ಚಾಮರಾಜನಗರದ ಕ್ವಾರಿಯಲ್ಲಿ ಜೀವಕ್ಕೆ ಯಾವುದೇ ಭದ್ರತೆ ಇಲ್ಲಾ ಬೆಟ್ಟದಂತೆ ಗುಡ್ಡೆ ಹಾಕಿದ ಕಲ್ಲುಗಳು ಇನ್ಸೂರೆನ್ಸ್ ಇಲ್ಲದ ಟಿಪ್ಪರ್ ಇಟ್ಟುಕೊಂಡು ಕೆಲಸ ಮಾಡಿಸುತಿದ್ದಾರೆ ಇವರುಗಳ ಲಾಭಕ್ಕೆ ನಮ್ಮ ಗ್ರಾಮ ವ್ಯಕ್ತಿ ಸಾವಗಿದಾನೆ ಎಂದು ಆಕ್ರೋಶ ವ್ಯಕ್ತಿ ಪಡಿಸಿದ ಮೃತನ ಗ್ರಾಮಸ್ಥರು
ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಜ್ಯೋತಿ ಗೌಡನ ಪುರ ಗ್ರಾಮದ ಪಕ್ಕದಲ್ಲಿ ನಡೆಯುತ್ತಿರುವ ಬಂಡಳ್ಳಿ ನಾಗಪ್ಪ ಮಾಲೀಕತ್ವದ ಕ್ವಾರಿಯನ್ನು ಅಯುಬ್ ಖಾನ್, ಅಭಿ, ಹಾಗೂ ನವಾಜ್ ಎಂಬಮೂರು ಜನ ಪಾಲುದಾರರಾಗಿ ನಡೆಸುತ್ತಿರುವ ವೆಂಕಟೇಶ್ವರ ಗ್ರಾನೈಟ್ಸ್ ನಲ್ಲಿ ಮಂಗಳವಾರ ಅವಘಡ ಒಂದು ನಡೆದಿದೆ. ತುಂಬಾ ಎತ್ತರದ ಗುಡ್ಡಕ್ಕೆ ಟಿಪ್ಪರ್ ಚಾಲನೆ ಮಾಡುತ್ತಿದ್ದಾಗ ಟಿಪ್ಪರ್ ಮಗುಚಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ,
ಸಾವನ್ನಪ್ಪಿದವರು ಅಮ್ಮನಪುರ ಗ್ರಾಮದ ದಲಿತ ಜನಾಂಗದ ಶಿವಬಸವ ಎಂದು ತಿಳಿದು ಬಂದಿದೆ .ಇವರಿಗೆ ಪತ್ನಿ ಮಾಲಾ
ಎಂಟನೇ ತರಗತಿ ಓದುತ್ತಿರುವ ವೈಶಾಖಿ ಎಂಬ ಹೆಣ್ಣು ಮಗಳು .ನಾಲ್ಕನೇ ತರಗತಿ ಓದುತ್ತಿರುವ ಸುಪ್ರೀತ್ ಎಂಬ ಗಂಡು ಮಗು ಇದ್ದಾರೆ
ಇದೆಲ್ಲದರ ನಡುವೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇನ್ಸ್ಪೆಕ್ಟರ್ ನವೀನ್ ಹಾಗೂ ಜಯರಾಮು ಇಬ್ಬರೂ ಕ್ವಾರಿ ಮಾಲೀಕರ ಜೊತೆ ಸೇರಿ ಸತ್ತಿರುವ ಶಿವಬಸವ ಅವರ ಜೀವಕ್ಕೆ 30 ಲಕ್ಷ ಬೆಲೆ ತೀರ್ಮಾನ ಮಾಡಿದ್ದಾರೆ .ಅದಲ್ಲದೆ ಶವಸಂಸ್ಕಾರಕ್ಕೆ ಒಂದುಲಕ್ಷ ಕೊಡುವಂತೆ ತೀರ್ಮಾನ ಮಾಡಿದ್ದಾರೆ
ಕಾರಣ ಸತ್ತಿರುವ ವ್ಯಕ್ತಿ ಚಾಲನೆ ಮಾಡುತ್ತಿದ್ದ KA 10 7962 ನಂಬರಿನ ಟಿಪ್ಪರ್ ಗೆ ಇನ್ಷೂರೆನ್ಸ್ ಇಲ್ಲ ಎಂದು ಹೇಳಲಾಗುತ್ತಿದೆ
ಇದನ್ನು ಗಮನಿಸಿ ಸಾರ್ವಜನಿಕರಲ್ಲಿ ಗಲಾಟೆಗಳು ಆಗುತ್ತದೆ ಎಂದು ತಿಳಿದ ಪೊಲೀಸ್ ಪೇದೆ ಪ್ರಳಯಾಂತಕ ಜಯರಾಮ್ ಹಾಗೂ ಇನ್ಸ್ಪೆಕ್ಟರ್ ನವೀನ ಸೇರಿ ಮಾಲೀಕರಿಗೆ ಅನುಕೂಲ ಆಗುವಂತೆ ಮಧ್ಯಸ್ಥಿಕೆ ವಹಿಸಿ 30ಲಕ್ಷ ತೆಗೆದುಕೊಳ್ಳಿ ಎಂದು ಶಿವಬಸವ ಅವರ ಕುಟುಂಬಕ್ಕೆ ಒಪ್ಪಿಸಿದ್ದಾರೆ,
ಒಟ್ಟಾರೆಯಾಗಿ ಜೀವ ಕಳೆದುಕೊಂಡ ಕುಟುಂಬಕ್ಕೆ ನೆರವಾಗಬೇಕಿದ್ದ ಪೊಲೀಸ್ ಇಲಾಖೆ ಈ ಹಣದಾಹಿ ಜಯರಾಮನಿಂದ ಕ್ವಾರಿ ಮಾಲಿಕರಿಗೆ ಸಹಾಯ ಆದದ್ದು ವಿಪರ್ಯಾಸವೇ ಸರಿ ಇದನ್ನು ತಿಳಿದ ಸಾರ್ವಜನಿಕರು ಜಯರಾಮ ಹಾಗೂ ನವೀನ್ ಇಬ್ಬರನ್ನು ಹಿಡಿ ಶಾಪ ಹಾಕುತ್ತಿದ್ದರು ಒಟ್ಟಿನಲ್ಲಿ ಈ ಕ್ವಾರಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಯಾವುದೇ ಸುರಕ್ಷತೆ ಇಲ್ಲ ಹಾಗೂ ಭದ್ರತೆ ಇಲ್ಲ ಇದನ್ನು ಕೇಳುವವರ್ಯಾರು.
ಬಡವರ ಜೀವಕ್ಕೆ ಪೊಲೀಸರ ಸಮಕ್ಷಮದಲ್ಲೇ ಬೆಲೆ ಕಟ್ಟುವುದು ನೋಡಿದರೆ ಮಾಲೀಕರ ಜೊತೆ ಪೊಲೀಸರು ಶಾಮೀಲಾಗಿರುವುದು ಎದ್ದು ಕಾಣುತ್ತಿತ್ತು
ಇನ್ನಾದರೂ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಜೀವ ಕಳೆದುಕೊಂಡ ಕುಟುಂಬಕ್ಕೆ ನ್ಯಾಯ ಕೊಡಿಸುವರೇ ಎಂದು ಸಾರ್ವಜನಿಕರಲ್ಲಿ ಪ್ರಶ್ನೆ ಕಾಡುತಿದೆ,
ವರದಿ :ಸ್ವಾಮಿ ಬಳೇಪೇಟೆ

