Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಐತಿಹಾಸಿಕ ದಾಖಲೆ ಬರೆದ ವಿಟಿಯು : ಪರೀಕ್ಷೆ ಮುಗಿದ ಕೇವಲ ಹತ್ತೇ ಹತ್ತು ನಿಮಿಷದಲ್ಲಿ ರಿಸಲ್ಟ್ ಬಿಡುಗಡೆ

Advertisement

ಬೆಳಗಾವಿ : ಕರ್ನಾಟಕದ ಹೆಮ್ಮೆಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಶಿಕ್ಷಣ ಲೋಕದಲ್ಲೇ ಜಾಗತಿಕ ಮಟ್ಟದ ಮಹಾ ಇತಿಹಾಸ ಸೃಷ್ಟಿಸಿದೆ.

ಬಿಇ/ಬಿಟೆಕ್ ಅಂತಿಮ ಸೆಮಿಸ್ಟರ್ ಪರೀಕ್ಷೆ ಮುಗಿದ ಕೇವಲ ಹತ್ತೇ ಹತ್ತು ನಿಮಿಷದಲ್ಲಿ ರಿಸಲ್ಟ್ ಬಿಡುಗಡೆ ಮಾಡಿ ವಿಟಿಯು ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಹಾಗೂ ಕುಲಸಚಿವ ಪ್ರೊ.ಯು.ಜೆ.ಉಜ್ವಲ್ ಜಂಟಿಯಾಗಿ ಈ ಫಲಿತಾಂಶ ಬಿಡುಗಡೆ ಮಾಡಿದ್ದಾರೆ.

ಐತಿಹಾಸಿಕ ರಿಸಲ್ಟ್‌ನ ಟಾಪ್ ಮುಖ್ಯಾಂಶಗಳು

ಸೂಪರ್ ಫಾಸ್ಟ್ ವೇಗ: ಶುಕ್ರವಾರ ಸಂಜೆ 5.30ಕ್ಕೆ ಪರೀಕ್ಷೆ ಮುಕ್ತಾಯವಾಗಿದ್ದು, ಕೇವಲ 10 ನಿಮಿಷಗಳ ಅಂತರದಲ್ಲಿ, ಅಂದರೆ ಸಂಜೆ 5.40ಕ್ಕೇ ರಿಸಲ್ಟ್ ಔಟ್ ಆಗಿದೆ!

ಮೊಬೈಲ್‌ಗೇ ಬಂತು ರಿಸಲ್ಟ್: ಪರೀಕ್ಷೆ ಮುಗಿಸಿ ವಿದ್ಯಾರ್ಥಿಗಳು ಇನ್ನು ಮನೆಗೆ ತಲುಪುವ ಮುನ್ನವೇ ಒಟ್ಟು 56,192 ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ನೇರವಾಗಿ ಫಲಿತಾಂಶ ಸಂದೇಶ ಕಳುಹಿಸಲಾಗಿದೆ.

ಬಂಪರ್ ಪಾಸ್: ಈ ಬಾರಿ ವಿಟಿಯು ಬರೋಬ್ಬರಿ ಶೇಕಡಾ 99.98 ರಷ್ಟು ಅದ್ಭುತ ಪಾಸ್ ಪರ್ಸೆಂಟೇಜ್ ಸಾಧನೆ ಮಾಡಿದೆ.

8 ದಿನ ಮುಂಚಿತವಾಗಿ ಮುಕ್ತಾಯ: ಡಿಜಿಟಲ್ ಮೌಲ್ಯಮಾಪನ ಪ್ರಕ್ರಿಯೆ ಹಾಗೂ ಅತ್ಯಾಧುನಿಕ ಸಾಫ್ಟ್‌ವೇರ್ ತಂತ್ರಜ್ಞಾನದ ಬಳಕೆಯಿಂದಾಗಿ, ಸಂಪೂರ್ಣ ಪ್ರಕ್ರಿಯೆಯನ್ನು 8 ದಿನಗಳ ಮುಂಚಿತವಾಗಿಯೇ ಮುಗಿಸಿ ವಿಟಿಯು ತನ್ನದೇ ಹಳೆಯ ದಾಖಲೆಗಳನ್ನು ಧೂಳೀಪಟ ಮಾಡಿದೆ.

ವಿದ್ಯಾರ್ಥಿ ಸ್ನೇಹಿ ನಿರ್ಧಾರ: “ಅಂತಿಮ ವರ್ಷದ ವಿದ್ಯಾರ್ಥಿಗಳು ಉದ್ಯೋಗ ಮತ್ತು ಉನ್ನತ ಶಿಕ್ಷಣ ಪಡೆಯಲು ತಡವಾಗಬಾರದು ಎಂಬ ಕಾರಣಕ್ಕೆ ಈ ಶೀಘ್ರ ಕ್ರಮ” ಎಂದು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ತಿಳಿಸಿದ್ದಾರೆ.

ವಿಟಿಯು ಫಲಿತಾಂಶದ ವೇಗದ ಇತಿಹಾಸ

2023: 43,662 ವಿದ್ಯಾರ್ಥಿಗಳ ಫಲಿತಾಂಶ -> ಪರೀಕ್ಷೆ ಮುಗಿದ 2 ದಿನಗಳಲ್ಲಿ ಪ್ರಕಟ.

2024 ಮೇ: 37,011 ವಿದ್ಯಾರ್ಥಿಗಳ ಫಲಿತಾಂಶ -> ಪರೀಕ್ಷೆ ಮುಗಿದ 3 ಗಂಟೆಗಳಲ್ಲಿ ಪ್ರಕಟ.

2025 ಮೇ: 50,321 ವಿದ್ಯಾರ್ಥಿಗಳ ಫಲಿತಾಂಶ -> ಪರೀಕ್ಷೆ ಮುಗಿದ 1 ಗಂಟೆಯೊಳಗೆ ಪ್ರಕಟ.

2026 ಮೇ (ಈಗ): 56,192 ವಿದ್ಯಾರ್ಥಿಗಳ ಫಲಿತಾಂಶ -> ಪರೀಕ್ಷೆ ಮುಗಿದ ಕೇವಲ 10 ನಿಮಿಷದಲ್ಲಿ ಪ್ರಕಟಿಸಿ ವಿಶ್ವದಾಖಲೆ

ರಿಸಲ್ಟ್ ಚೆಕ್ ಮಾಡುವುದು ಹೇಗೆ?: ವಿದ್ಯಾರ್ಥಿಗಳು ವಿಟಿಯು ಅಧಿಕೃತ ವೆಬ್‌ಸೈಟ್ https://results.vtu.ac.in/ ಗೆ ಭೇಟಿ ನೀಡಿ ಫಲಿತಾಂಶ ನೋಡಬಹುದು.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST