ್ವಿಚಕ್ರ ವಾಹನದಲ್ಲಿ (ಬೈಕ್) ಮನೆಗೆ ವಾಪಸ್ ಪಯಣಿಸುತ್ತಿದ್ದ. ಈ ವೇಳೆ ಶೆಟ್ಟಿಹಳ್ಳಿ ರಸ್ತೆಯ ಬಳಿ ಎದುರಿನಿಂದ ಬಂದ ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಅತ್ಯಂತ ಭೀಕರವಾದ ಡಿಕ್ಕಿ ಸಂಭವಿಸಿದೆ

ಅಪಘಾತದ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಸಾಗರ್‌ಗೌಡ ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಮಗನನ್ನು ಕಷ್ಟಪಟ್ಟು ಓದಿಸಿ ಪೊಲೀಸ್ ಅಧಿಕಾರಿಯನ್ನಾಗಿ ನೋಡಬೇಕು ಎಂಬ ಕನಸು ಹೊತ್ತಿದ್ದ ಹೆತ್ತವರಿಗೆ ಈ ದುರಂತ ಸುದ್ದಿ ಸಿಡಿಲಿನಂತೆ ಎರಗಿದೆ.

ಮಗನ ಅಗಲಿಕೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ಭೀಕರ ಸನ್ನಿವೇಶದ ದೃಶ್ಯಗಳು ಸಮೀಪದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಐರ್ಯಲೆಂಡ್‌ಗೆ ೩೦೦ ರನ್‌ಗಳ ಗೆಲುವಿನ ಗುರಿಶ್ರೀಲಂಕಾ ಇಲೆವೆನ್ ಉತ್ತಮ ಮೊತ್ತಕಳಸಕೊಪ್ಪ ಸೇರಿದಂತೆ 8 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮ: ಜೆ ಟಿ ಪಾಟೀಲಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಕೋಟಿ ಕೋಟಿ ಹಣ ವಂಚನೆ ಕೇಸ್ : ಶಿವಾನಂದ ನೀಲಣ್ಣವರ ಇಡಿ ರೇಡ್ಹಾಡ ಹಾಗಲೇ ಗುಂಡಿಕ್ಕಿ ಕಾಂಗ್ರೆಸ್ ಮುಖಂಡ ಬರ್ಬರ ಹತ್ಯೆ ಆಗಸ್ಟ್ 15ವರೆಗೆ ಖಾತೆ ಹಂಚಿಕೆಗೆ ಕಾಲಾವಕಾಶ ಇದೆ : ಡಿ.ಕೆ.ಶಿವಕುಮಾರ್ಆಗಸ್ಟ್ 13 ರಂದು ಅಧಿವೇಶನ,14 ರಂದು ನೂತನ ಉಪಸಭಾಪತಿಗಳ ಆಯ್ಕೆ : ಡಿ.ಕೆ.ಶಿವಕುಮಾರ್ಹುತಾತ್ಮ ಯೋಧ ಅಂಗಡಿ ಮಂಜುನಾಥ ನಾಯಕ ಸಾದಾಪುರ ಪುಣ್ಯ ಸ್ಮರಣೆ​ಶ್ರೀ ಕ್ಷೇತ್ರ ಪರಕನಹಟ್ಟಿಯಿಂದ ಹುಬ್ಬಳ್ಳಿಗೆ ಪ್ರಥಮ ವರ್ಷದ ಸಿದ್ಧಾರೂಢ ಪಾದಯಾತ್ರೆ: ಭಕ್ತಿಪರವಶತೆಯಿಂದ ಚಾಲನೆಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ  : ಶಾಸಕ ಜಿ.ಹಂಪಯ್ಯ ನಾಯಕ ಸಾಹುಕಾರ