Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಮತದಾರರು ಸಹಕರಿಸಿ : ತಹಸೀಲ್ದಾರ್ ಕುಂಇ ಅಹಮದ್

Advertisement

 

ತುರುವೇಕೆರೆ : ಜೂನ್ 30 ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026 ಆರಂಭವಾಗಲಿದೆ. ಒಂದು ತಿಂಗಳ ಕಾಲ ಮತಗಟ್ಟೆ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಲಿದ್ದು, ಮತದಾರರು, ನಾಗರೀಕರು ಸಹಕಾರ ನೀಡಬೇಕೆಂದು ತಹಸೀಲ್ದಾರ್ ಕುಂಇ ಅಹಮದ್ ಮನವಿ ಮಾಡಿದರು. 

ತಾಲೂಕು ಕಛೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 224 ಮತಗಟ್ಟೆಗಳಿದ್ದು, 224 ಮತಗಟ್ಟೆ ಅಧಿಕಾರಿಗಳು ಹಾಗೂ 23 ಮೇಲ್ವಿಚಾರಕರು ಈ ಪರಿಷ್ಕರಣೆ ಕಾರ್ಯದಲ್ಲಿ ತೊಡಗಲಿದ್ದಾರೆ. ಜೂನ್ 30 ರಿಂದ ಜುಲೈ 29 ರವರೆಗೆ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹ, ಆಗಸ್ಟ್ 05 ರಂದು ಮತದಾರರ ಕರಡುಪಟ್ಟಿ ಪ್ರಕಟ, ಆಗಸ್ಟ್ 05 ರಿಂದ ಸೆಪ್ಟಂಬರ್ 04 ರವರೆಗೆ ಆಕ್ಷೇಪಣೆಗಳಿಗೆ ಅವಕಾಶ, ಆಗಸ್ಟ್ 05 ರಿಂದ ಅಕ್ಟೋಬರ್ 03 ರವರೆಗೆ ಆಕ್ಷೇಪಣೆ ವಿಚಾರಣೆ ಮತ್ತು ವಿಲೇವಾರಿ ಹಾಗೂ ಅಕ್ಟೋಬರ್ 07 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು. 

ಜೂನ್ 30 ರಿಂದ ಮತಗಟ್ಟೆ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯ ಮಾಹಿತಿಯ ಗಣತಿ ನಮೂನೆ ನೀಡಲಿದ್ದು, ಮತದಾರರು ಕಡ್ಡಾಯವಾಗಿ ನಮೂನೆಯನ್ನು ಭರ್ತಿ ಮಾಡಿ ಅಧಿಕಾರಿಗಳಿಗೆ ನೀಡಬೇಕಿದೆ. ನಮೂನೆಯ ದ್ವಿಪ್ರತಿಯನ್ನು ನೀಡಲಿದ್ದು ಒಂದು ಪ್ರತಿಯನ್ನು ಸ್ವೀಕೃತಿಯಾಗಿ ಮತದಾರರು ತಮ್ಮಲ್ಲೇ ಉಳಿಸಿಕೊಳ್ಳಬೇಕು. 18 ವರ್ಷ ಮೇಲ್ಟಟ್ಟವರು, ಮನೆಯ ಮುಖ್ಯಸ್ಥರು ನಮೂನೆಗೆ ಸಹಿ ಮಾಡಬಹುದಾಗಿದೆ. ಬಿಎಲ್ಒಗಳು ಪ್ರತಿ ಮತದಾರರ ಮನೆಗೆ ಮೂರು ಬಾರಿ ಭೇಟಿ ಮಾಡಲಿದ್ದು, ಮಾಹಿತಿ ನೀಡಬಹುದಾಗಿದೆ. ಮತದಾರರು ಮೂರೂ ಬಾರಿಯೂ ಮತದಾರರು ಲಭ್ಯವಿಲ್ಲದಿದ್ದಲ್ಲಿ ಆ ಮತದಾರರನ್ನು ಗೈರು, ವರ್ಗ, ಮರಣ,ನಕಲು ಈ ವರ್ಗಕ್ಕೆ ಸೇರ್ಪಡೆ ಮಾಡಲಾಗುವುದು. 2026 ರ ಅಕ್ಟೋಬರ್ 01 ಕ್ಕೆ 18 ವರ್ಷ ಪೂರ್ಣಗೊಂಡ ಮತದಾರರನ್ನು ಸೇರ್ಪಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು. 

ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ 1,83,547 ಮಂದಿ (90,480 ಪುರುಷರು, 93,067 ಮಹಿಳೆಯರು) ಮತದಾರರಿದ್ದು, ಈವರೆಗೆ ಶೇ. 97 ರಷ್ಟು ಮಂದಿಯನ್ನು ಮ್ಯಾಪಿಂಗ್ ಮಾಡಲಾಗಿದೆ. ಕ್ಷೇತ್ರದಲ್ಲಿ 731 ವಿಐಪಿ, ವಿವಿಐಪಿ ಮತದಾರರೆಂದು ಗುರುತಿಸಲಾಗಿದೆ. 2960 ಮಂದಿ ವಿಶೇಷಚೇತನ ಮತದಾರರು, 2234 ಹಿರಿಯ ನಾಗರೀಕ ಮತದಾರರು, 4249 ಯುವ ಮತದಾರರಿದ್ದಾರೆ. ಮೃತಪಟ್ಟವರ ಹೆಸರು ಕೈಬಿಡುವ, 18 ವರ್ಷ ಮೇಲ್ಪಟ್ಟವರ ಸೇರ್ಪಡೆಗೊಳಿಸುವ, ಸ್ಥಳಾಂತರಗೊಂಡ ಮತದಾರರ ಪರಿಷ್ಕರಣೆ ಆಗಲಿದೆ. ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಗೆ ಮನೆಮನೆಗೆ ಭೇಟಿ ನೀಡುವ ಅಧಿಕಾರಿಗಳಿಗೆ ಚುನಾವಣಾ ಆಯೋಗ ನಿರ್ದಿಷ್ಟಪಡಿಸಿರುವ 12 ದಾಖಲೆಗಳಲ್ಲಿ ಒಂದನ್ನು ಘೋಷಣಾ ನಮೂನೆಯೊಂದಿಗೆ ಸ್ವಯಂ ದೃಢೀಕರಿಸಿ ಸಲ್ಲಿಸಬೇಕು ಎಂದರು.

ವರದಿ : ಗಿರೀಶ್ ಕೆ ಭಟ್

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST